ಇದು ಕೇವಲ ಆರಂಭ ; ಸಮಂತಾ-ರಾಜ್ ನಿಡಿಮೋರು, ಅಪ್ಪುಗೆಯೇ ಆರೈಕೆ ! 2ನೇ ಮದುವೆಗೆ ರೆಡಿ ಆಯ್ತಾ ವೇದಿಕೆ ?

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು.

ಇಂತಹ ಸಮಯದಲ್ಲಿ ಸುರಿಯುತ್ತಿರುವ ಕಣ್ಣೀರಿಗೆ ಹೆಗಲು ನೀಡಿದರೆ ಮನಸು ಸಮಾಧಾನಗೊಳ್ಳುತ್ತೆ. ನಮ್ಮ ಕಷ್ಟ ನಷ್ಟ ಆಲಿಸುವ ಜೀವವೊಂದು ಇನ್ನೂ ಇದೆ ಎಂಬ ಭಾವನೆ ಮೂಡುತ್ತೆ.'' ನಾಗಚೈತನ್ಯ'' ಅವರಿಂದ ದೂರವಾದ ನಂತರ ಸಮಂತಾ ಅವರಿಗೆ ಇದೇ ತರಹದ ಅನುಭವ ಆಗಿದೆಯಾ ಗೊತ್ತಿಲ್ಲ.

Samantha Ruth Prabhu Finds Her Family Man New Intimate Photo with Raj Nidimoru Breaks the Internet

ಆದರೆ, ಸಮಂತಾ ಮತ್ತು ''ಫ್ಯಾಮಿಲಿ ಮ್ಯಾನ್'' ನಿರ್ದೇಶಕ ರಾಜ್ ನಿಡಿಮೋರು ನಡುವೆ ಇರುವ ಸಂಬಂಧದ ಕುರಿತು ಹಲವು ದಿನಗಳಿಂದ ಹಲವರಲ್ಲಿ ಅನುಮಾನ ಇದ್ದೇ ಇದೆ. ಸಮಂತಾ ಮತ್ತು ರಾಜ್ ನಿಡಿಮೋರು ಅವರ ನಡೆ ಕೂಡ ಇದಕ್ಕೆ ಪೂರಕವಾಗಿಯೇ ಇದೆ. ಹೋದಲ್ಲಿ .. ಬಂದಲ್ಲಿ .. ಕುಂತಲ್ಲಿ.. ನಿಂತಲ್ಲಿ.. ಸಮಂತಾ ಅವರನ್ನು ರಾಜ್ ನಿಡಿಮೋರು ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ಮುಂಬೈಯಿಂದ ಹಿಡಿದು ತಿರುಪತಿಯವರೆಗೂ.. ಹೈದರಾಬಾದ್‌ದಿಂದ ಹಿಡಿದು ಅಮೆರಿಕಾದವರೆಗೂ ಇಬ್ಬರು ಜೊತೆ ಜೊತೆಯಲ್ಲಿ ಓಡಾಡುತ್ತಿದ್ದಾರೆ. ಕೈ ಕೈ ಹಿಡಿದುಕೊಂಡು ಊರ್‌ ತುಂಬಾ ಸುತ್ತುತ್ತಿದ್ದಾರೆ.

ಇನ್ನು ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಸಮಂತಾ ಮತ್ತು ರಾಜ್ ನಿಡಿಮೋರು ಅವರ ಈ ಆತ್ಮೀಯತೆಯನ್ನು ಕಂಡು ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ ಆಗಾಗ ಕೆರಳಿ ಕೆಂಡವಾಗುತ್ತಿದ್ದಾರೆ. ನಿಗೂಡಾರ್ಥದ ಪೋಸ್ಟ್‌ಗಳನ್ನು ಹಂಚಿಕೊಂಡು ಬದುಕು-ಕರ್ಮ-ಪಾಪ-ಪುಣ್ಯದ ಪಾಠವನ್ನು ಕೂಡ ಮಾಡುತ್ತಿರುತ್ತಾರೆ. ಹೀಗಿರುವಾಗ ಇದೀಗ ರಾಜ್ ನಿಡಿಮೋರು ಅವರನ್ನು ಸಮಂತಾ ಅಪ್ಪಿಕೊಂಡಿದ್ದಾರೆ. ಈ ಆತ್ಮೀಯ ಅಪ್ಪುಗೆಯ ಮೂಲಕ ಸಾಮಾಜಿಕ ಜಾಲತಾಣಕ್ಕೆ ಕಿಚ್ಚು ಹಚ್ಚಿದ್ದಾರೆ.

