ಸಮಂತನಾ? ಪತಿ ರಾಜ್ ನಿಡಿಮೋರುನಾ? ಇಬ್ಬರು ಯಾರು ಶ್ರೀಮಂತರು? ಇವರ ಆಸ್ತಿಯ ಮೌಲ್ಯವೆಷ್ಟು?

ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅದ್ಭುತ ನಟಿ. 2010ರಲ್ಲಿ 'ಯೇ ಮಾಯಾ ಚೇಸಾವೆ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಿಂದಲೇ ಪ್ರೇಕ್ಷಕರ ಮನ ಗೆದ್ದ ಸಮಂತಾ ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ನಟನಾ ಕೌಶಲ್ಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದರು. ಇಂದು ಸಮಂತಾ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಪ್ರತಿ ಬಾರಿಯೂ ಧೈರ್ಯದಿಂದ ಪುಟಿದೇಳುವ ಮೂಲಕ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ.

ಸಮಂತಾ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ವೈವಾಹಿಕ ಜೀವನದಲ್ಲಿ ಕಷ್ಟ ಅನುಭವಿಸಿದ್ದರು. ನಾಗಚೈತನ್ಯ ಜೊತೆಗಿನ ವಿವಾಹ ಅವರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆದ್ರೀಗ 'ದಿ ಫ್ಯಾಮಿಲಿ ಮ್ಯಾನ್' ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

Samantha Ruth Prabhu and Husband Raj Nidimoru Net worth and luxury assets

ಸಮಂತಾ ಸಿನಿಮಾದ ಜೊತೆ ಜೊತೆಗೆ ಪ್ರತ್ಯೂಷಾ ಸಪೋರ್ಟ್ ಎಂಬ ಟ್ರಸ್ಟ್ ಅನ್ನು ನಡೆಸುತ್ತಿದ್ದಾರೆ. ಈ ಟ್ರಸ್ಟ್ ಮೂಲಕ ಮಹಿಳೆಯರ ಮತ್ತು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನು ರಾಜ್ ಅವರನ್ನು ಸಮಂತಾ ಮದುವೆ ಆಗುತ್ತಿದ್ದಂತೆ ಇಬ್ಬರು ಸಂಪಾಧಿಸಿರುವ ಆಸ್ತಿಯ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಇಬ್ಬರಲ್ಲಿ ಯಾರ ಬಳಿ ಎಷ್ಟು ಮೌಲ್ಯದ ಆಸ್ತಿಯಿದೆ? ತಿಳಿಯುವುದಕ್ಕೆ ಮುಂದೆ ಓದಿ.

ನಟಿ ಸಮಂತಾ ಬಳಿ ಪ್ರಾಪರ್ಟಿ ಎಷ್ಟಿದೆ?

ಸಮಂತಾ ರುತ್ ಪ್ರಭು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹100 ರಿಂದ ₹101 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಈ ಸಂಪತ್ತನ್ನು ಸಮಂತಾ ಸಿನಿಮಾಗಳಿಂದ, ಜಾಹೀರಾತುಗಳಿಂದ ಹಾಗೂ ಹೂಡಿಕೆಗಳಿಂದ ಗಳಿಸಿದ್ದಾರೆ. ಸಮಂತಾ ತಮ್ಮ ಪ್ರತಿ ಸಿನಿಮಾಗಾಗಿ ಭಾರಿ ಸಂಭಾವನೆ ಪಡೆಯುತ್ತಾರೆ. ಪ್ರತಿ ಪ್ರಾಜೆಕ್ಟ್‌ಗೂ ಅವರು ₹3 ರಿಂದ ₹5 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ. ಅವರ ಜನಪ್ರಿಯತೆಗೆ ತಕ್ಕಂತೆ ಸಂಭಾವನೆಯೂ ಹೆಚ್ಚಾಗಿದೆ. ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಅವರ ಬಹುನಿರೀಕ್ಷಿತ ವೆಬ್ ಸರಣಿ 'ಸಿಟಾಡೆಲ್: ಹನಿ ಬನ್ನಿ' ಗಾಗಿ ಅವರು ₹10 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

Samantha Ruth Prabhu and Husband Raj Nidimoru Net worth and luxury assets

ಜಾಹೀರಾತುಗಳಿಂದಲೂ ಆದಾಯ

ಸಮಂತಾ ಸಿನಿಮಾ ಹೊರತುಪಡಿಸಿ ಜಾಹೀರಾತುಗಳಿಂದಲೂ ಅಪಾರ ಆದಾಯ ಗಳಿಸುತ್ತಾರೆ. ಅವರು ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ಈ ಪ್ರಚಾರ ಕಾರ್ಯಗಳಿಂದ ವಾರ್ಷಿಕವಾಗಿ ಸುಮಾರು ₹8 ಕೋಟಿ ಗಳಿಸುತ್ತಾರೆ. ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಸಮಂತಾ ಬೇಡಿಕೆಯಿದ್ದು, ಲೈಫ್‌ ಸ್ಟೈಲ್ ಪ್ರಾಡಕ್ಟ್‌ಗಳಿಗೆ ರಾಯಾಬಾರಿಯಾಗಿದ್ದಾರೆ.

