For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ ಚಿತ್ರಕ್ಕೆ ಸಮಂತಾ ಸಜ್ಜು: ಮುಂಬೈನಲ್ಲಿ ಹೊಸ ಮನೆ ಖರೀದಿ?

  |

  ನಟಿ ಸಮಂತಾ ಅವರು ಪತಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಹೊಂದಿದ ಬಳಿಕ ಸಿನಿಮಾರಂಗದಲ್ಲಿ ಹೆಚ್ಚಾಗಿ ಸಕ್ರಿಯ ಆಗುತ್ತಿದ್ದಿದ್ದಾರೆ. ಇನ್ನು ಸಮಂತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿದೆ.

  ಸಮಂತಾಗೆ ಬಾಲಿವುಡ್‌ನಿಂದ ದೊಡ್ಡ ದೊಡ್ಡ ಆಫರ್‌ಗಳು ಬರುತ್ತಿವೆ. ಸಮಂತಾ ಕೂಡ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನುವ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಲೇ ಇವೆ. ಅದಕ್ಕೀಗ ನಟಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.

  ಸಮಂತಾ ಕೇವಲ ಚಿತ್ರದ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನುವುದು ಮಾತ್ರವಲ್ಲ. ಸಮಂತಾ ಬಾಲಿವುಡ್‌ ಚಿತ್ರಗಳಿಗಾಗಿ ಮುಂಬೈನಲ್ಲೇ ಉಳಿಯುವ ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ.

  ಮುಂಬೈನಲ್ಲಿ ಸಮಂತಾ ಹೊಸ ಮನೆ ಖರೀದಿ!

  ಮುಂಬೈನಲ್ಲಿ ಸಮಂತಾ ಹೊಸ ಮನೆ ಖರೀದಿ!

  ನಟಿ ಸಮಂತಾ ಬಾಲಿವುಡ್‌ಗೆ ಹಾರಲಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ರೆಕ್ಕೆ-ಪುಕ್ಕ ಬೆಳೆದಿದ್ದು ಅವರ ವಿವಾಹ ವಿಚ್ಚೇದನದ ಬಳಿಕ. ವಿಚ್ಚೇದನದ ಬಳಿಕ ಸಮಂತಾ ಹೆಚ್ಚೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಾಗಿ ಬಾಲಿವುಡ್‌ ಚಿತ್ರಗಳ ಕಥೆಗಳನ್ನೇ ಕೇಳುತ್ತಿದ್ದಾರಂತೆ.

  ಇದರ ಜೊತೆಗೆ ಸಮಂತಾ ಮುಂಬೈನಲ್ಲಿ ಸೆಟಲ್ ಆಗುತ್ತಾರೆ ಎನ್ನುವ ಬಗ್ಗೆಯೂ ಸುದ್ದಿ ಹಬ್ಬಿದೆ. ವಿಚ್ಚೇದನ ಬಳಿಕ ಸಮಂತಾ ಮುಂಬೈಗೆ ಹಾರುದ್ದರು. ಇನ್ನೂ ಬಾಲಿವುಡ್‌ನಿಂದ ಹೆಚ್ಚೆಚ್ಚು ಆಫರ್‌ಗಳು ಬರುತ್ತಿರುವ ಕಾರಣ, ಸಮಂತಾ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರಂತೆ. ಇನ್ನು ಮುಂದೆ ಸಮಂತಾ ಹೆಚ್ಚಾಗಿ ಮುಂಬೈನಲ್ಲಿ ವಾಸ ಮಾಡಲಿದ್ದಾರಂತೆ.

  ಬಾಲಿವುಡ್ ಪಯಣದ ಬಗ್ಗೆ ಸಮಂತಾ ಮಾತು!

  ಬಾಲಿವುಡ್ ಪಯಣದ ಬಗ್ಗೆ ಸಮಂತಾ ಮಾತು!

