ನಿರ್ದೇಶಕ ರಾಜ್ ಜೊತೆ ನಟಿ ಸಮಂತಾ ಡೇಟಿಂಗ್ ವದಂತಿ; ಸ್ಯಾಮ್ ಮ್ಯಾನೇಜರ್ ಪ್ರತಿಕ್ರಿಯೆ
ಸೆಲೆಬ್ರೆಟಿಗಳು ರಿಲೇಷನ್‌ಶಿಪ್ ವಿಚಾರ ಪದೇ ಪದೆ ಸುದ್ದಿ ಆಗುತ್ತದೆ. ಸದ್ಯ ತೆಲುಗು ನಟಿ ಸಮಂತಾ ಹಾಗೂ ರಾಜ್ ನಿಡಿಮೋರು ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕೆ ಸುಳಿವು ಎನ್ನುವಂತೆ ಸಮಂತಾ ಹಂಚಿಕೊಳ್ಳುವ ಫೋಟೊಗಳು ವೈರಲ್ ಆಗುತ್ತಿದೆ.
ನಿರ್ದೇಶಕ ರಾಜ್ ಜೊತೆ ನಟಿ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಬಗ್ಗೆ ಇದೀಗ ಆಕೆಯ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ನಟ ನಾಗಚೈತನ್ಯಾ ಜೊತೆ ಸ್ಯಾಮ್ ಮದುವೆ ಆಗಿ ಡಿವೋರ್ಸ್ ಪಡೆದಿದ್ದು ಗೊತ್ತೇತಿದೆ. ಬಳಿಕ ಚೈತಾ 2ನೇ ಮದುವೆ ಕೂಡ ಆಗಿದ್ದಾರೆ. ಅದರ ಬೆನ್ನಲ್ಲೇ ನಿರ್ದೇಶಕ ರಾಜ್ ಜೊತೆ ಸ್ಯಾಮ್ ಸುತ್ತಾಡುತ್ತಿದ್ದಾರೆ. ಇದು ಸಹಜವಾಗಿಯೇ ಕೆಲವರಿಗೆ ಅನುಮಾನ ಮೂಡಿಸಿದೆ.

ಈ ಹಿಂದೆ ಎರಡನೇ ಪ್ರೀತಿ, ಮದುವೆ ಬಗ್ಗೆ ಸಮಂತಾ ಪ್ರತಿಕ್ರಿಯಿಸಿ ಯಾಕಾಗಬಾರದು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಹಾಗಾಗಿ ಸ್ಯಾಮ್- ರಾಜ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿದೆ. ಒಟ್ಟಿಗೆ ವಿಮಾನದಲ್ಲಿ ಓಡಾಡುವುದು, ದೇವಸ್ಥಾನಕ್ಕೂ ಒಟ್ಟಿಗೆ ಹೋಗಿ ಬಂದಿದ್ದು ವದಂತಿಗೆ ಮತ್ತಷ್ಟು ಇಂಬು ನೀಡಿದೆ.
ಸಮಂತಾ ನಿರ್ಮಾಪಕಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. 'ಶುಭಂ' ಎಂಬ ಕಾಮೆಡಿ ಹಾರರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಳೆದ ವಾರ ತೆರೆಕಂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದರಿಂದ ಖುಷಿಯಾಗಿ 'ಶುಭಂ' ಸಿನಿಮಾ ಮೇಕಿಂಗ್ ಜರ್ನಿಗೆ ಸಂಬಂಧಿಸಿದ ಫೋಟೊಗಳನ್ನು ಸ್ಯಾಮ್ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜ್ ನಿಡಿಮೊರು ಜೊತೆಗಿರುವ ಫೋಟೊಗಳು ಇದೆ.
ವಿಮಾನದಲ್ಲಿ ನಿರ್ದೇಶಕ ರಾಜ್ ಭುಜಕ್ಕೆ ಒರಗಿದಂತೆ ಸಮಂತಾ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಅದನ್ನು ಕೂಡ ಹಂಚಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿ ಇಬ್ಬರಿ ರಿಲೇಷನ್‌ಶಿಪ್‌ನಲ್ಲಿರುವ ಪಕ್ಕಾ ಎಂದು ಬಹುತೇಕರು ಅಂದುಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ನಿರ್ದೇಶಕ ರಾಜ್ ನಿಡಿಮೊರು ಪತ್ನಿ ಶ್ಯಾಮಲಿ ಡೇ ಗೂಡಾರ್ಥದ ಪೋಸ್ಟ್ ಸಹ ಮಾಡಿದ್ದರು. ಕೆಲ ದಿನಗಳಿಂದ ಇವರಿಬ್ಬರೂ ದೂರಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದನ್ನೆಲ್ಲಾ ನೋಡಿ ಸ್ಯಾಮ್- ರಾಜ್ ಆದಷ್ಟು ಬೇಗ ಮದುವೆ ಆಗಿಬಿಡುತ್ತಾರೆ ಎನ್ನುವ ಅರ್ಥದಲ್ಲಿ ಕೆಲವರು ಮಾತನಾಡುತ್ತಿದ್ದಾರೆ.
ಎಲ್ಲಾ ಅಂತೆ ಕಂತೆಗಳಿಗೆ ಇದೀಗ ಸಮಂತಾ ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ. ಸ್ಯಾಮ್ ಹಾಗೂ ರಾಜ್ ಬಗ್ಗೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವುದೆಲ್ಲಾ ಸುಳ್ಳು. ಅದರಲ್ಲಿ ಯಾವುದೇ ಸತ್ಯ ಇಲ್ಲ. 'ಶುಭಂ' ಸಿನಿಮಾ ಪ್ರಚಾರದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಳು. ಅದಕ್ಕೆ ಗಾಳಿಸುದ್ದಿ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಈ ರೀತಿ ಸುಳ್ಳು ವದಂತಿ ಹಬ್ಬಿಸಿ ಯಾರಿಗೂ ನೋವು ಕೊಡಬೇಡಿ" ಎಂದು ಸಮಂತಾ ಮ್ಯಾನೇಜರ್ ಹೇಳಿರುವುದಾಗಿ ತೆಲುಗು TV9 ಸೇರಿದಂತೆ ಕೆಲ ತೆಲುಗು ವೆಬ್‌ಸೈಟ್‌ಗಳು ವರದಿ ಮಾಡಿವೆ.
ರಾಜ್ ನಿಡಿಮೊರು ನಿರ್ದೇಶನದ 'ದಿ ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್‌ನಲ್ಲಿ ಸಮಂತಾ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಶುರುವಾದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸಮಂತಾ ನಿರ್ಮಾಣದ 'ಶುಭಂ' ಚಿತ್ರದ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ರಾಜ್ ವ್ಯವಹರಿಸಿದ್ದರು. ಹಾಗಾಗಿ ಇಬ್ಬರೂ ಒಟ್ಟೊಟ್ಟಿಗೆ ಸಿನಿಮಾ ಜರ್ನಿಯಲ್ಲಿ ಭಾಗಿ ಆಗಿದ್ದರು. ಅದೇ ಕಾರಣಕ್ಕೆ ರಾಜ್ ಜೊತೆಗಿನ ಫೋಟೊಗಳನ್ನು ಸಮಂತಾ ಹಂಚಿಕೊಂಡಿದ್ದಾರೆ.
ಮಯೊಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. 'ಶುಭಂ' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 'ಮಾ ಇಂಟಿ ಬಂಗಾರಂ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











