ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ, ನಾಗಚೈತನ್ಯ ಕುಟುಂಬಕ್ಕೆ ಶಾಕ್!
ನಟಿ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಪಡೆದ ದಿನದಿಂದಲೂ ಅವರ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಈಗಲೂ ಅವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ, ಅವರ ಅಭಿಮಾನಿಗಳ ಕಿವಿ ನೆಟ್ಟಗಾಗುತ್ತೆ. ಯಾಕೆಂದರೆ ಈ ಜೋಡಿಯನ್ನು ಒಂದು ಮಾಡಲು ಕುಟುಂಬಸ್ಥರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಆ ಎಲ್ಲಾ ಸುದ್ದಿಗಳಿಗೂ ಈಗ ಪೂರ್ಣ ವಿರಾಮ ಇಟ್ಟಿದ್ದಾರೆ ನಟಿ ಸಮಂತಾ. ಸಮಂತಾ ಹೊಸ ನಡೆ ಶಾಕಿಂಗ್ ಆಗಿದೆ. ನಾಗಚೈತನ್ಯ ಕುಟುಂಬಕ್ಕೆ ಸಮಂತಾ ಹೊಸ ನಿರ್ಧಾರ ಶಾಕ್ ನೋಡಿದೆಯಂತೆ. ವಿಚ್ಛೇದನ ಪಡೆದ ಬಳಿಕ ಮತ್ತೇನು ಬಾಕಿ ಎಂದು ಅನ್ನಿಸಬಹುದು. ಆದರೆ ಕುಟುಂಬದಲ್ಲಿ ಇವರನ್ನು ಮತ್ತೇ ಒಂದು ಮಾಡುವ ಪ್ರಯತ್ನ ಮಾತ್ರ ನಡೆಯುತ್ತಿತ್ತಂತೆ.
ಆದರೆ ಸಮಂತಾ ನಾಗಚೈತನ್ಯಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವ ನಿರ್ಧಾರ ಮಾಡಿದ್ದು, ಇನ್ನು ಮುಂದೆ ಯಾವತ್ತೂ ಈ ಜೋಡಿ ಒಂದಾಗಲು ಸಾಧ್ಯವೇ ಎನ್ನುವಂತಾಗಿದೆ. ಅಷ್ಟಕ್ಕೂ ಈಗ ಮಾಡಿರುವುದೇನು ಎನ್ನುವುದನ್ನು ಮುಂದೆ ಓದಿ.

ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ!
ನಟಿ ಸಮಂತಾ ಮತ್ತು ನಾಗಚೈತನ್ಯ 2021 ಅಕ್ಟೋಬರ್ 2ರಂದು ವಿಚ್ಛೇದನ ಪಡೆದುಕೊಂಡು ದೂರಾಗಿದ್ದಾರೆ. ನಾಲ್ಕು ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಅಲ್ಲಿಂದ ಇಲ್ಲಿ ತನಕ ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ಜೋಡಿಯ ಸ್ನೇಹ ಕೂಡ ಎಲ್ಲೂ ಕಾಣಿಸಿಲ್ಲ. ಅವರು ಸಂಪೂರ್ಣ ದೂರ ಆಗಿದ್ದಾರೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋದ ನಟಿ ಸಮಂತಾ ತಮ್ಮ ಮದುವೆ ಸೀರೆಯನ್ನು ಹಿಂದಿರುಗಿಸಿದ್ದಾರಂತೆ. ಮದುವೆಯಲ್ಲಿ ನಾಗಚೈತನ್ಯ ಮನೆಯವರು ಕೊಟ್ಟಿದ್ದ ರೇಷ್ಮೆ ಸೀರೆಯನ್ನು ವಾಸಪ್ ಕೊಟ್ಟಿದ್ದಾರೆ ಎಂದು ವರದಿ ಆಗಿದೆ.

