ಸಮಂತಾಗೆ ಪ್ರಶಸ್ತಿ: ಸಾಮಾಜಿಕ ಕಾರ್ಯಕ್ಕೆ ಸೈ ಎನಿಸಿಕೊಂಡ ನಟಿ!

ನಟಿ ಸಮಂತಾ ಸಿನಿಮಾ, ವದಂತಿಗಳಿಂದ ಸುದ್ದಿ ಆಗುತ್ತಿದ್ದರು. ಅದರೆ ಸಮಂತಾ ಕೇವಲ ಸಿನಿಮಾ ಮಾಡುತ್ತಾ, ಸಿನಿಮಾದಿಂದ ದುಡ್ಡು ಮಾಡುತ್ತಾ ಕೂತಿಲ್ಲ. ಬದಲಿಗೆ ತನ್ನನ್ನು ತಾನು ವಿಶೇಷ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಈಗ ವಿಚಾರವೊಂದು ಹೊಸ ಬಂದಿದೆ. ಸಮಂತಾ ಸಾಮಾಜಿಕ ಕಾರ್ಯದ ತನ್ನ ಸಹಾಯ ಹಸ್ತವನ್ನು ಚಾಚಿದ್ದಾರೆ.

ಅಷ್ಟಕ್ಕೂ ಸಮಂತಾ ಹೆಸರು ಅತಿ ಹೆಚ್ಚಾಗಿ ಸದ್ದು ಮಾಡಿದ್ದು ಅಂದರೆ ಅದು ಆಕೆ ನಾಗಚೈತನ್ಯ ಜೊತೆಗೆ ವಿಚ್ಛೇದನ ಮಾಡಿಕೊಂಡ ಬಳಿಕ. ಸಮಂತಾ ಮತ್ತು ನಾಗಚೈತನ್ಯ ನಡುವೆ ಏನಾಗಿದೆ ಎನ್ನುವ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡಿದ್ದವು. ಆದರೆ ಸಮಂತಾ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ತಮ್ಮ ಸಿನಿಮಾ ಕೆಲಸಗಳ ಮೂಲಕ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಸಮಂತಾ ತೆರೆಮರೆಯಲ್ಲಿ ಮಾಡುತ್ತಿರುವ ಮತ್ತೊಂದು ಕೆಲಸ ಈಗ ಮುನ್ನೆಲೆಗೆ ಬಂದಿದೆ. ಸಮಂತಾ ಮಾಡುತ್ತಿರುವ ಉತ್ತಮ ಕಾರ್ಯಗಳಿಗಾಳಿ ಸರ್ಕಾರದಿಂದ ಸಮಂತಾಗೆ ಬಹುಮಾನ ಕೂಡ ಸಿಕ್ಕಿದೆ. ಈ ವಿಚಾರವನ್ನು ಸಮಂತಾ ಫೊಟೋ ಮೂಲಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಎನ್‌ಜಿಒ ನಡೆಸುತ್ತಿರುವ ನಟಿ ಸಮಂತಾ!

ಎನ್‌ಜಿಒ ನಡೆಸುತ್ತಿರುವ ನಟಿ ಸಮಂತಾ!

ನಟಿ ಸಮಂತಾ ಸಿನಿಮಾ ಜೊತೆಜೊತೆಗೆ ಸಾಮಾಜಿಕ ಕಾರ್ಯಕ್ಕೂ ಮುಂದಾಗಿದ್ದಾರೆ. ಸಮಂತಾ ತಮ್ಮದೇ ಆದ ಎನ್‌ಜಿಒ ಸಂಸ್ಥೆಯ ಮೂಲಕ ಕೊಡುಗೆ ನೀಡುತ್ತಿದ್ದಾರೆ. ಸಮಂತಾ ತಾನೆ ಸ್ವತಃ ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. 'ಪ್ರತ್ಯುಷಾ ಸಪೋರ್ಟ್' ಎನ್ನುವ ಎನ್‌ಜಿಒ ಸಂಸ್ಥೆ ನಡೆಸುತ್ತಿದ್ದಾರೆ ಸಮಂತಾ. ಈ ಎನ್‌ಜಿಒ 2014ರಲ್ಲಿ ಆರಂಭಿವಾಗಿದೆ. ಅಲ್ಲಿಂದ ಇಲ್ಲಿ ತನಕ ಸಿನಿಮಾ ಸಮಂತಾ ನೇತೃತ್ವದಲ್ಲಿ ಹಲವು ಕಾರ್ಯಗಳು ನಡೆದಿವೆ.

