ವಿಚ್ಛೇದನ ವದಂತಿ ನಡುವೆಯೂ ಪತಿಯ 'ಲವ್ ಸ್ಟೋರಿ'ಗೆ ಆಲ್ ದಿ ಬೆಸ್ಟ್ ಹೇಳಿದ ನಟಿ ಸಮಂತಾ

ಟಾಲಿವುಡ್ ಸ್ಟಾರ್ ದಂಪತಿ ಸಮಂತಾ ಮತ್ತು ನಾಗ ಚೈತನ್ಯ ನಡುವೆ ಬಿರುಕು ಮೂಡಿದೆ ಎನ್ನುವ ಸುದ್ದಿ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಸ್ಟಾರ್ ದಂಪತಿಯ ನಡುವೆ ಯಾವುದು ಸರಿಯಿಲ್ಲ, ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. ಸ್ಟಾರ್ ದಂಪತಿಯ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೂ ಈ ಬಗ್ಗೆ ಸಮಂತಾ ಕಡೆಯಿಂದ ಅಥವಾ ಅಕ್ಕಿನೇನಿ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿಲ್ಲ.

ಸಮಂತಾ ಮತ್ತು ನಾಗ್ ಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳದೆ ತಿಂಗಳುಗಳೇ ಆಗಿದೆ. ಸಾಮಾಜಿಕ ಜಾಲತಾಣದಲ್ಲೂ ಸಮಂತಾ ಪತಿಯ ಫೋಟೋ ಶೇರ್ ಮಾಡುತ್ತಿಲ್ಲ. ಆದರೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಪತಿ ನಾಗ ಚೈತನ್ಯ ಬಗ್ಗೆ ಸಮಂತಾ ಯಾವುದೇ ಪೋಸ್ಟ್ ಶೇರ್ ಮಾಡುತ್ತಿರಲಿಲ್ಲ. ಅಲ್ಲದೆ ಸಮಂತಾ ಈಗಾಗಲೇ ಅಕ್ಕಿನೇನಿ ಕುಟುಂಬದಿಂದ ದೂರ ಆಗಿ ತಾಯಿ ಮನೆ ಸೇರಿದ್ದಾರೆ ಎನ್ನುವ ಗುಸು ಗುಸು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಇತ್ತೀಚಿಗಷ್ಟೆ ಸಮಂತಾ ಸಾಮಾಜಿಕ ಜಾಲತಾಣದ ಖಾತೆಯಿಂದ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿ ಕೇವಲ ಎಸ್ ಅಕ್ಷರವನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಸಮಂತಾ ಅವರ ಈ ನಡೆ ವಿಚ್ಛೇದನ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇಷ್ಟಾದರೂ ಸಮಂತಾ ಆಗಲಿ ಅಥವಾ ನಾಗ ಚೈತನ್ಯ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.

Samantha reacts to Naga Chaitanyas Love Story Trailer

ಈ ಎಲ್ಲಾ ವದಂತಿಗಳ ನಡುವೆ ಸಮಂತಾ ಮೊದಲ ಬಾರಿಗೆ ಪತಿಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಾಗ ಚೈತನ್ಯ 'ಲವ್ ಸ್ಟೋರಿ' ನೋಡಿ ಆಲ್ ದಿ ಬೆಸ್ಟ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಾಗ ಚೈತನ್ಯ ಲವ್ ಸ್ಟೋರಿನಾ ಅಂತ ಶಾಕ್ ಆಗಬೇಡಿ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಮಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗ ಚೈತನ್ಯ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದ ಟ್ರೈಲರ್ ಅನ್ನು ಸಮಂತಾ ರಿ ಟ್ವೀಟ್ ಮಾಡಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಜೊತೆಗೆ ನಾಗ ಚೈತನ್ಯಗೆ "ವಿನ್ನರ್" ಎಂದು ಹೇಳಿದ್ದಾರೆ.