ಸಮಂತಾ ಐಷಾರಾಮಿ ಲೈಫ್‌ಸ್ಟೈಲ್

ಭಾರತದ ಟಾಪ್‌ ಸ್ಟಾರ್‌ ಸಮಂತಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ದುಬಾರಿ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್: ಹೈದರಾಬಾದ್‌ನಲ್ಲಿರುವ ಸಮಂತಾ ಸ್ಟೈಲಿಶ್ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದರ ಮೌಲ್ಯ ಸುಮಾರು ₹7.8 ಕೋಟಿ ಎಂದು ವರದಿಯಾಗಿದೆ.
ಮುಂಬೈನ ಸೀ-ಫೇಸಿಂಗ್ ಫ್ಲಾಟ್: ಮುಂಬೈನಲ್ಲಿ ಸಮುದ್ರದ ಸುಂದರ ವೀಕ್ಷಣೆಯಿರುವ ಮೂರು-ಬೆಡ್ರೂಮ್ ಫ್ಲಾಟ್ ಅನ್ನು ಅವರು ಹೊಂದಿದ್ದಾರೆ. ಇದರ ಮೌಲ್ಯ ಸುಮಾರು ₹15 ಕೋಟಿ ಎಂದು ಹೇಳಲಾಗಿದೆ.
ಸಮಂತಾ ದುಬಾರಿ ಕಾರುಗಳು: ಸಮಂತಾ ಬಳಿ ದುಬಾರಿ ಕಾರುಗಳಿವೆ. ಅವುಗಳಲ್ಲಿ ಆಡಿ Q7, ಪೋರ್ಷೆ ಕೇಮನ್ GTS, ಲ್ಯಾಂಡ್ ರೋವರ್ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್ GLC ಮತ್ತು ಬಿಎಂಡಬ್ಲ್ಯು 7 ಸೀರಿಸ್ ನಂತಹ ಐಷಾರಾಮಿ ಕಾರುಗಳು ಸೇರಿವೆ.

ಸಮಂತಾ ಪತಿ ರಾಜ್ ಆಸ್ತಿ ಎಷ್ಟು?

ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಡೇಟ್ ಮಾಡುತ್ತಿದ್ದರು. ಇಷ್ಟು ಇಬ್ಬರು ಮದುವೆ ಆಗುತ್ತಾರೆಂಬ ಸುದ್ದಿ ಹರಿದಾಡಿತ್ತು. ನಿರೀಕ್ಷೆ ಮಾಡಿದಂತೆ ರಾಜ್ ಅವರನ್ನೇ ಸಮಂತಾ ವಿವಾಹವಾಗಿದ್ದಾರೆ. ಈ ಮೂಲಕ ಗಾಳಿಸುದ್ದಿಗಳನ್ನು ಈ ಜೋಡಿ ನಿಜ ಮಾಡಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ನಿರ್ದೇಶಕ ಏನೂ ಕಮ್ಮಿಯಿಲ್ಲ. 'ದಿ ಫ್ಯಾಮಿಲಿ ಮ್ಯಾನ್' ಸೀರಿಸ್, 'ಸಿಟಾಡೆಲ್: ಹನಿ ಬನ್ನಿ' ಅಂತಹ ವೆಬ್ ಸೀರಿಸ್‌ಗಳನ್ನು ನಿರ್ದೇಶಿಸಿರುವ ರಾಜ್ ನಿರ್ಮಾಪಕರು ಕೂಡ ಹೌದು. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ರಾಜ್ ಬಳಿ ₹85 ರಿಂದ ₹89 ಕೋಟಿ ಮೌಲ್ಯದ ಆಸ್ತಿಯಿದೆ ಎಂದು ಹೇಳಲಾಗಿದೆ.

More from Filmibeat

English summary
Samantha Ruth Prabhu and Husband Raj Nidimoru Net worth and luxury assets;
Read more about: samantha samantha ruth prabhu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X