ನಾಗಚೈತನ್ಯ ವಸ್ತುಗಳನ್ನೆಲ್ಲಾ ವಾಪಸ್ ಕೊಡ್ತಾರಂತೆ ಸಮಂತಾ!
ಸಮಂತಾ ಮದುವೆ ಸೀರೆಯನ್ನು ಮಾತ್ರವಲ್ಲ, ನಾಗಚೈತನ್ಯ ಮತ್ತು ಅವರ ಮನೆಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ವಾಪಸ್ ಕೊಡಬೇಕೆಂದು ನಿರ್ಧಾರಿಸಿದ್ದಾರೆ. ಸಮಂತಾಗೆ ನಾಗಚೈನ್ಯ ವಸ್ತುಗಳನ್ನು ಉಳಿಸಿಕೊಳ್ಳಲು ಇಷ್ಟ ಇಲ್ಲ ಎನ್ನುತ್ತಿದೆ ಸಮಂತಾ ಸ್ನೇಹಿತ ಬಳಗ. ಹಾಗಾಗಿ ಒಂದೊಂದೇ ವಸ್ತುಗಳನ್ನು ಹಿಂದಿರುಗಿಸಿ ಸಂಪೂರ್ಣವಾಗಿ ನಾಗಚೈತನ್ಯ ಕುಟುಂಬದಿಂದ ದೂರ ಆಗಲು ಸಮಂತಾ ನಿರ್ಧರಿಸಿದ್ದಾರಂತೆ. ಸಮಂತಾ ದುಬಾರಿ ಮದುವೆ ಸೀರೆ ಆ ಸಮಯದಲ್ಲಿ ಸಾಕಷ್ಟು ಸುದ್ದಿ ಆಗಿತ್ತು.

ಸಮಂತಾ ನಡೆ ವಿರೋಧಿಸಿದ ಅಕ್ಕಿನೇನಿ ಕುಟುಂಬ!
ಇನ್ನು ಸಮಂತಾ ನಡೆಯನ್ನು ಅಕ್ಕಿನೇನಿ ಕುಟುಂಬ ವಿರೋಧ ಮಾಡಿದೆಯಂತೆ. ಮದುವೆ ಸೀರೆಯನ್ನು ವಾಪಸ್ ಕೊಟ್ಟಿದ್ದು ಕುಟುಂಬಕ್ಕೆ ಹೆಚ್ಚಿನ ನೋವುಂಟು ಮಾಡಿದೆಯಂತೆ. ಸಮಂತಾಳಿಂದ ಈ ನಡೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಕುಟುಂಬಸ್ಥರು ಹೇಳಿಕೊಂಡಿರುವುದಾಗಿ ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ. ಯಾಕೆಂದರೆ ಎಲ್ಲೋ ಒಂದು ಕಡೆ ಇವರು ಮುನಿಸು ಮರೆಯಾದ ಬಳಿಕ ಮತ್ತೆ ಒಂದಾಗುತ್ತಾರೆ ಎನ್ನುವ ನಿರೀಕ್ಷೆ ಕುಟುಂಬದಲ್ಲಿ ಮನೆ ಮಾಡಿತ್ತಂತೆ.

ಸಮಂತಾ, ನಾಗಚೈತನ್ಯ ಚಿತ್ರಗಳಲ್ಲಿ ಬ್ಯುಸಿ!
ವಿಚ್ಛೇದನದ ಬಳಿಕ ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಈ ಜೋಡಿ, ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ನಾಗಚೈತನ್ಯ ಹೊಸ ಬಂಗಾರ್‌ರಾಜು ಬಳಿಕ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅತ್ತ ಸಮಂತಾ ಅಭಿನಯದ ತಮಿಳಿನ ಚಿತ್ರ ರಿಲೀಸ್‌ಗೆ ರೆಡಿ ಇದ್ದು, ತೆಲುಗಿನ ಶಾಕುಂತಲಂ ಮತ್ತು ಯಶೋಧ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ಹಾಲಿವುಡ್ ಚಿತ್ರವೊಂದರಲ್ಲೂ ಸಮಂತಾ ಅಭಿನಯಿಸುತ್ತಿದ್ದಾರೆ.


Click it and Unblock the Notifications











