ಕೊನೆಗೂ ಗುಡ್‌ ನ್ಯೂಸ್ ಕೊಟ್ಟ ಸಮಂತಾ: ಕಂಗ್ರಾಟ್ಸ್ ಎಂದ ಅಭಿಮಾನಿಗಳು

ನಟಿ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತೇಯಿದೆ. ಕಳೆದ ಕೆಲ ದಿನಗಳಿಂದ ಅದನ್ನು ಮೆಟ್ಟಿ ಹೊರ ಬರಲು ಹೋರಾಟ ನಡೆಸುತ್ತಿದ್ದಾರೆ. ಸಿನಿಮಾ ಕೆಲಸಗಳನ್ನು ಪಕ್ಕಕ್ಕಿಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಯೋಸೈಟಿಸ್ ಗೆಲ್ಲಲು ಜಿಮ್‌ನಲ್ಲಿ ಭಾರೀ ಕಸರತ್ತು ಕೂಡ ನಡೆಸುತ್ತಿದ್ದಾರೆ.

ನೋವಿನ ನಡುವೆಯೇ ಸಮಂತಾ 'ಯಶೋದ' ಚಿತ್ರಕ್ಕೆ ಡಬ್ ಮಾಡಿದ್ದರು. ಆದರೆ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. 2 ಸಂದರ್ಶನಗಳನ್ನು ನೀಡಿದ್ದರು. ಅದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೂಡ ಮಾತನಾಡಿ ಕಣ್ಣೀರು ಹಾಕಿದ್ದರು. ಇತ್ತೀಚೆಗೆ 'ಶಾಕುಂತಲಂ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಕೈಯಲ್ಲಿ ಜಪ ಮಾಲೆ ಹಿಡಿದು ದರ್ಶನ ಕೊಟ್ಟಿದ್ದರು. ಅದಕ್ಕೂ ಮುನ್ನ ಮುಂಬೈಗೂ ಹೋಗಿ ಬಂದಿದ್ದರು.

ಇತ್ತೀಚೆಗೆ 'ಸಿಟಾಡೆಲ್' ಎನ್ನುವ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿರುವ ಸಂಗತಿಯನ್ನು ಸಮಂತಾ ಬಿಚ್ಚಿಟ್ಟಿದ್ದರು. ವಿಜಯ್ ದೇವರಕೊಂಡ ಅಭಿಮಾನಿಗಳ ಕ್ಷಮೆ ಕೇಳಿ ಶೀಘ್ರದಲ್ಲೇ 'ಖುಷಿ' ಚಿತ್ರೀಕರಣದಲ್ಲಿ ಭಾಗಿ ಆಗುವುದಾಗಿ ಹೇಳಿದ್ದರು. ಇದೀಗ ಅಭಿಮಾನಿಗಳಿಗೆ ಸಮಂತಾ ಸಂತಸದ ಸುದ್ದಿ ಕೊಟ್ಟಿದ್ದಾರೆ.

ಪರೋಕ್ಷವಾಗಿ ಸುಳಿವು ಕೊಟ್ಟ ಸ್ಯಾಮ್

'ಸಿಟಾಡೆಲ್' ಸೀರಿಸ್‌ನಲ್ಲಿ ಸಮಂತಾ ನಟಿಸ್ತಿದ್ದಾರೆ. ಕಳೆದ ಏಳೆಂಟು ತಿಂಗಳು ಅನುಭವಿಸಿದ ಯಾತನೆಯನ್ನು ಹೊಸ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಪರೋಕ್ಷವಾಗಿ ತಾವು ಮತ್ತೆ ಕೆಲಸ ಆರಂಭಿಸಿರುವುದರ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಾಲ್ಕೈದು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಭಾವುಕವಾಗಿ ಬರೆದುಕೊಂಡಿದ್ದಾರೆ. ಜನವರಿ ಎಂದು ಬರೆದು ಲವ್ ಸಿಂಬಲ್ ಹಾಕಿ ಸ್ಯಾಮ್ ಪೋಸ್ಟ್ ಮಾಡಿದ್ದಾರೆ.

