ಮುಯ್ಯಿಗೆ ಮುಯ್ಯಿ: ಪೂಜಾ ಹೆಗ್ಡೆಯನ್ನು ಲೇವಡಿ ಮಾಡಿದ ಸಮಂತಾ

ತಮ್ಮ ಸೌಂದರ್ಯವನ್ನು ಲೇವಡಿ ಮಾಡಿ ಪೋಸ್ಟ್ ಹಾಕಿದ್ದ ಪೂಜಾ ಹೆಗ್ಡೆ ವಿರುದ್ಧ ಮುಯ್ಯಿ ತೀರಿಸಿಕೊಂಡಿದ್ದಾರೆ ನಟಿ ಸಮಂತಾ.

Recommended Video

ಹುಟ್ಟು ಹಬ್ಬಕ್ಕೆ ಹೊಸ ಕನಸಿನ ಬಗ್ಗೆ ಮಾತನಾಡಿದ ರವಿಚಂದ್ರನ್ | Ravichandran | Filmibeat Kannada

ನಟಿ ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂ ನಲ್ಲಿ ಸಮಂತಾ ಅವರ ಮೀಮ್‌ ಒಂದನ್ನು ಪೋಸ್ಟ್‌ ಮಾಡಿದ್ದರು. ಅದರಲ್ಲಿ 'ನನಗೆ ಆಕೆ ಸುಂದರವಾಗಿ ಕಾಣುತ್ತಿಲ್ಲ' ಎಂದು ಬರೆಯಲಾಗಿತ್ತು.

ಇದು ಸಮಂತಾ ಅಭಿಮಾನಿಗಳನ್ನು ಕೆರಳಿಸಿತ್ತು. ಸಮಂತಾ ಸುಂದರವಾಗಿಲ್ಲ ಎಂದು ಪೋಸ್ಟ್ ಮಾಡಿದ್ದಕ್ಕೆ ಪೂಜಾ ಹೆಗ್ಡೆ ಕೂಡಲೇ ಕ್ಷಮೆ ಕೋರಬೇಕು ಎಂದು ಸಮಂತಾ ಅಭಿಮಾನಿಗಳು ಒತ್ತಾಯಿಸಿದ್ದರು.

ತಮ್ಮ ಖಾತೆ ಹ್ಯಾಕ್ ಆಗಿದೆ ಎಂದಿದ್ದ ಪೂಜಾ

ತಮ್ಮ ಖಾತೆ ಹ್ಯಾಕ್ ಆಗಿದೆ ಎಂದಿದ್ದ ಪೂಜಾ

ಆದರೆ ಪೂಜಾ ಹೆಗ್ಡೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದೆ, ಇನ್‌ಸ್ಟಾಗ್ರಾಂ ನಲ್ಲಿ ಇತ್ತೀಚೆಗೆ ಪೋಸ್ಟ್‌ ಆದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಲಾಗುವುದು ಎಂದು ಬರೆದುಕೊಂಡಿದ್ದರು. ಆದರೆ ಪೂಜಾ ಹೆಗ್ಡೆ ಉದ್ದೇಶಪೂರ್ವಕವಾಗಿಯೇ ಸಮಂತಾ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಮುಯ್ಯಿ ತೀರಿಸಿಕೊಂಡರಾ ಸಮಂತಾ?

ಮುಯ್ಯಿ ತೀರಿಸಿಕೊಂಡರಾ ಸಮಂತಾ?

ಇದಕ್ಕೆ ಮುಯ್ಯಿ ತೀರಿಸಿಕೊಂಡಿರುವ ಸಮಂತಾ, ಇಂದು ತಮ್ಮ ಗೆಳತಿಯ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಪೂಜಾ ಹೆಗ್ಡೆಗೆ ಕಾಲೆಳೆಯುವ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

''ನನ್ನ ಮೆದುಳು ಸಹ 'ಹ್ಯಾಕ್' ಆಗಿದೆ''

''ನನ್ನ ಮೆದುಳು ಸಹ 'ಹ್ಯಾಕ್' ಆಗಿದೆ''

ತಮ್ಮ ಗೆಳತಿ ಮಾಡಿದ 'ವಾಟ್‌ ದಿ ಹ್ಯಾಕ್' ಎಂಬ ಪೂಜಾ ಹೆಗ್ಡೆ ಗೆ ಕಾಲೆಳೆಯುವ ಪೋಸ್ಟ್‌ಗೆ ಸಮಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಂತಾ ಗೆಳತಿ, 'ನನ್ನ ಮೆದುಳು ಸಹ ಹ್ಯಾಕ್ ಆಗಿದೆ' ಎಂದಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ, 'ಮುಂದಿನ ನೊಟೀಸ್‌ ನೀಡುವ ವರೆಗೆ 'ಹ್ಯಾಕ್' ಬಗ್ಗೆ ಜೋಕ್ ಬೇಡ' ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಸಮಂತಾ ವಿಜಯದ ಸಂಕೇಯ

ಸಮಂತಾ ವಿಜಯದ ಸಂಕೇಯ

ನಿನ್ನೆಯೇ ಸಮಂತಾ ಟ್ವಿಟ್ಟರ್‌ನಲ್ಲಿ ವಿಜಯದ ಸಂಕೇತ ತೋರಿಸುವ ಪೋಸ್‌ನ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದು ಪೂಜಾ ಹೆಗ್ಡೆಗೆ ಅವರು ನೀಡಿರುವ ಉತ್ತರ ಎಂದೇ ಹೇಳಲಾಗುತ್ತಿತ್ತು.

More from Filmibeat

English summary
Samantha and Pooja Hegde's social media war not ending soon. Today Samantha pulled Pooja Hegde's leg in Instagram by commenting to a post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X