ಹೌದು, ಈಗೀಗ ಕೇವಲ ಕಲೆಯನ್ನು ಮಾತ್ರ ನಂಬಿಕೊಂಡು ಯಾರು ಕುಂತಿಲ್ಲ. ಜೀವನೋಪಾಯಕ್ಕೆ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಬೇರೆ ಬೇರೆ ವ್ಯಾಪಾರ-ವ್ಯವಹಾರ ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ಸೇರಿಕೊಂಡಿರುವ ಸಮಂತಾ ಪರ್ಪ್ಯೂಮ್ ಮಾರಲು ಶುರು ಮಾಡಿದ್ದಾರೆ. ಇತ್ತೀಚೆಗೆ ಇದೇ ಪರ್ಪ್ಯೂಮ್‌ನ ಹೊಸ ಎಡಿಷನ್‌ನ ಲಾಂಚ್ ಕಾರ್ಯಕ್ರಮವನ್ನು ಸಮಂತಾ ಮುಂಬೈನಲ್ಲಿ ಹಮ್ಮಿಕೊಂಡಿದ್ದರು. ಸಮಂತಾ ಅವರ ಈ ಪಾರ್ಟಿಯಲ್ಲಿ ತಮನ್ನಾ ಸೇರಿ ಹಲವು ಭಾಗವಹಿಸಿದ್ದರು. ಸಹಜವಾಗಿ ರಾಜ್ ನಿಡಿಮೋರು ಕೂಡ ಬಂದಿದ್ದರು.

ಇದೇ ಸಮಯದಲ್ಲಿ ರಾಜ್ ಅವರ ಜೊತೆ ಸಮಂತಾ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಆತ್ಮೀಯವಾಗಿ ಅಪ್ಪಿಕೊಂಡಿದ್ದಾರೆ. ಸ್ನೇಹಿತರು ಮತ್ತು ನನ್ನ ಕುಟುಂಬದಿಂದ ನಾನು ಸುತ್ತುವರೆದಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ನಾನು ಧೈರ್ಯದ ಹೆಜ್ಜೆ ಇಟ್ಟಿದ್ದೇನೆ. ರಿಸ್ಕ್ ತೆಗೆದುಕೊಂಡು, ನನ್ನ ಅಂತಃಪ್ರಜ್ಞೆಯನ್ನು ನಂಬಿ ಕಲಿಯುತ್ತಾ ಮುಂದುವರೆಯುತ್ತಿದ್ದೇನೆ, ಸಣ್ಣ ಸಣ್ಣ ಗೆಲುವುಗಳನ್ನು ಆಚರಿಸುತ್ತಿದ್ದೇನೆ, ನನ್ನ ಈ ಪ್ರಯಾಣದಲ್ಲಿ ತುಂಬಾನೇ ಶ್ರಮ ಪಡುವ, ನಂಬಿಕಸ್ಥ ಜನರ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ನೀಡಿದೆ. ಎಂದು ಬರೆದುಕೊಂಡಿದ್ದಾರೆ. ಇದು ಕೇವಲ ಆರಂಭ ಎಂದು ಹೇಳಿದ್ದಾರೆ.

samantha-ruth-prabhu-finds-her-family-man-new-intimate-photo-with-raj-nidimoru-breaks-the-internet

ಸದ್ಯ ಸಮಂತಾ ಅವರ ಈ ಫೋಟೊ ವೈರಲ್ ಆಗಿದ್ದು, ಹಲವರು ನಿಮ್ಮ ಸಂಬಂಧವನ್ನು ಈ ಮೂಲಕ ಅಧಿಕೃತಗೊಳಿಸುತ್ತಿದ್ದೀರಾ ಹೇಗೆ..? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಮದುವೆ ಯಾವಾಗ..? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇನ್ನೂ ಕೆಲವರು ಸಮಂತಾ ಅವರಿಗೆ ಆಗಲೇ ಶುಭಾಶಯವನ್ನು ಕೂಡ ಹೇಳಲು ಶುರು ಮಾಡಿದ್ದಾರೆ. ಸದ್ಯ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸಂಬಂಧ ಬಹುತೇಕ ಅಧಿಕೃತವಾದಂತೆ ಆಗಿದ್ದು ಇಬ್ಬರು ಮದುವೆಯ ಸುದ್ದಿಯನ್ನು ಯಾವಾಗ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Did Samantha and Raj Nidimoru just make it official? A 'cosy' new hug photo between the actress and 'Family Man' director is fueling confirmation buzz. Get the full story here.
Read more about: samantha love tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X