For Quick Alerts
  ALLOW NOTIFICATIONS  
  For Daily Alerts

  ನಾಗಚೈತನ್ಯ ಜೊತೆಗಿದ್ದ ಮನೆಯನ್ನು ₹100 ಕೋಟಿ ಕೊಟ್ಟು ಕಾಡಿಬೇಡಿ ಖರೀದಿಸಿದ ಸಮಂತಾ!

  |

  ಸಮಂತಾ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಉತ್ತರದಿಂದ ದಕ್ಷಿಣದವರೆಗೂ ಎಲ್ಲಿ ಹೋದರೂ ಸಮಂತಾ ಬಗ್ಗೆನೇ ಟಾಕ್ ಇತ್ತು. ವಿಚ್ಚೇದನದ ಬಗ್ಗೆ ಸಿಡಿದೆದ್ದು ಬಂದ ಸಮಂತಾ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

  ವಿಚ್ಛೇದನದ ಬಳಿಕ ದಿನದಿಂದ ದಿನಕ್ಕೆ ಸಮಂತಾ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡಿವೋರ್ಸ್‌ ಎಂಬ ನೋವಿನಿಂದ ಹೊರಬರಲು ಪರದಾಡಿದ್ದ ಸಮಂತಾ ಈಗ ಸ್ಟ್ರಾಂಗ್ ಆಗಿ ಹೊರಬಂದಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂಟಿ ಹೋರಾಟಕ್ಕೆ ಅಭಿಮಾನಿಗಳು ಕೂಡ ಸಾಥ್ ನೀಡುತ್ತಿದ್ದಾರೆ.

  ಕೈ ತುಂಬಾ ಸಿನಿಮಾಗಳನ್ನಿಟ್ಟುಕೊಂಡು ಸದ್ದು ಮಾಡುತ್ತಿರುವ ಸಮಂತಾ ಸುತ್ತಾ ಮತ್ತೊಂದು ಸುದ್ದಿ ಓಡಾಡುತ್ತಿದೆ. ವಿವಾಹ ಬಳಿಕ ನಾಗಚೈತನ್ಯ ಹಾಗೂ ಸಮಂತಾ ಒಟ್ಟಿಗೆ ಇದ್ದ ಮನೆಯನ್ನು ದುಬಾರಿ ಮೊತ್ತ ಕೊಟ್ಟು ಖರೀದಿ ಮಾಡಿದ್ದಾರಂತೆ. ಇಂತಹದ್ದೊಂದು ಸುದ್ದಿ ಈಗ ಎಲ್ಲೆಡೆ ಸಿಕ್ಕಾ ಪಟ್ಟೆ ಚರ್ಚೆಯಾಗುತ್ತಿದೆ.

  ಹಿರಿಯ ನಟ ಬಿಟ್ಟು ಕೊಟ್ಟ ಗುಟ್ಟೇನು?

  ಹಿರಿಯ ನಟ ಬಿಟ್ಟು ಕೊಟ್ಟ ಗುಟ್ಟೇನು?

  ಇತ್ತೀಚೆಗೆ ಸಮಂತಾ ಒಂದು ಮನೆಯನ್ನು ಬಾರಿ ಮೊತ್ತ ಕೊಟ್ಟು ಖರೀದಿ ಮಾಡಿದ್ದಾರೆ. ಇದು ಸಮಂತಾ ಬದುಕಿಗೆ ತೀರಾ ಹತ್ತಿರವೆನಿಸಿದ ಮನೆ. ನಾಗಚೈತನ್ಯರನ್ನು ವಿವಾಹವಾದ ಬಳಿಕ ಸಮಂತಾ ಅದೇ ಮನೆಯಲ್ಲಿ ವಾಸವಿದ್ದರು. ಅದೇ ಮನೆಯನ್ನು ಈ ಬಾರೀ ಮೊತ್ತ ಕೊಟ್ಟು ಖರೀದಿಸಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ಮುರಳಿ ಮೋಹನ್ ಈ ಬಗ್ಗೆ ಮಾಹಿತಿ ನೀಡಿದ್ದು, ಅದೇ ವಿಡಿಯೋ ಈಗ ವೈರಲ್ ಆಗಿದೆ.