  ನಟಿ ಸಮಂತಾ ಕೊನೆಗೂ ತಮ್ಮ ಬಾಲಿವುಡ್‌ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಬಾಲಿವುಡ್ ಚೊಚ್ಚಲ ಚಿತ್ರದ ಬಗ್ಗೆ ಸಮಂತಾ ಅವರನ್ನು ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಸಮಂತಾ, "ಯಾಕೆ ಇಲ್ಲ, ಸರಿಯಾದ ಸ್ಕ್ರಿಪ್ಟ್ ಬಂದರೆ, ನಾನು ಖಂಡಿತವಾಗಿಯೂ ಆಸಕ್ತಿಯಿಂದ ಕೇಳುತ್ತೇನೆ. ಆದರೆ ನನಗೆ ಭಾಷೆ ಅತ್ಯಂತ ಮುಖ್ಯವಾದ ಅಂಶವಲ್ಲ, ಸ್ಕ್ರಿಪ್ಟ್ ಆಯ್ಕೆ ಮಾಡುವ ನಿರ್ಧಾರ ಸಹಜವಾಗಿ ಇರುತ್ತದೆ. ಸ್ಕ್ರಿಪ್ಟ್ ಮನಸ್ಸಿಗೆ ಇಷ್ಟವಾದರೆ, ಆ ಕಥೆಗೆ ಸರಿಯಾಗಿ ಹೊಂದಿಕೊಳ್ಳುತ್ತೇನೆ ಎಂದು ಅನಿಸಿದರೆ, ಖಂಡಿತವಾಗಿ ಸಿನಿಮಾ ಮಾಡುತ್ತೇನೆ. ಪಾತ್ರಕ್ಕೆ ನ್ಯಾಯ ಒದಗಿಸುವುದು ನನ್ನ ಆದ್ಯತೆ. ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕುವ ಮೊದಲು ನಾನು ಈ ಪ್ರಶ್ನೆಗಳನ್ನು ನನಗೇ ಕೇಳಿಕೊಳ್ಳುತ್ತೇನೆ. ಅದು ನನಗೆ ಅತ್ಯಂತ ಮುಖ್ಯವಾದ ವಿಷಯ" ಎಂದು ಸಮಂತಾ ಉತ್ತರಿಸಿದ್ದಾರೆ.

  ಸುಳಿವು ಬಿಟ್ಟು ಕೊಡದ ಸಮಂತಾ!

  ಸುಳಿವು ಬಿಟ್ಟು ಕೊಡದ ಸಮಂತಾ!

  ತನಗೆ ಭಾಷೆಯ ಮಿತಿ ಇಲ್ಲ. ಕಲೆಗೆ ಭಾಷೆ ಇಲ್ಲ. ಯಾವ ಭಾಷೆಯಲ್ಲಾದರು ಸರಿ ಒಳ್ಳೆಯ ಕಥೆ ಸಿಕ್ಕರೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸಮಂತಾ ತಾನು ಸದ್ಯದಲ್ಲೇ ಬಾಲಿವುಡ್‌ ಚಿತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಆದರೆ ಸಮಂತಾ ಯಾವ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾತ್ರ ಹೇಳಿಕೊಂಡಿಲ್ಲ. ತಮ್ಮ ಮೊದಲ ಬಾಲಿವುಡ್‌ ಚಿತ್ರದ ಬಗ್ಗೆಯೂ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ.

  ತಾಪ್ಸಿ ಪನ್ನು ಬ್ಯಾನರ್‌ ಅಡಿಯಲ್ಲಿ ಸಮಂತಾ ಸಿನಿಮಾ!

  ತಾಪ್ಸಿ ಪನ್ನು ಬ್ಯಾನರ್‌ ಅಡಿಯಲ್ಲಿ ಸಮಂತಾ ಸಿನಿಮಾ!

  ನಟಿ ಸಮಂತಾ ಬಾಲಿವುಡ್‌ ಸಿನಿಮಾದ ಬಗ್ಗೆ ಹೇಳದೆ ಹೋದರು, ಆಕೆ ಅಭಿನಯದ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲಿವೆ. ತಾಪ್ಸಿ ಪನ್ನು ಅವರ ನಿರ್ಮಾಣ ಸಂಸ್ಥೆಯಡಿಯಲ್ಲಿ ತಯಾರಾಗುತ್ತಿರುವ ಚಿತ್ರ ಒಂದಕ್ಕೆ ಸಮಂತಾ ಸಹಿ ಹಾಕಿದ್ದರೆ. ಸದ್ಯದಲ್ಲಿಯೇ ಈ ಚಿತ್ರವನ್ನು ಘೋಷಣೆ ಮಾಡಲಾಗುವುದು ಎಂದು ಬಾಲಿವುಡ್‌ನಲ್ಲಿ ವರದಿ ಆಗಿದೆ.

  ಸಮಂತಾ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ 'ರಾಜಿ' ಪಾತ್ರದಲ್ಲಿ ಶಕ್ತಿಯುತ ಅಭಿನಯಕ್ಕಾಗಿ ಭಾರಿ ಪ್ರಶಂಸೆ ಪಡೆದಿದ್ದರು. ನಂತರ ಸಮಂತಾ ಬಾಲಿವುಡ್‌ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನು ಸುದ್ದಿಗಳು ಹಬ್ಬಲು ಶುರುವಾದವು. ಜೊತೆಗ ಶಾಹಿದ್ ಕಪೂರ್ ಮತ್ತು ತಾಪ್ಸಿ ಪನ್ನು ಸಹ ಸಮಂತಾ ಜೊತೆಗೆ ಬಾಲಿವುಡ್‌ ಚಿತ್ರದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿದ್ದರು.

  English summary
  Actress Samantha Talk About Her Bollywood Debut And She Reportedly Bought A House In Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X