ಏಳೆಂಟು ತಿಂಗಳ ಜರ್ನಿ ಬಿಚ್ಚಿಟ್ಟ ಸ್ಯಾಮ್

ಏಳೆಂಟು ತಿಂಗಳ ಜರ್ನಿ ಬಿಚ್ಚಿಟ್ಟ ಸ್ಯಾಮ್

ಸ್ಯಾಮ್ ಪೋಸ್ಟ್ ಮಾಡಿರುವ ಫೋಟೊಗಳು ಏನು ಹೇಳುತ್ತದೆ ಎನ್ನುವುದನ್ನು ನೋಡುವುದಾದರೆ ಮೊದಲ ಫೋಟೊದಲ್ಲಿ 'ಸೆಟಾಡೆಲ್' ಸಿನಿಮಾ ಕುರಿತು ಚರ್ಚಿಸುತ್ತಿರುವುದನ್ನು ನೋಡಬಹುದು. ಫೋಟೊದಲ್ಲಿ ವರುಣ್ ಧವನ್, ನಿರ್ದೇಶಕರಾದ ರಾಜ್‌ ಮತ್ತು ಡಿಕೆಯನ್ನು ಕೂಡ ನೋಡಬಹುದು. 2ನೇ ಫೋಟೊದಲ್ಲಿ ಸಮಂತಾ ಹಾಸಿಗೆ ಹಿಡಿಯುವಂತೆ ಆಗಿದ್ದು, ಅಂದರೆ ಮಯೋಸೈಟಿಸ್‌ನಿಂದ ಬಳಲಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಏಳುಬೀಳಿನ ಕಥೆ ಹೇಳುವ ಫೋಟೊಗಳು

ಏಳುಬೀಳಿನ ಕಥೆ ಹೇಳುವ ಫೋಟೊಗಳು

ಮತ್ತೊಂದು ಫೋಟೊದಲ್ಲಿ 'ಸಿಟಾಡೆಲ್' ಫೋಟೊಶೂಟ್, ಮಗದೊಂದರಲ್ಲಿ ಜಿಮ್ ವರ್ಕೌಟ್‌ ಮಾಡುತ್ತಿರುವುದು ಹಾಗೂ ಕೊನೆಯ ಚಿತ್ರದಲ್ಲಿ ಇತ್ತೀಚೆಗೆ 'ಶಾಕುಂತಲಂ' ಸಿನಿಮಾ ಟ್ರೈಲರ್ ಲಾಂಚ್‌ ಈವೆಂಟ್‌ಗೆ ಸೀರೆ ಉಟ್ಟು ರೆಡಿಯಾಗಿದ್ದ ಫೋಟೊ ಹಾಕಿದ್ದಾರೆ. ಆ ಮೂಲಕ ಕಳೆದ ಏಳೆಂಟು ತಿಂಗಳಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಈಗ ಜನವರಿಯಲ್ಲಿ ಮತ್ತೆ 'ಸಿಟಾಡೆಲ್' ವೆಬ್‌ ಸೀರಿಸ್‌ಗಾಗಿ ಕೆಲಸ ಮಾಡುತ್ತಿರುವ ಸಂಗತಿಯನ್ನು ತಿಳಿಸಿದ್ದಾರೆ.

ಸಮಂತಾಗೆ ಸ್ವಾಗತ ಕೋರಿದ ಫ್ಯಾನ್ಸ್

ಸಮಂತಾಗೆ ಸ್ವಾಗತ ಕೋರಿದ ಫ್ಯಾನ್ಸ್

ಮುಂಬೈನಲ್ಲಿ 'ಸಿಟಾಡೆಲ್' ಆಕ್ಷನ್ ವೆಬ್‌ ಸೀರಿಸ್ ಚಿತ್ರೀಕರಣ ನಡೀತಿದೆ. 'ಫ್ಯಾಮಿಲಿಮ್ಯಾನ್' ಸೀರಿಸ್ ಕಟ್ಟಿಕೊಟ್ಟಿದ್ದ ರಾಜ್ ಹಾಗೂ ಡಿಕೆ ಈ ವೆಬ್ ಸೀರಿಸ್‌ಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಮೇಜಾನ್ ಪ್ರೈಮ್‌ನಲ್ಲಿ ಇದು ಸ್ಟ್ರೀಮಿಂಗ್ ಆಗಲಿದೆ. ಮುಂಬೈ ನಂತರ ಉತ್ತರ ಭಾರತದಲ್ಲಿ ಚಿತ್ರೀಕರಣ ನಡೆಯಲಿದೆ. ನಂತರ ವಿದೇಶದಲ್ಲಿ ಶೂಟಿಂಗ್ ಮುಂದುವರೆಯಲಿದೆ. ಸರ್ಬಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲೂ ಚಿತ್ರೀಕರಣ ನಡೆಸಲು ಚಿಂತನೆ ನಡೆದಿದೆ. ಒಟ್ನಲ್ಲಿ ಸಮಂತಾ ಮತ್ತೆ ಕಂಬ್ಯಾಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

More from Filmibeat

English summary
Samantha Ruth Prabhu has shared her January photo dump with a heartfelt message. Samantha Ruth Prabhu will star alongside Varun Dhawan in Citadel. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X