  100 ಕೋಟಿ ರೂ. ಕೊಟ್ಟು ಮನೆ ಖರೀದಿ

  ನಾಗಚೈತನ್ಯ ಜೊತೆಗಿದ್ದ ಮನೆಯನ್ನು ಸಮಂತಾ ಒಬ್ಬರೇ 100 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅಲ್ಲದೆ ಎಕ್ಸ್‌ಟ್ರಾ ಫ್ರಾಫಿಟ್ ಕೊಟ್ಟು ಖರೀದಿಸಿದ್ದಾರೆ ಎಂದು ಹಿರಿಯ ನಟ ಮುರಳಿ ಮೋಹನ್ ರಿವೀಲ್ ಮಾಡಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದೆ. ಸಮಂತಾ ಅಷ್ಟೊಂದು ಹಣವನ್ನು ಕೊಟ್ಟು ಅದೇ ಮನೆಯನ್ನು ಖರೀದಿ ಮಾಡಿದ್ದು ಯಾಕೆ? ಇದು ನಾಗಚೈತನ್ಯ ನೆನಪಿಗಾಗಿನಾ? ಅಥವಾ ದ್ವೇಷಕ್ಕಾಗಿನಾ? ಅನ್ನೋದು ಮಾತ್ರ ರಿವೀಲ್ ಆಗಿಲ್ಲ.

  ನಾಗಚೈತನ್ಯ-ಸಮಂತಾ ಫ್ಯಾನ್ಸ್ ಫೈಟ್

  ನಾಗಚೈತನ್ಯ-ಸಮಂತಾ ಫ್ಯಾನ್ಸ್ ಫೈಟ್

  ಟಾಲಿವುಡ್‌ ಹಿರಿಯ ನಟ ಮುರಳಿ ಮೋಹನ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಂತಾ ಅಭಿಮಾನಿಗಳು ನಾಗಚೈತನ್ಯ ಫ್ಯಾನ್ಸ್‌ಗೆ ಟಾಂಗ್ ಕೊಡಲು ಶುರು ಮಾಡಿದ್ದಾರೆ. ವಿಚ್ಛೇದನ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ನಾಗಚೈತನ್ಯ ಅಭಿಮಾನಿಗಳು ಸಮಂತಾರನ್ನು ಟ್ರೋಲ್ ಮಾಡಿದ್ದರು. 200 ಕೋಟಿ ರೂ. ಜೀವನಾಂಶ ಪಡೆಯಲೆಂದೇ ವಿಚ್ಛೇದನ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇಲ್ಲಿಂದ ಇಬ್ಬರ ಅಭಿಮಾನಿಗಳ ನಡುವೆ ಆಗಾಗ ವಾರ್ ನಡೆಯುತ್ತಲೇ ಇತ್ತು.

  ವಿಚ್ಛೇದನದ ಬಗ್ಗೆ ಸಮಂತಾ ಮಾತು!

  ವಿಚ್ಛೇದನದ ಬಗ್ಗೆ ಸಮಂತಾ ಮಾತು!

  ಇತ್ತೀಚೆಗೆ 'ಕಾಫಿ ವಿಥ್ ಕರಣ್ ಸೀಸನ್ 7'ರ ಟಾಕ್ ಶೋನಲ್ಲಿ ಸಮಂತಾ ಭಾಗವಹಿಸಿದ್ದರು. ಆಗ ಕರಣ್ ಜೋಹರ್ ಪ್ರಶ್ನೆಗೆ ಸಮಂತಾ ನೀಡಿದ ಉತ್ತರ ಕೂಡ ವೈರಲ್ ಆಗಿತ್ತು. "ನಮ್ಮಿಬ್ಬರನ್ನು ಒಂದು ಕೋಣೆಯಲ್ಲಿ ಬಿಟ್ಟರೆ, ಅಲ್ಲಿ ಮೊನಚಾದ ಆಸ್ತ್ರಗಳನ್ನು ಇಡಬೇಡಿ " ಎಂದಿದ್ದರು. ಈ ಹೇಳಿಕೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್, ಬಾಲಿವುಡ್ ಅಂತ ಬ್ಯುಸಿಯಾಗಿರುವ ಸಮಂತಾ 100 ಕೋಟಿ ರೂ. ಮೊತ್ತದ ಮನೆಯನ್ನು ಖರೀದಿ ಮಾಡಿರುವುದನ್ನು ಟಾಲಿವುಡ್ ಅಚ್ಚರಿಯಿಂದ ನೋಡುತ್ತಿದೆ.

  English summary
  The Buzz Is That Samantha Purchased Same House Where She Lived In with Naga Chaitanya Before Separation, Know More.
  Friday, July 29, 2022, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X