ಪ್ರೇಮಿಗಳ ದಿನದಂದು ರೊಮ್ಯಾಂಟಿಕ್ ಮೂಡಿನಲ್ಲಿ ಸಮಂತಾ, ಫೋಟೊ ನೋಡಿ ಸುಸ್ತಾದ ಫ್ಯಾನ್ಸ್..!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು.

ಆದರೆ ಈಗ ಹಾಗಿಲ್ಲ. ಎಲ್ಲರೂ ವೇಗದೂತ ರೈಲಿನ ಪ್ರಯಾಣಿಕರು. ಬೆಳಗ್ಗೆ ಪರಿಚಯವಾಗಿ ಸಂಜೆ ಅಷ್ಟೊತ್ತಿಗೆ ಇಲ್ಲಿ ಬ್ರೇಕಪ್ ಆಗುತ್ತೆ. ಆ ನಂತರ ಅಷ್ಟೇ ಬೇಗ ಬೇರೆಯವರ ಮೇಲೆ ಮತ್ತೆ ಪ್ರೇಮಾಂಕುರವಾಗುತ್ತೆ. ಇದಕ್ಕೆ ಸಮಂತಾ ಮತ್ತೊಂದು ಉದಾಹರಣೆ.

samantha-ruth-prabhu-hints-at-finding-love-this-valentine-s-day

ಹೌದು, ನಾಗಚೈತನ್ಯ ಅವರನ್ನು ಆರು ವರ್ಷ ಹುಚ್ಚರಂತೆ ಪ್ರೀತಿ ಮಾಡಿ,ಆ ನಂತರ ಅದ್ಧೂರಿ ಮದುವೆಯಾಗಿ ನಾಲ್ಕು ವರ್ಷಗಳ ದಾಂಪತ್ಯ ಗೀತೆಯನ್ನು ಹಾಡಿದ ಸಮಂತಾ, ಸದ್ಯ ತಮ್ಮ ಹಳೆಯ ಪ್ರೇಮವನ್ನು ಮರೆತು ಮುನ್ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಅನುಮಾನ ಕಳೆದ ಅನೇಕ ದಿನಗಳಿಂದ ಅನೇಕರನ್ನು ಕಾಡುತ್ತಿದೆ. ದಿ ಫ್ಯಾಮಿಲಿ ಮ್ಯಾನ್ ನಿರ್ಮಾಪಕ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇಬ್ಬರ ನಡಾವಳಿ ಕೂಡ ಹಾಗೇ ಇದೆ ಅನ್ನಿ. ಇದೀಗ ಕೇಳಿ ಬರುತ್ತಿರುವ ಈ ಸುದ್ದಿಗಳಿಗೆ ಪೂರಕವಾಗಿ ಸಮಂತಾ ಪ್ರೇಮಿಗಳ ದಿನದ ಪ್ರಯುಕ್ತ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತಾವು ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವ ಸುಳಿವನ್ನು ನೀಡಿದ್ದಾರೆ.