ಚಾಂಪಿಯನ್ಸ್ ಆಫ್ ಚೆಂಜ್ ಪ್ರಶಸ್ತಿ ಪಡೆದ ಸಮಂತಾ!

ಈ ಸಂಸ್ಥೆಯ ಮೂಲಕ ಬಡ ಮಕ್ಕಳು ಮತ್ತು ಮಹಿಳೆಯರಿಗೆ ಸಹಾಯ ಮಾಡಲಾಗುತ್ತುದೆ. ಈ ಬಗ್ಗೆ ಸಮಂತಾ ಹಲವು ಬಾರಿ ಹೇಳಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಾರಕ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಹಾಗಾಗಿ 'ಪ್ರತ್ಯುಷಾ ಸಪೋರ್ಟ್' ಎನ್‌ಜಿಒ ಮೂಲಕ ಚಿಕಿತ್ಸೆಗೆ ಸಾಕಷ್ಟು ಮಾಡಲಾಗುತ್ತದೆಯಂತೆ. ಸಮಂತಾ ಅವರಿಗೆ ತೆಲಂಗಾಣ ಸರ್ಕಾರದಿಂದ ಪ್ರಶಸ್ತಿ ಸಿಕ್ಕಿದೆ. 'ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ 2021' ಪ್ರಶಸ್ತಿ ಸಮಂತಾ ಮುಡಿಗೇರಿದೆ.

ಕೈ ಪೇಂಟಿಂಗ್ ಮಾಡಿದ ಸೀರೆಯುಟ್ಟ ಸಮಂತಾ!

ಕೈ ಪೇಂಟಿಂಗ್ ಮಾಡಿದ ಸೀರೆಯುಟ್ಟ ಸಮಂತಾ!

ಇದು ಮಾತ್ರವಲ್ಲ ನಟಿ ಸಮಂತಾ ಸಣ್ಣ ಕೈಗಾರಿಗಳಿಗೂ ಕೂಡ ಬೆಂಬಲ ನೀಡುತ್ತಾರೆ. ಹಾಗಾಗಿ ಕೈ ಮಗ್ಗದಿಂದ ತಯಾರಿಸಿದ ಸೀರೆಯನ್ನು, ಉಡುಪುಗಳನ್ನು ಸಮಂತಾ ಧರಿಸುತ್ತಾರೆ. ಪ್ರಶಸ್ತಿ ವಿಚಾರವನ್ನು ಸಾಮಾಜಿಕ ಸಜಾಲತಾಣದಲ್ಲಿ ಹಂಚಿಕೊಂಡ ಸಮಂತಾ ಕೈಯಿಂದ ಚಿತ್ರಿಸಲಾದ, ಕೈ ಮಗ್ಗದಲ್ಲಿ ತಯಾರಾದ 1.15 ಲಕ್ಷ ಬೆಲೆಯುಳ್ಳ ರೇಶ್ಮೆ ಸೀರೆಯನ್ನು ತೊಟ್ಟು ಗಮನ ಸೆಳೆದಿದ್ದರು ಸಮಂತಾ.

ಶಾಕುಂತಲೆಯಾಗಿ ದರ್ಶನ ನೀಡಲಿರುವ ಸಮಂತಾ!

ಶಾಕುಂತಲೆಯಾಗಿ ದರ್ಶನ ನೀಡಲಿರುವ ಸಮಂತಾ!

ಇನ್ನು ಸಮಂತಾ ಸಿನಿಮಾ ವಿಚಾರಕ್ಕೆ ಬರುವುದಾರೆ. ಸಮಂತಾ ಸದ್ಯ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ 'ಶಾಕುಂತಲಂ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಮಂತಾ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರೊಂದಿಗೆ ಸಮಂತಾ 'ಯಶೋಧ', 'ಕಾತು ವಾಕುಲ ರೆಂಡು ಕಾದಲ್' ಸಿನಿಮಾಗಳು ಕೂಡ ರಿಲೀಸ್‌ಗೆ ಸಿದ್ಧ ಆಗುತ್ತಿವೆ. ಇನ್ನು ಸಮಂತಾಳ ಹಾಲಿವುಡ್ ಸಿನಿಮಾ ಅದಾಗಲೇ ಪ್ರಕಟ ಆಗಿದೆ.

More from Filmibeat

English summary
Samantha Ruth Prabhu Receives Champions Of Change Award For Her Social Work
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X