ಅಂದಹಾಗೆ ಸಮಂತಾ ಪೋಸ್ಟ್ ಗೆ ನಾಗ ಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಾಗ್ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ ಸಮಂತಾ ಪೋಸ್ಟ್‌ಗೆ ನಟಿ ಸಾಯಿ ಪಲ್ಲವಿ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ಟ್ರೈಲರ್ ಬಿಡುಗಡೆಯಾಗಿ ಅನೇಕ ಸಮಯವಾದರೂ ಸಮಂತಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅಲ್ಲಿಗೆ ನೆಟ್ಟಿಗರು ಇಬ್ಬರ ನಡುವೆ ಬಿರುಕು ಮೂಡಿರುವುದು ಅಧಿಕೃತ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಆಷ್ಟರಲ್ಲೇ ಸಮಂತಾ ರಿ ಟ್ವೀಟ್ ಮಾಡಿ ವಿಶ್ ಮಾಡುವ ಮೂಲಕ ಹರಿದಾಡುತ್ತಿದ್ದ ವದಂತಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.

Samantha reacts to Naga Chaitanyas Love Story Trailer

ಈ ಹಿಂದೆಯೂ ಸಮಂತಾ ಲವ್ ಸ್ಟೋರಿ ಸಿನಿಮಾವನ್ನು ವಿಭಿನ್ನವಾಗಿ ಪ್ರಮೋಟ್ ಮಾಡುತ್ತಿದ್ದಾರೆ. ಪತಿಯ ಈ ಸಿನಿಮಾದ ಬಗ್ಗೆ ಸಮಂತಾ ವಿಶೇಷ ಕಾಳಜಿ ವಹಿಸಿದ್ದರು. ಫಸ್ಟ್ ಲುಕ್, ಟೀಸರ್ ಬಿಡುಗಡೆಯಾದ ಸಮಯದಲ್ಲೂ ಸಮಂತಾ ಶೇರ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಇದೀಗ ಟ್ರೈಲರ್ ಅನ್ನು ಶೇರ್ ಮಾಡಿ ಪ್ರಮೋಟ್ ಮಾಡಿದ್ದಾರೆ.

ಇನ್ನು ಲವ್ ಸ್ಟೋರಿ ಸಿನಿಮಾಗೆ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿದ್ದ ಲವ್ ಸ್ಟೋರಿ ಇದೀಗ ಟ್ರೈಲರ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ನಾಗ ಚೈತನ್ಯ ರೇವಂತ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಮೌನಿಕಾ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಲವ್ ಸ್ಟೋರಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Samantha reacts to Naga Chaitanyas Love Story Trailer

ಅಂದುಕೊಂಡಂತೆ ಆಗಿದ್ದರೆ ಆಗಿದ್ದರೆ ಸಿನಿಮಾ ಈಗಾಗಲೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೆ ಇದೆ. ಇತ್ತೀಚಿಗಷ್ಟೆ ಸಿನಿಮಾ ತಂಡ ಸೆಪ್ಟಂಬರ್ 10 ಗಣೇಶ ಹಬ್ಬದ ದಿನ ತೆಗೆರೆ ಬರುವುದಾಗಿ ಘೋಷಣೆ ಮಾಡಿತ್ತು. ಆದರೆ ಮತ್ತೆ ಮುಂದಕ್ಕೆ ಹಾಕುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಇದೀಗ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಹೊಸ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದು, ಬಹುನಿರೀಕ್ಷೆಯ ಸಿನಿಮಾ ಸೆಪ್ಟಂಬರ್ 24ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

ನಾಗ ಚೈತನ್ಯ ಸಿನಿಮಾ ಜೊತೆಗೆ ಥ್ಯಾಂಕ್ ಯೂ, ಬಂಗಾರಾಜು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಬಂಗಾರಾಜು ಸಿನಿಮಾ ಸೆಟ್ಟೇರಿದ್ದು ಈ ಸಿನಿಮಾದಲ್ಲಿ ತಂದೆ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಬಾಲಿವುಡ್ ಗೂ ಎಂಟ್ರಿ ಕೊಟ್ಟಿರುವ ನಾಗ್, ಆಮೀರ್ ಖಾನ್ ನಟನೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ನಾಗ ಚೈತನ್ಯ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

More from Filmibeat

English summary
Actress Samantha reacts to Naga Chaitanya's Love Story Trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X