ವ್ಯಕ್ತಿಯ ಜೊತೆ ರೊಮ್ಯಾಂಟಿಕ್ ಡಿನ್ನರ್ ಡೇಟ್‌ಗೆ ತೆರಳಿದಂತೆ ಇರುವ ಸಮಂತಾ, ತಂಪಾದ ಪಾನೀಯವನ್ನು ಕುಡಿದಿದ್ದಾರೆ. ಹೃದಯದ ಸಿಂಬಲ್‌ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯ ಬಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಂದು ಡಜನ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದೆಲ್ಲವನ್ನೂ ನೋಡಿದ ಅನೇಕರು ಈಗ ಸಮಂತಾ ಮತ್ತೊಮ್ಮೆ ಪ್ರೀತಿಯ ಸುಳಿಯಲ್ಲಿ ಸಿಲುಕಿರುವುದು ನೂರಕ್ಕೆ ನೂರು ಸತ್ಯವೆನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಮಂತಾ ಎದುರುಗಡೆ ಕುಳಿತು ಡ್ರಿಂಕ್ಸ್ ಸೇವಿಸುತ್ತಿರುವ ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ರಾಜ್ ನಿಡಿಮೋರು ಅವರೇ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಮಂತಾ ಅವರಿಗೆ ಶುಭಾಶಯವನ್ನು ಕೋರುತ್ತಿದ್ದರೆ, ಇನ್ನು ಕೆಲವರು ಎಂದಿನಂತೆ ಸಮಂತಾ ಅವರನ್ನು ಟೀಕಿಸುತ್ತಿದ್ದಾರೆ. ಊರಿಗೆಲ್ಲ ಬುದ್ದಿ ಹೇಳುವ ನೀವೆ ಮತ್ತೊಬ್ಬರ ಸಂಸಾರದಲ್ಲಿ ಹುಳಿ ಹಿಂಡುತ್ತಿದ್ದೀರಲ್ಲ, ಇದು ಸರೀನಾ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ಅಂದ್ಹಾಗೇ ಕೃಷ್ಣ ಡಿ.ಕೆ ಜೊತೆ ಸೇರಿ ರಾಜ್ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮಾಡುವಾಗ, ಸಮಂತಾ ಇವರ ಪಾಲಿಗೆ ಕೇವಲ ಸ್ನೇಹಿತೆಯಾಗಿದ್ದರು. ಇಬ್ಬರು ನಡುವೆ ನಿರ್ದೇಶಕ ಮತ್ತು ನಟಿಯ ನಡುವೆ ಇರಬೇಕಾದ ಸಂಬಂಧವೇ ಇತ್ತು. ಆದರೆ, ಅದ್ಯಾವಾಗ ರಾಜ್ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯ ಸ್ಥಾನದಲ್ಲಿ ಕೂರಿಸಿ 'ಸಿಟಾಡೆಲ್ ಹನಿ ಬನ್ನಿ' ಶುರುಮಾಡಿದರೋ ಅಲ್ಲಿಂದಾಚೆ ಎಲ್ಲವೂ ಬದಲಾಯಿತು. ಇಬ್ಬರ ನಡುವೆ ಇದ್ದ ಸ್ನೇಹದ ಸೇತುವೆ ಮರೆಯಾಗಿ ಪ್ರೇಮದ ಗೋಡೆ ಎದ್ದು ನಿಂತುಕೊಂಡಿತು ಎನ್ನುವುದು ಇವರ ಸಂಬಂಧದ ಕುರಿತು ಹಿಂದೆ ಕೇಳಿ ಬಂದಿದ್ದ ಸುದ್ದಿ.

ಇನ್ನೂ ವಿಶೇಷ ಅಂದರೆ ರಾಜ್ ಈಗಾಗಲೇ ವಿವಾಹಿತ. ಮೊನ್ನೆಯವರೆಗೆ ಬಾಲಿವುಡ್‌ನವರ ಕಣ್ಣಿಗೆ ರಾಜ್ ಆದರ್ಶ ವ್ಯಕ್ತಿಯಂತೆ ಕಾಣುತ್ತಿದ್ದರು. ರಾಜ್ ಮತ್ತು ಅವರ ಪತ್ನಿಯನ್ನು ಅನೇಕರು ಹಾಡಿ ಹೊಗಳುತ್ತಿದ್ದರು. ಆದರೆ ಈಗ ರಾಜ್ ಮತ್ತು ಸಮಂತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಅನ್ನುವ ವಿಚಾರ ಎಲ್ಲರ ಬಾಯಿಗೆ ಆಹಾರವಾಗಿದೆ. ಇದಕ್ಕೆ ಪೂರಕವಾಗಿ ಪಿಕಲ್ ಬಾಲ್‌ ಟೂರ್ನಾಮೆಂಟ್‌ನಲ್ಲಿ ಇಬ್ಬರು ಜೊತೆಯಲ್ಲಿ ಕಾಣಿಸಿಕೊಂಡ ಫೋಟೊಗಳು ವೈರಲ್ ಆಗಿವೆ. ಚರ್ಚೆಗೀಡಾಗುತ್ತಿವೆ. ಇನ್ನು ಸಮಂತಾ ರಕ್ತ ಬ್ರಹ್ಮಾಂಡ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಈ ರಾಜ್ ನಿಡಿಮೋರು ಅವರದ್ದೇ ಸಾರಥ್ಯ ಇರುವುದು ಮತ್ತೊಂದು ವಿಶೇಷ.ಸದ್ಯ ಸಮಂತಾ ಪ್ರೇಮಿಗಳ ದಿನದ ಪ್ರಯುಕ್ತ ಹಂಚಿಕೊಂಡ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳ ನಡುವೆ ಚರ್ಚೆಯನ್ನು ಹುಟ್ಟು ಹಾಕಿವೆ.

More from Filmibeat

Read more about: samantha love filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X