ಡಿವೋರ್ಸ್ ಬಳಿಕ ಮತ್ತೆ ಪ್ರೀತಿಲಿ ಬಿದ್ದ ಬಗ್ಗೆ ಮೌನ ಮುರಿದ ನಟಿ ಸಮಂತಾ

ತೆಲುಗು ನಟಿ ಸಮಂತಾ ಇತ್ತೀಚೆಗೆ ನಿರ್ದೇಶಕ ರಾಜ್ ನಿಡುಮೊರು ಜೊತೆ 2ನೇ ಮದುವೆ ಆಗಿದ್ದರು. ಫ್ಯಾಮಿಲಿಮ್ಯಾನ್ ನಿರ್ದೇಶಕನಿಗೂ ಇದು 2ನೇ ಮದುವೆ ಆಗಿತ್ತು. ನಟ ನಾಗಚೈತನ್ಯಾ ಹಾಗೂ ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಇಬ್ಬರೂ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ಇಬ್ಬರೂ ಮತ್ತೆ ಬೇರೆಯವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ನಟಿ ಶೋಭಿತಾ ದುಲಿಪಾಲ ಜೊತೆ ವರ್ಷದ ಹಿಂದೆ ಚೈತು ಹಸೆಮಣೆ ಏರಿದ್ದು ಗೊತ್ತೇಯಿದೆ.

ಸಮಂತಾ 'ಫ್ಯಾಮಿಲಿಮ್ಯಾನ್'-2 ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದೇ ಡಿವೋರ್ಸ್‌ಗೆ ಕಾರಣವಾಯಿತು ಎನ್ನುವ ಅರ್ಥದಲ್ಲಿ ವದಂತಿ ಹರಿದಾಡಿತ್ತು. ಆದರೆ ಡಿವೋರ್ಸ್ ಬಳಿಕ ತನ್ನ ಜೀವನದ ಬಾಗಿಲು ಮುಚ್ಚಿಬಿಟ್ಟಿದ್ದೆ. ಇನ್ನು ನನ್ನ ಜೀವನದಲ್ಲಿ ಯಾರಿಗೂ ಸ್ಥಾನ ಇಲ್ಲ ಎಂದುಕೊಂಡಿದ್ದೆ. ಆದರೆ ರಾಜ್ ಜೊತೆಗಿನ ಒಡನಾಟದ ಬಳಿಕ ಎಲ್ಲವೂ ಬದಲಾಯಿತು ಎಂದು ಸಮಂತಾ ಹೇಳಿದ್ದಾರೆ. 'ವೋಗ್ ಇಂಡಿಯಾ' ಮ್ಯಾಗಜೀನ್ ಸಂದರ್ಶನದಲ್ಲಿ ಸ್ಯಾಮ್ ಈ ಬಗ್ಗೆ ಮಾತನಾಡಿದ್ದಾರೆ.

Samantha Ruth Prabhu Opens Up on Finding Love Again with Raj Nidimoru After Divorce

ಸಮಂತಾ ಮಾತನಾಡಿ "ನಾನು ಡಿವೋರ್ಸ್ ಪಡೆದು ದೂರಾದಾಗ ನಾನು ಸಂಪೂರ್ಣವಾಗಿ ನನ್ನ ಜೀವನ ಬಾಗಿಲನ್ನು ಮುಚ್ಚಿಕೊಂಡಿದ್ದೆ. ಜೀವನದಲ್ಲಿ ಮತ್ತೊಬ್ಬರನ್ನು ನಾನು ನಂಬುತ್ತೇನೆ ಎಂದು ಭಾವಿಸಿರಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಅಂತಹ ಯಾವುದೇ ಪ್ರೀತಿ ಮತ್ತು ಸ್ನೇಹ ಸ್ವೀಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಆ ರೀತಿ ಇದ್ದ ನನ್ನ ಜೀವನದಲ್ಲಿ ರಾಜ್ ಆಗಮನದ ಬಳಿಕ ಸಂತೋಷ ತುಂಬಿದೆ. ಆತನಿಂದ ನಾನು ಚೇತರಿಸಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.

ಆಪ್ತ ಸ್ನೇಹಿತರು ಸಮಂತಾ ವರ್ತನೆಯಲ್ಲಿ ಈ ಬದಲಾವಣೆಯನ್ನು ಗಮನಿಸಿದ್ದಾರೆ. ಸ್ನೇಹಿತರೊಬ್ಬರು ವಾಯ್ಸ್ ಮೆಸೇಜ್ ಕಳುಹಿಸಿ ಹೇಳಿದ ಮಾತನ್ನು ಸ್ಯಾಮ್ ನೆನಪಿಸಿಕೊಂಡಿದ್ದಾರೆ. "ಕೆಲ ದಿನಗಳ ಹಿಂದೆ ನೀನು ಉಸಿರಾಡಲು ಕಷ್ಟಪಡುತ್ತಿದ್ದೆ. ಆದರೆ ಈಗ ಮತ್ತೆ ಮೊದಲಿನಂತೆ ಆರಾಮಾಗಿ ಇದ್ದೀಯಾ ಎಂದು ನನಗೆ ಅನಿಸುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದಾಗಿ ಸಮಂತಾ ವಿವರಿಸಿದ್ದಾರೆ. ಆಮೂಲಕ ನಿರ್ದೇಶಕ ರಾಜ್ ನಿಡುಮೋರು ಆಗಮನದ ಬಳಿಕ ಜೀವನದಲ್ಲಿ ಸಂತೋಷವಾಗಿ ಇರುವುದಾಗಿ ಸ್ಯಾಮ್ ತಿಳಿಸಿದ್ದಾರೆ.

