Samantha: ಸಲ್ಮಾನ್ ಖಾನ್ ಜೋಡಿಯಾಗಿ ಸಮಂತಾ.. ಇನ್‌ಸ್ಟಾ ಚಾಟ್ ವೇಳೆ ಸಿಕ್ತು ಕ್ಲಾರಿಟಿ
ದಕ್ಷಿಣದ ನಟಿಯರು ಒಬ್ಬೊಬ್ಬರಾಗಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿ ನಯನತಾರ 'ಜವಾನ್' ಸಿನಿಮಾ ಮೂಲಕ ಬಿಟೌನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಜೊತೆ ನಯನ್ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇದೀಗ ಸಮಂತಾ ಬಾಲಿವುಡ್ ಎಂಟ್ರಿ ಬಗ್ಗೆ ಚರ್ಚೆ ನಡೀತಿದೆ.
ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಇತ್ತೀಚೆಗೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಹಿಂದೆ ಸಹಿ ಮಾಡಿದ್ದ 'ಖುಷಿ' ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದರು. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ವಿಜಯ್ ದೇವರಕೊಂಡ ಹಾಗೂ ಸ್ಯಾಮ್ ಕೆಮೆಸ್ಟ್ರಿ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ 'ಖುಷಿ' ಸಿನಿಮಾ ಮುಗ್ಗರಿಸಿತ್ತು.

ಚೆನ್ನೈ ಚೆಲುವೆ ತೆಲುಗು ಸಿನಿಮಾಗಳಲ್ಲಿ ನಟಿಸಿ, ನಾಗಚೈತನ್ಯಾ ಕೈ ಹಿಡಿದ ಬಳಿಕ ಟಾಲಿವುಡ್‌ನಲ್ಲೇ ಸೆಟ್ಲ್ ಆಗಿದ್ದಾರೆ. ಇತ್ತೀಚೆಗೆ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಇನ್ನು ಆ ಬಳಿಕ ಸ್ಯಾಮ್ ಮಯೋಸೈಟಿಸ್‌ನಿಂದ ಬಳಲುವಂತಾಯಿತು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಚೆಲುವೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಸಮಂತಾ ಹಿಂದಿ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡ್ತಿದೆ.
ಸ್ಯಾಮ್ ಈಗಾಗಲೇ 'ಫ್ಯಾಮಿಲಿಮ್ಯಾನ್-2' ವೆಬ್ ಸೀರಿಸ್ ಮೂಲಕ ಬಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಆದರೆ ಈವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇತ್ತೀಚೆಗೆ ಸಿಟಾಡೆಲ್ ಹಿಂದಿ ವೆಬ್ ಸೀರಿಸ್‌ನಲ್ಲೂ ಮಿಂಚಿದ್ದರು. ತಮಿಳು ನಿರ್ದೇಶಕ ವಿಷ್ಣುವರ್ಧನ್ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡೊದು ಬಹುತೇಕ ಖಚಿತವಾಗಿದೆ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತದೆ ಎನ್ನಲಾಗ್ತಿದೆ. ಇದೇ ಚಿತ್ರಕ್ಕೆ ಸ್ಯಾಮ್ ನಾಯಕಿ ಎನ್ನುವ ಊಹಾಪೋಹ ಶುರುವಾಗಿತ್ತು. ತ್ರಿಷಾ, ಅನುಷ್ಕಾ ಶೆಟ್ಟಿ ಹೆಸರುಗಳು ಕೂಡ ಈ ಚಿತ್ರದ ನಾಯಕಿ ಪಾತ್ರಕ್ಕೆ ಕೇಳಿಬರ್ತಿದೆ.

ಇತ್ತೀಚೆಗೆ, ಸಮಂತಾ ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಈ ವೇಳೆ ಬಾಲಿವುಡ್ ಪ್ರಾಜೆಕ್ಟ್‌ಗಳ ಬಗ್ಗೆ ಎದುರಾದ ಪ್ರಶ್ನೆಗೆ ಆಕೆ ಉತ್ತರಿಸಿದ್ದಾರೆ. ಮುಂದಿನ ಪ್ರಾಜೆಕ್ಟ್ ಯಾವುದು? ಎನ್ನುವ ಪ್ರಶ್ನೆಗೆ "ನನ್ನ ಮುಂದಿನ ಪ್ರಾಜೆಕ್ಟ್ ಯಾವುದು ಇಲ್ಲ. ಯಾವುದೇ ಪ್ಲ್ಯಾನ್ ಇಲ್ಲ" ಎಂದಿದ್ದಾರೆ. "ನಾನು ಕೆಲಸ ಮಾಡಲಿರುವ ಪ್ರಾಜೆಕ್ಟ್‌ಗಳ ಬಗ್ಗೆ ಮತ್ತಷ್ಟು ಯೋಚಿಸಿ ಮುಂದುವರೆಯಲು ಬಯಸುತ್ತೇನೆ. ನನ್ನ ಕಂಫರ್ಟ್ ಝೋನ್‌ನಿಂದ ಹೊರಗೆ ಕರೆದೊಯ್ಯುವ ಪಾತ್ರಗಳು ನನಗೆ ಬೇಕು. ಅಂತಹ ಪಾತ್ರ ಬರುವವರೆಗೂ ನಾನು ಹೀಗೆಯೇ ಇರಲು ಸಿದ್ಧ" ಎಂದು ಸಮಂತಾ ಹೇಳಿದ್ದಾರೆ.
ಟಾಲಿವುಡ್ ಬೇಬಿ ಮಾತು ಕೇಳಿದ ಅಭಿಮಾನಿಗಳಿಗೆ ಸಮಂತಾ ಇನ್ನೂ ಯಾವುದೇ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹಾಗಾಗಿ ಅನುಷ್ಕಾ ಹಾಗೂ ತ್ರಿಷಾಗೆ ಲೈನ್ ಕ್ಲಿಯರ್ ಆಗಿದೆ ಎನ್ನಲಾಗ್ತಿದೆ. ಇವರಿಬ್ಬರಲ್ಲಿ ಯಾರು ಸಲ್ಲು ಭಾಯ್ ಜೊತೆ ಹೆಜ್ಜೆ ಹಾಕ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ನಿರ್ದೇಶಕ ವಿಷ್ಣುವರ್ಧನ್ ಈಗಾಗಲೇ 'ಶೇರ್‌ಷಾ' ಸಿನಿಮಾ ಮಾಡಿ ಬಾಲಿವುಡ್‌ನಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಸಲ್ಲು ಜೊತೆ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಪ್ಲ್ಯಾನ್ ಮಾಡ್ತಿದ್ದಾರೆ. ಕರಣ್ ಜೋಹರ್ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ಸಲ್ಲು ಪ್ಯಾರಾಮಿಲಿಟರಿ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಡಿಸೆಂಬರ್‌ನಲ್ಲಿ ಸಿನಿಮಾ ಶುರುವಾಗುವ ನಿರೀಕ್ಷೆಯಿದೆ.
ಸಲ್ಲು ಸದ್ಯ 'ಟೈಗರ್-3' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಿನಿಮಾಗಳು ಸದ್ದು ಮಾಡುತ್ತಿಲ್ಲ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಈಗಾಗಲೇ ವಿಷ್ಣುವರ್ಧನ್ ಚಿತ್ರಕ್ಕಾಗಿ ದೇಹದಂಡಿಸುವ ಕೆಲಸ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











