Samantha: ಸಮಂತಾ ಮತ್ತು ನಾಗಚೈತನ್ಯ ಇನ್‌ಸ್ಟಾಗ್ರಾಂ ಕದನಕ್ಕೆ ತಲೆಕೆಡಿಸಿಕೊಂಡ ಫ್ಯಾನ್ಸ್!
ನಟಿ ಸಮಂತಾ ಸದ್ಯ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಸಾಲು ಸಾಲು ಸಿನಿಮಾಗಳು ನಟಿ ಸಮಂತಾ ಕೈನಲ್ಲಿವೆ. ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ನಂತರ ಸಮಂತಾ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ. ಚಿತ್ರರಂಗದಲ್ಲಿ ಅವಕಾಶ ವಂಚಿತರಾಗುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು.
ಆದರೇ ಸಮಂತಾ ಜರ್ನಿಯೇ ಬೇರೆಯಾಗಿತ್ತು. ಹೇಳಬೇಕು ಅಂದರೆ ಸಮಂತಾ ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಸಮಂತಾ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ತೆಲುಗಿನ 'ಪುಷ್ಪ' ಚಿತ್ರದಲ್ಲಿ ಐಟಂ ಸಾಂಗ್‌ಗೆ ಸೊಂಟ ಬಳುಕಿಸಿದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
ಟಾಲಿವುಡ್‌ನಿಂದ ಬಾಲಿವುಡ್‌ವರೆಗೂ ಸಿನಿಮಾ ಮಂದಿಯಲ್ಲಿ ಸಮಂತಾ ಹೆಸರೇ ಕೇಳುತ್ತಿದೆ. ತನನ್ನು ಹುಡುಕಿಕೊಂಡು ಬಂದ ಸಿನಿಮಾಗಳನ್ನು ಒಪ್ಪಿಕೊಂಡು ಮಿಂಚುತ್ತಿರುವ ಸಮಂತಾ, ವೈಯುಕ್ತಿಕ ವಿಚಾರದಲ್ಲೂ ಸುದ್ದಿ ಆಗುತ್ತಿದ್ದಾರೆ.

ಸಮಂತಾ ಈಗಲೂ ಕೂಡ ಗ್ಲಾಮರ್ ಗೊಂಬೆ
ನಟಿ ಸಮಂತಾ ಸಿನಿಮಾರಂಗದಲ್ಲಿ 12 ವರ್ಷಗಳನ್ನು ಕಳೆದಿದ್ದಾರೆ. ವಿವಾಹ, ವಿಚ್ಛೇದನದ ಬಳಿಕವೂ ಸಮಂತಾಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಯಾಕೆಂದರೆ ಸಮಂತಾ ಈಗಲೂ ಕೂಡ ಗ್ಲಾಮರ್ ಗೊಂಬೆ. ಸಮಂತಾ ವೈಯಕ್ತಿಕ ಬದುಕಿನಲ್ಲಿ ವಿಚ್ಛೇದನದ ಬಿರುಗಾಳಿ ಬೀಸಿದರು ಕೂಡ, ಆಕೆಯ ವೃತ್ತಿ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈಗಲೂ ಸಾಲು ಸಾಲು ಆಫರ್‌ಗಳು ಸಮಂತಾರನ್ನು ಹುಡುಕಿಕೊಂಡು ಬರುತ್ತಿದೆ. ಸದ್ಯ ಸಿನಿಮಾ, ಆಡ್ ಶೂಟ್‌ಗಳಲ್ಲಿ ಹೆಚ್ಚೆಚ್ಚು ಬ್ಯುಸಿಯಾಗಿರುವ ಸಮಂತಾ ಆಗಾಗ ತನ್ನ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ.

ವೈಯುಕ್ತಿಕ ವಿಚಾರಗಳಿಗೆ ಸುದ್ದಿಯಾದ ಸ್ಯಾಮ್-ಚಾಯ್
ಕಳೆದ ವರ್ಷ ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಡಿವೋರ್ಸ್ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಒಬ್ಬರಿಗೊಬ್ಬರು ಪ್ರತ್ಯೇಕಗೊಂಡ ಬಳಿಕ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಇವರಿಬ್ಬರು ಒಂದಲ್ಲಾ ಒಂದು ವೈಯುಕ್ತಿಕ ವಿಚಾರಗಳಿಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಇವರಿಬ್ಬರೂ ಇನ್‌ಸ್ಟಾಗ್ರಾಂ ವಿಚಾರದಲ್ಲಿ ಫಾಲೋ, ಅನ್ ಫಾಲೋ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಡಿವೋರ್ಸ್ ಅನೌನ್ಸ್ ಆದ ಬಳಿಕ ಸಮಂತಾ ನಾಗ ಚೈತನ್ಯಾರನ್ನು ತಮ್ಮ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಾಗಚೈತನ್ಯಾಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವಿದೆ.

ಇದರ ಹಿಂದಿನ ಕಾರಣ ಏನು ಗೊತ್ತಾ?
ಕುತೂಹಲಕಾರಿ ವಿಚಾರ ಅಂದ್ರೆ, ನಾಗಚೈತನ್ಯ ಇನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಮಂತಾರನ್ನು ಫಾಲೋ ಮಾಡುತ್ತಿದ್ದಾರೆ. ಸಮಂತಾ ಕೆಲ ದಿನಗಳ ಹಿಂದೆಯೇ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ್ದರೂ ಕೂಡ ನಾಗ ಚೈತನ್ಯ ಆ ಕೆಲಸವನ್ನು ಮಾಡಲು ಹೋಗಿಲ್ಲ. ಇದು ಈಗ ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಕೆರಳಿಸಿದೆ. ಇದರ ಹಿಂದಿನ ಕಾರಣ ಏನು ಅನ್ನೋದರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಸಮಂತಾ ಬಗ್ಗೆ ಇನ್ನೂ ಮಾತನಾಡದ ನಾಗಚೈತನ್ಯ ಡಿವೋರ್ಸ್ ವಿಚಾರವಾಗಿ ಇನ್ನೂ ಮೌನ ಮುರಿದಿಲ್ಲ.

ಸಂಭಾವನೆ ವಿಚಾರದಲ್ಲಿ ಸದ್ದು ಮಾಡಿದ್ದ ಸಮಂತಾ
ಮತ್ತೊಂದು ಇಂಟ್ರೆಸ್ಟಿಂಗ್ ಅಂಶವೆಂದರೆ, ಸಮಂತಾ ಮಾಜಿ ಪತಿ ನಾಗಚೈತನ್ಯರನ್ನು ಅನ್‌ಫಾಲೋ ಮಾಡಿದ್ದಾರೆ. ಆದರೆ ನಾಗಚೈತನ್ಯ ಕುಟುಂಬ ಸದಸ್ಯರಾದ ನಾಗಾರ್ಜುನಾ, ರಾಣಾ, ವೆಂಕಟೇಶ್ ಮತ್ತು ಅಖಿಲ್ ಅವರನ್ನು ಹಿಂಬಾಲಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಸಮಂತಾ ಸಂಭಾವಣೆ ವಿಚಾರಕ್ಕೂ ಸುದ್ದಿಯಾಗಿದ್ದರು. ಪ್ರಸ್ತುತ ಸಮಂತಾ ಪ್ರತಿ ಸಿನಿಮಾಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ಈ ಮೂಲಕ ಸಮಂತಾ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಗೂ ಈಗ 3 ಕೋಟಿಗಿಂತಲೂ ಕಡಿಮೆ ಸಂಭಾವನೆ ಪಡೆಯುದಿಲ್ಲವಂತೆ.


Click it and Unblock the Notifications











