ನಾನು ಬೆಂಕಿಯಲ್ಲಿ ಅರಳಿದ ಹೂವು- ಸಮಂತಾ ರುತ್ ಪ್ರಭು...!
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಆದರೂ ಮುಂದೇನು ಅನ್ನುವುದರ ಬಗ್ಗೆ ಯೋಚನೆ ಮಾಡುವುದಕ್ಕೂ ಆ ನೆನಪುಗಳು ಬಿಡಲ್ಲ. ಸಮಂತಾ ಅವರಿಗೂ ಕೂಡ ಈ ನೆನಪುಗಳು ಇನ್ನೂ ಕಾಡುತ್ತಿವೆಯಾ ಗೊತ್ತ್ ಇಲ್ಲ.
ಆದರೆ.. ಸದ್ಯಕ್ಕೆ ಸಮಂತಾ ತಮ್ಮ ಮಾಜಿ ಗಂಡ ನಾಗಚೈತನ್ಯ ಅವರಿಂದ ದೂರವಾದ ನಂತರ ಬದುಕು ಹೇಗಿದೆ ಎನ್ನುವುದರ ಕುರಿತು ಮಾತನಾಡಿದ್ದಾರೆ. ಮಯೋಸಿಟಿಸ್ ಖಾಯಿಲೆಯ ವಿರುದ್ಧದ ಹೋರಾಟದ ಕಥೆಯನ್ನೂ ಹಂಚಿಕೊಂಡಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ, ಮೂರು ವರ್ಷದ ಹಿಂದೆ ಇನ್ಯಾವತ್ತು ನಾನು ಕಷ್ಟ ಪಡಬಾರದು ಎಂದು ಅಂದುಕೊಂಡಿದ್ದೆ, ನನ್ನ ಸ್ನೇಹಿತರ ಬಳಿ ಕೂಡ ಈ ವಿಚಾರವನ್ನು ಚರ್ಚಿಸಿದ್ದೇ ಆದರೆ ಬದುಕು ನಾವು ಅಂದುಕೊಂಡಂತೆ ಅಲ್ಲ. ಜೀವನದಲ್ಲಿ ಎದುರಾಗುವ ಪರಿಸ್ಥಿತಿಯನ್ನೂ ನಾವು ಹೊರ ಬರುವವರೆಗೆ ಎದುರಿಸಬೇಕಾಗುತ್ತೆ ಎಂದಿದ್ದಾರೆ.
ಇನ್ನೂ ಈ ಮೂರು ನಾಲ್ಕು ವರ್ಷಗಳಲ್ಲಿ ನಿಗಿ ನಿಗಿ ಬೆಂಕಿ ಕೆಂಡದ ಮೇಲೆ ನಾನು ನಡೆದು, ಇವತ್ತು ಈ ಹಂತಕ್ಕೆ ಬಂದು ತಲುಪಿದ್ದೇನೆ ಎಂದಿದ್ದಾರೆ. ನಾನು ಈಗ ಹಿಂದೆಂದಿಗಿಂತಲೂ ಹೆಚ್ಚು ಶಕ್ತಿ ಶಾಲಿಯಾಗಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾನು ಬೆಂಕಿಯಲ್ಲಿ ಅರಳಿದ ಹೂವು ಎಂದಿದ್ದಾರೆ ಸಮಂತಾ.

ಮುಂದುವರೆದು ಮಾತನಾಡಿರುವ ಸಮಂತಾ, ನಮ್ಮ ಜೀವನದ ಬಗ್ಗೆ ನಾವು ಕೆಲವು ವಿಷಯಗಳನ್ನು ಬದಲಾಯಿಸಬಹುದೆಂದು ನಾವೆಲ್ಲರೂ ಬಯಸುತ್ತೇವೆ ಮತ್ತು ನನ್ನಲ್ಲಿರುವ ವಿಷಯಗಳನ್ನು ನಾನು ಅನುಭವಿಸಬೇಕೇ ಎಂದು ನಾನು ಕೆಲವೊಮ್ಮೆ ಆಶ್ಚರ್ಯ ಪಡುತ್ತೇನೆ. ಆದರೆ ಹಿಂತಿರುಗಿ ನೋಡಿದಾಗ ನನಗೆ ಬೇರೆ ದಾರಿ ಇಲ್ಲ ಎಂಬ ಭಾವನೆ ಮೂಡುತ್ತೆ ಎಂದಿದ್ದಾರೆ.
ಇನ್ನೂ ಇಂದಿನ ಜಗತ್ತಿನಲ್ಲಿ, ನಿಮಗೆ ಹಿಂದೆಂದಿಗಿಂತಲೂ ಹೆಚ್ಚು ಆಧ್ಯಾತ್ಮಿಕತೆಯ ಅಗತ್ಯವಿದೆ ಯಾಕೆಂದರೆ ತುಂಬಾ ನೋವು ಮತ್ತು ಅನಾರೋಗ್ಯ ಕಾಡುತ್ತಿದೆ ಎಂದಿರುವ ಸಮಂತಾ, ಆಧ್ಯಾತ್ಮಿಕತೆಯು ನಿಮ್ಮ ಉತ್ತಮ ಸ್ನೇಹಿತ ಮತ್ತು ಶಕ್ತಿಯ ಅಂತ್ಯವಿಲ್ಲದ ಮೂಲವಾಗಿದೆ ಎಂದು ನಾನು ನಂಬುತ್ತೇನೆ ಎಂದು ಕೂಡ ಹೇಳಿದ್ದಾರೆ.

ಅಂದ್ಹಾಗೇ ಮಯೋಸಿಟಿಸ್ ಚಿಕಿತ್ಸೆಯಿಂದಾಗಿ ಒಂದು ವರ್ಷದ ಚಿತ್ರರಂಗದಿಂದ ದೂರ ಇದ್ದ ಸಮಂತಾ ಈಗ ಮರಳಿ ಮುಖಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಈ ಆಗಸ್ಟ್‌ನಲ್ಲಿ ತಮ್ಮ ಹೊಸ ಚಿತ್ರದ ಚಿತ್ರೀಕರಣ ಶುರು ಮಾಡಲಿದ್ದಾರೆ. ಈ ಚಿತ್ರದ ಕುರಿತು ಕೂಡ ಮಾತನಾಡಿರುವ ಸಮಂತಾ, ಹೊಸ ಚಿತ್ರ ಮತ್ತು ಹೊಸತನದ ಪಾತ್ರಕ್ಕೆ ನಾನು ಸದ್ಯ ತರಬೇತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ನನ್ನ ಪ್ರತಿ ಸಿನಿಮಾದಲ್ಲಿ ಏನಾದರೂ ಒಂದು ಕಲಿಯುವಿಕೆ ಇದ್ದೇ ಇರುತ್ತೆ, ನಾನು ಈ ಸವಾಲುಗಳನ್ನೂ ಪ್ರೀತಿಸುತ್ತೇನೆ ಕೂಡ ಎಂದು ಸಮಂತಾ ಹೇಳಿದ್ದಾರೆ.


Click it and Unblock the Notifications