ಸಮಂತಾ ಈಗ ಚಿತ್ರ ನಿರ್ಮಾಪಕಿಯಾಗಿ ಕೂಡ ಗುರ್ತಿಸಿಕೊಂಡಿದ್ದಾರೆ. ತಮ್ಮ ಬ್ಯಾನರ್ ಅಡಿಯಲ್ಲಿ 'ಶುಭಂ' ಎಂಬ ಸಿನಿಮಾ ನಿರ್ಮಿಸಿ ಗೆದ್ದಿದ್ದರು. ಈಗ 'ಮಾ ಇಂಟಿ ಬಂಗಾರಂ' ಎಂಬ ಮತ್ತೊಂದು ಸಿನಿಮಾ ನಿರ್ಮಿಸಿದ್ದಾರೆ. ಮೇ 15ರಂದು ಆ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ನಿರ್ಮಾಣದಲ್ಲಿ ಕೂಡ ಸಮಂತಾಗೆ ಪತಿ ರಾಜ್ ಬೆಂಬಲವಾಗಿ ನಿಂತಿದ್ದಾರೆ.

Samantha Ruth Prabhu Opens Up on Finding Love Again with Raj Nidimoru After Divorce

'ಫ್ಯಾಮಿಲಿಮ್ಯಾನ್'-2 ವೆಬ್ ಸೀರಿಸ್‌ಗೆ ರಾಜ್ ಹಾಗೂ ಡಿಕೆ ಜೋಡಿ ಆಕ್ಷನ್ ಕಟ್ ಹೇಳಿತ್ತು. ಸೀಸನ್-2ರಲ್ಲಿ ರಾಜಲಕ್ಷ್ಮಿ ಎಂಬ ಪಾತ್ರದಲ್ಲಿ ಸ್ಯಾಮ್ ನಟಿಸಿದ್ದರು. ಡಿವೋರ್ಸ್ ಬಳಿಕ ಮಯೋಸೈಟಿಸ್ ಸಮಸ್ಯೆಯಿಂದ ಆಕೆ ಬಳಲುತ್ತಿದ್ದರು. ಚಿಕಿತ್ಸೆ ಜೊತೆಗೆ ವ್ಯಾಯಾಯ, ಡಯೆಟ್ ಮಾಡಿ ಮಯೋಸೈಟಿಸ್ ವಿರುದ್ಧ ಹೋರಾಡಿದ್ದರು. ಅದೇ ಸಮಯದಲ್ಲಿ ನಿರ್ದೇಶಕ ರಾಜ್ ಆಕೆಗೆ ಹತ್ತಿರವಾಗಿದ್ದರು ಎನ್ನಲಾಗ್ತಿದೆ.

2ನೇ ಬಾರಿ ಪ್ರೀತಿಲಿ ಬಿದ್ದಿದ್ದ ಸಮಂತಾ ಸದ್ದಿಲ್ಲದೇ ಮದುವೆ ಸಿದ್ಧತೆ ನಡೆಸಿದ್ದರು. ಡಿಸೆಂಬರ್ 1, 2025ರಂದು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಸರಳವಾಗಿ ಸಮಂತಾ- ರಾಜ್ ಮದುವೆ ನೆರವೇರಿತ್ತು. ಇಶಾ ಫೌಂಡೇಶನ್‌ ಒಳಗಿರುವ ಲಿಂಗ ಭೈರವಿ ದೇವಾಲಯದಲ್ಲಿ 'ಭೂತ ಶುದ್ಧಿ' ಪದ್ಧತಿಯಂತೆ ಮದುವೆ ನಡೆದಿತ್ತು. ಬಳಿಕ ಫೋಟೊಗಳನ್ನು ಸಮಂತಾ ಹಂಚಿಕೊಂಡಿದ್ದರು. ಶ್ಯಾಮಲಿ ದೇ ಎಂಬುವವರ ಜೊತೆ ನಿರ್ದೇಶಕ ರಾಜ್ ನಿಡುಮೊರು ಅದಾಗಲೇ ಮದುವೆ ಆಗಿ ಡಿವೋರ್ಸ್ ಪಡೆದಿದ್ದರು. ನಿರ್ದೇಶಕ ಡಿಕೆ ಜೊತೆ ಸೇರಿ ರಾಜ್ ಕೆಲ ಹಿಂದಿ ಸಿನಿಮಾ ಹಾಗೂ ವೆಬ್ ಸೀರಿಸ್ ನಿರ್ದೇಶಿಸಿದ್ದಾರೆ.

More from Filmibeat

English summary
Samantha Ruth Prabhu shares in a Vogue India interview how director Raj Nidimoru helped her heal after divorce and emotional struggles, marking a new chapter of love and happiness in her life.
Read more about: samantha ruth prabhu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X