ಸಮಂತಾ ಗೆ ಸಿಕ್ಕ ಅವಕಾಶವನ್ನು ಕಿತ್ತುಕೊಂಡರೇ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟಿ. ಹಳೆಯ ನಟಿಯರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ ರಶ್ಮಿಕಾ.

Recommended Video

ದಾರವಾಹಿಯಿಂದ ಸಿನಿಮಾ ವರೆಗೆ ಶತಮರ್ಷನ್ ಅವಿನಾಶ್ ಪಯಣ ಹೇಗಿತ್ತು | Shatamarshan Avinash | Filmibeat Kannada

ರಶ್ಮಿಕಾ ಯಾವ ಮಟ್ಟಿಗೆ ಖ್ಯಾತರಾಗಿದ್ದಾರೆಂದರೆ ಅನುಭವಿ ನಟಿ ಸಮಂತಾ ಅವಕಾಶವನ್ನೇ ಕಿತ್ತುಕೊಂಡಿದ್ದಾರಂತೆ. ಹಾಗೆಂದು ತೆಲುಗು ಮಾಧ್ಯಮಗಳೇ ವರದಿ ಮಾಡುತ್ತಿವೆ.

ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆಯಾಗಿ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿಯೇ ಆದರೆ ಈ ಸಿನಿಮಾಕ್ಕೆ ನಾಯಕಿಯಾಗಿ ಮೊದಲಿಗೆ ಸಮಂತಾ ಅಕ್ಕಿನೇನಿ ಅವರನ್ನು ಆಯ್ಕೆ ಮಾಡಲಾಗಿತ್ತಂತೆ ನಂತರ ಆ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಬಂದಿದ್ದಾರೆ.

ಸಮಂತಾ ಬದಲಿಗೆ ರಶ್ಮಿಕಾ ಆಯ್ಕೆ?

ಸಮಂತಾ ಬದಲಿಗೆ ರಶ್ಮಿಕಾ ಆಯ್ಕೆ?

ಪುಷ್ಪಾ ಸಿನಿಮಾ ನಿರ್ದೇಶಕ ಸುಕುಮಾರನ್ ಮೊದಲಿಗೆ ನಾಯಕಿಯಾಗಿ ಸಮಂತಾ ಅವರನ್ನು ಆಯ್ಕೆ ಮಾಡಿದ್ದರಂತೆ. ನಂತರ ನಾಯಕಿ ಪಾತ್ರಕ್ಕೆ ಸಮಂತಾಗಿಂತಲೂ ರಶ್ಮಿಕಾ ಹೆಚ್ಚು ಸೂಕ್ತ ಎನಿಸಿದ ಕಾರಣ ರಶ್ಮಿಕಾ ಅವರನ್ನು ಆಯ್ಕೆ ಮಾಡಿದರಂತೆ!

ಸಮಂತಾ ಅವರೇ ಒಲ್ಲೆ ಎಂದರೆ?

ಸಮಂತಾ ಅವರೇ ಒಲ್ಲೆ ಎಂದರೆ?

ಇನ್ನೊಂದು ಸುದ್ದಿಯ ಪ್ರಕಾರ, ಸಮಂತಾ ಅವರೇ ಸುಕುಮಾರನ್ ಅವರ ಆಫರ್ ಅನ್ನು ರಿಜೆಕ್ಟ್ ಮಾಡಿದರಂತೆ. ಸುಕುಮಾರನ್ ನಿರ್ದೇಶನದ ರಂಗಸ್ಥಳಂ ಸಿನಿಮಾದಲ್ಲಿ ಈಗಾಗಲೇ ಹಳ್ಳಿ ಹುಡುಗಿ ಪಾತ್ರವನ್ನು ಸಮಂತಾ ಮಾಡಿದ್ದರು, ಹಾಗಾಗಿ ಮತ್ತೆ ಅದೇ ಮಾದರಿಯ ಪಾತ್ರವನ್ನು ಮಾಡಲು ಸಮಂತಾ ಒಪ್ಪಲಿಲ್ಲ ಎನ್ನಲಾಗುತ್ತಿದೆ.

ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿನೆ

ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿನೆ

ಸಮಂತಾ ಹಾಗೂ ಅಲ್ಲು ಅರ್ಜುನ್ ಈಗಾಗಲೇ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇನ್ನು ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರನ್ ಜೊತೆಗೆ ರಂಗಸ್ಥಳ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

ರಶ್ಮಿಕಾ ಮಂದಣ್ಣ ಅಭಿನಯದ ಏಳನೇ ತೆಲುಗು ಸಿನಿಮಾ

ರಶ್ಮಿಕಾ ಮಂದಣ್ಣ ಅಭಿನಯದ ಏಳನೇ ತೆಲುಗು ಸಿನಿಮಾ

ರಶ್ಮಿಕಾ ಮಂದಣ್ಣ ಅವರು ಪುಷ್ಪಾ ಸಿನಿಮಾದ ನಾಯಕಿಯಾಗಿದ್ದು, ಈ ವರೆಗೆ ಮಾಡಿದ ಪಾತ್ರಗಳಿಗಿಂತಲೂ ಭಿನ್ನವಾದ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಪುಷ್ಪಾ ಸಿನಿಮಾವು ರಶ್ಮಿಕಾ ನಟಿಸುತ್ತಿರುವ ಏಳನೇ ತೆಲುಗು ಸಿನಿಮಾ. ಅವರ ಅಭಿನಯದ ಕನ್ನಡ ಸಿನಿಮಾ ಪೊಗರು ಬಿಡುಗಡೆಗೆ ತಯಾರಾಗಿದೆ.

More from Filmibeat

English summary
Pushpa movie first offered to Samantha after she rejected the project Rashmika Mandanna bagged it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X