For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನ ಈ ಸ್ಟಾರ್ ನಟನ ಜೊತೆ ನಟಿಸಬೇಕಂತೆ ಸಮಂತಾ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸದ್ಯ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ವೆಬ್ ಸೀರಿಸ್ ನ ಟ್ರೈಲರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಸಮಂತಾ ಪಾತ್ರಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  ಸಮಂತಾ ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ನಟಿಸಿದ್ದು, ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ದಕ್ಷಿಣದ ತಾರೆ ಸಮಂತಾ ಬಾಲಿವುಡ್ ಗೆ ಯಾವಾಗ ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ಸಮಂತಾ ಸೌತ್ ಸಿನಿರಂಗ ಬಿಟ್ಟು ಬಾಲಿವುಡ್ ಕಡೆ ಮುಖ ಮಾಡಿಲ್ಲ. ಇತ್ತೀಚಿಗೆ ಸಮಂತಾ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದು, ಯಾರ ಜೊತೆ ತೆರೆಹಂಚಿಕೊಳ್ಳಬೇಕು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಮುಂದೆ ಓದಿ..

  ರಣಬೀರ್ ಕಪೂರ್ ಜೊತೆ ನಟಿಸಬೇಕೆಂದ ಸಮಂತಾ

  ರಣಬೀರ್ ಕಪೂರ್ ಜೊತೆ ನಟಿಸಬೇಕೆಂದ ಸಮಂತಾ

  ಸಮಂತಾಗೆ ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ ಜೊತೆ ನಟಿಸುವ ಆಸೆ ಇದೆಯಂತೆ. ಸಂದರ್ಶನದಲ್ಲಿ ನಿರೂಪಕ ಬಾಲಿವುಡ್ ನ ಯಾವ ಸ್ಟಾರ್ ನಟನ ಜೊತೆ ರೊಮ್ಯಾನ್ಸ್ ಮಾಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಸಮಂತಾ, ರಣಬೀರ್ ಸಿಂಗ್ ಹೆಸರು ಹೇಳಿದ್ದಾರೆ.

  ಮನೋಜ್ ಪಾತ್ರದಲ್ಲಿ ಯಾರನ್ನು ನೋಡಲು ಬಯಸುತ್ತಾರೆ?

  ಮನೋಜ್ ಪಾತ್ರದಲ್ಲಿ ಯಾರನ್ನು ನೋಡಲು ಬಯಸುತ್ತಾರೆ?

  ಫ್ಯಾಮಿಲಿ ಮ್ಯಾನ್-2ನಲ್ಲಿ ಮನೋಜ್ ಬಾಜಪಾಯಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಕಾಂತ್ ತಿವಾರಿ ಎನ್ನವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನೋಜ್ ಬಾಜಪಾಯಿ ನಿರ್ವಹಿಸಿದ ಪಾತ್ರದಲ್ಲಿ ಸೌತ್ ಸ್ಟಾರ್ ಯಾರನ್ನು ನೋಡಲು ಬಯಸುತ್ತೀರಿ ಎಂದು ನಿರೂಪಕ ಕೇಳಿದ ಪ್ರಶ್ನೆಗೆ, ಸಮಂತಾ ತನ್ನ ಮಾವ ನಾಗಾರ್ಜುನ ಅಕ್ಕಿನೇನಿ ಹೆಸರು ಹೇಳಿದ್ದಾರೆ.

  ಬಾಲಿವುಡ್ ಸಿನಿಮಾದಲ್ಲಿ ಯಾಕೆ ನಟಿಸಿಲ್ಲ ಸಮಂತಾ

  ಬಾಲಿವುಡ್ ಸಿನಿಮಾದಲ್ಲಿ ಯಾಕೆ ನಟಿಸಿಲ್ಲ ಸಮಂತಾ

  ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದ ಅನೇಕ ನಟಿಮಣಿಯರು ಬಾಲಿವುಡ್ ನಲ್ಲಿ ಮಿಂಚಿದ್ದಾರೆ. ಆದರೆ ಸಮಂತಾ ಯಾಕೆ ಇನ್ನು ಎಂಟ್ರಿ ಕೊಟ್ಟಿಲ್ಲ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಈ ಕುತೂಹಲಕ್ಕೂ ಸಮಂತಾ ಉತ್ತರ ನೀಡಿದ್ದಾರೆ. ಬಾಲಿವುಡ್ ನಲ್ಲಿ ನಟಿಸಲು ಭಯಪಡುತ್ತಿದ್ದೇನೆ ಎಂದು ಹೇಳಿದ್ದಾರೆ.

  Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada
  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಬಳಿ ಇರುವ ಸಿನಿಮಾಗಳು

  ಸದ್ಯ ಹಿಂದಿ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿರುವ ಸಮಂತಾ ಸದ್ಯದಲ್ಲೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿದರೂ ಅಚ್ಚರಿ ಇಲ್ಲ. ಸಮಂತಾ ವೆಬ್ ಸೀರಿಸ್ ಮಾತ್ರವಲ್ಲದೆ ಇನ್ನು ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಎರಡು ಸಿನಿಮಾದ ಜೊತೆಗೆ ತೆಲುಗಿನಲ್ಲೂ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tollywood Actress Samantha reveals she would like to act with Bollywood Actor Ranbir Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X