ಖುಷಿ ಸಿನಿಮಾದ ಸಮಂತಾ - ವಿಜಯ್ ದೇವರಕೊಂಡ ನಡುವಿನ ರೋಮ್ಯಾಂಟಿಕ್ ದೃಶ್ಯಗಳು ವೈರಲ್!

By ಫಿಲ್ಮಿಬೀಟ್ ಡೆಸ್ಕ್

ನಟಿ ಸಮಂತಾ ರುತ್ ಪ್ರಭು ಮತ್ತು ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಸಿನಿಮಾ ಖುಷಿ ಸೆಪ್ಟೆಂಬರ್ 1 ರಂದು ಥಿಯೇಟರ್‌ಗಳ ಬಿಡುಗೆಡೆಯಾಗಿದ್ದು, ವಿಮರ್ಶಕರು ಮತ್ತು ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇಬ್ಬರ ಕೆಮಿಸ್ಟ್ರಿ ಸಕತ್ ವರ್ಕ್ ಆಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.

ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ಮತ್ತು ವಿಜಯ್ ಅವರ ರೋಮ್ಯಾಂಟಿಕ್ ದೃಶ್ಯದ ವೀಡಿಯೊ ಕಾಣಿಸಿಕೊಂಡಿದೆ. ಈ ವೈರಲ್ ವಿಡಿಯೋದಲ್ಲಿ ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಪರಸ್ಪರ ಗಾಢವಾಡ ಪ್ರೀತಿಯಲ್ಲಿ ಮುಳುಗಿದ್ದಾರೆ.

intimate-scenes-from-kushi-film-went-viral

ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಹಲವು ವಿಜಯ ದೇವಕೊಂಡ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಅರ್ಜುನ್ ರೆಡ್ಡಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಅರ್ಜುನ್ ರೆಡ್ಡಿ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ. "ಅವರಿಬ್ಬರೂ ಎಷ್ಟು ಮುದ್ದಾಗಿದ್ದಾರೆ" ಎಂದು ಹಲವರು ಖುಷಿಪಟ್ಟಿದ್ದಾರೆ.

ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಪ್ರಮುಖ ಪಾತ್ರದಲ್ಲಿದ್ದು, ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದೆ. ಇಬ್ಬರು ಪ್ರೇಮಿಗಳು, ಮದುವೆ ಸುತ್ತ ನಡೆಯುವ ಕಥೆಯಾಗಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ಸಚಿನ್ ಖೇಡೇಕರ್, ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ ಮತ್ತು ವೆನ್ನೆಲಾ ಕಿಶೋರ್ ಚಿತ್ರದಲ್ಲಿದ್ದಾರೆ.

intimate-scenes-from-kushi-film-went-viral

ಇನ್ನು, ಸಿನಿಮಾದ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿನಿಮಾ ತಂಡ, ಟ್ವಿಟರ್‌ನಿಂದ ದೃಶ್ಯಗಳನ್ನು ತೆಗೆಸುವ ಕೆಲಸಕ್ಕೆ ಇಳಿದಿದೆ. ಕಾಪಿರೈಟ್ ಮೂಲಕ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆಸಲಾಗಿದೆ. ಆದರೂ ಹಲವು ದೃಶ್ಯಗಳು ಇನ್ನೂ ಹರಿದಾಡುತ್ತಿವೆ.

ಸಿನಿಮಾ ಬಿಡುಗಡೆ ನಂತರ ಖುಷಿ ಹಂಚಿಕೊಂಡಿರುವ ನಟಿ ಸಮಂತಾ, "ಇದು ಯಾವತ್ತಿಗೂ ಸುಲಭವಾಗುವುದಿಲ್ಲ, ಕನಸನ್ನು ನನಸಾಗಿಸುವ ಸಾಧ್ಯತೆ ಜೀವನವನ್ನು ಆಸಕ್ತಿದಾಯಕವಾಗಿಸುತ್ತದೆ. ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ. ಜೊತೆಗೆ ಚಲನಚಿತ್ರದ ಬಿಡುಗಡೆಯ ನಂತರ, ಸಿನಿಮಾ ಬಿಡುಗಡೆ ಮೊದಲು, ಸಿನಿಮಾದಲ್ಲಿ ಅವರ ಪಾತ್ರ ಬಂದ ನಂತರ ಜನರ ಪ್ರತಿಕ್ರಿಯೆ ಎಲ್ಲವನ್ನೂ ಹೇಳುವ ಮೂರು ಫೋಟೋ ಮತ್ತು ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

ಶುಕ್ರವಾರ, ವಿಜಯ್ ದೇವರಕೊಂಡ ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ್ದರು. ತಮ್ಮ ಚಿತ್ರದ ಮೇಲೆ ಇಷ್ಟು ಪ್ರೀತಿ ತೋರಿಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ಪ್ರತಿಯೊಬ್ಬರೂ ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದರು.

More from Filmibeat

English summary
Samantha-Vijay Deverakonda Intimate Scenes from Kushi went Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X