ಮಾಜಿ ಪತಿ ನಾಗ ಚೈತನ್ಯ ಸಹಿಯ ಟ್ಯಾಟೂ ತೆಗಿಸಿದ್ದಾರಾ ನಟಿ ಸಮಂತಾ? ಹೊಸ ಫೋಟೋ ಕೊಟ್ಟ ಸುಳಿವೇನು?

ತೆಲುಗು ಸಿನಿಮಾ ಪ್ರೇಮಿಗಳಿಗೆ ಹೆಚ್ಚು ನೋವು ಕೊಟ್ಟ ಸಂಗತಿಯೆಂದರೇ ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಅವರ ವಿಚ್ಛೇದನದ ಸಂಗತಿ. ಇದರಿಂದ ಇನ್ನೂ ಹೊರಬರಲಾಗದ ಅಭಿಮಾನಿಗಳು ಸಿಕ್ಕ ಅವಕಾಶದಲ್ಲೆಲ್ಲಾ ಮತ್ತೆ ಒಂದಾಗಿ ಎಂದು ಇಬ್ಬರನ್ನು ಮನವಿ ಮಾಡಿಕೊಳ್ಳುತ್ತಾರೆ.

ಇದಕ್ಕೆ ತಕ್ಕಂತೆ ನಟ ನಾಗ ಚೈತನ್ಯ ಇತ್ತೀಚೆಗೆ ತಮ್ಮ ನಾಯಿಮರಿಯ ಚಿತ್ರ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಇದು ಸಮಂತಾ ಅವರ ನಾಯಿ. ಇದು ಚೈತನ್ಯ ಬಳಿಯಿದೆ ಎಂದ ಮೇಲೆ ಇಬ್ಬರು ಒಂದಾಗುವ ಲಕ್ಷಣಗಳಿವೆ ಎಂದು ಕನಸಿನ ಗೋಪುರ ಕಟ್ಟಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ನಟಿ ಸಮಂತಾ ಹಂಚಿಕೊಂಡಿರುವ ಚಿತ್ರಗಳು ತಾವು ಒಂದಾಗುವುದಿಲ್ಲ ಎಂಬ ಸೂಚನೆ ನೀಡಿದೆ. ಹಾಗಾದರೇ ಈ ಫೋಟೋಗಳಲ್ಲಿ ಇರುವುದೇನು ಗೊತ್ತಾ?

Samantha Ruth Prabhu Removed Naga Chaitanyas Signature Chay Tattoo from her ribs?

ಸಮಂತಾ ಪಿಂಕ್ ಸೀರೆ ಫೋಟೋದಲ್ಲಿಲ್ಲ ಟ್ಯಾಟೂ!

ವಿಚ್ಛೇದನದ ಬಳಿಕ ನಟಿ ಸಮಂತಾ ಮತ್ತು ನಾಗ ಚೈತನ್ಯ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾತನಾಡುವುದಿಲ್ಲ. ಆದರೂ ಅಭಿಮಾನಿಗಳು ಅವರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇನ್ನು, ಸಮಂತಾ ರುತ್ ಪ್ರಭು ಅವರ ಇತ್ತೀಚಿಗೆ ಸರಣಿಯ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು ಜನರು ಹೆಚ್ಚಿನ ಜನರು ಇಷ್ಟಪಟ್ಟಿದ್ದಾರೆ. ರಾಣಿ ಪಿಂಕ್ ಬಣ್ಣದ ಸೀರೆಯಲ್ಲಿ ಸಮಂತಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಆದರೆ, ಈ ಫೋಟೋಗಳಲ್ಲಿ ಕೆಲವರು ಒಂದು ವಿಷಯವನ್ನು ಗಮನ ಹರಿಸಿದ್ದಾರೆ. ಸಮಂತಾ ಅವರ ಪಕ್ಕೆಲುಬುಗಳ ಬಲಭಾಗದಲ್ಲಿ ಇದ್ದ ಒಂದು ಟ್ಯಾಟೂ ಕಾಣೆಯಾಗಿದೆ. ಎಸ್... ಈಗ ಟ್ಯಾಟೂ ಹಾಕಿಸಿಕೊಳ್ಳುವುದು ಸರಿಯಲ್ಲ ಎನ್ನುವ ಸಮಂತಾ ಒಟ್ಟು ಮೂರು ಟ್ಯಾಟೂಗಳನ್ನು ಹಾಕಿಕೊಂಡಿದ್ದಾರೆ.

Samantha Ruth Prabhu Removed Naga Chaitanyas Signature Chay Tattoo from her ribs?

ಅದರಲ್ಲಿ ಮೊದಲನೆಯದು ತನ್ನ ಮೊದಲ ಸೂಪರ್‌ಹಿಟ್ ಚಲನಚಿತ್ರವಾದ YMC (ಯೇಮ್ ಮಾಯಾ ಚೆಸಾವೆ) ಅಕ್ಷರಗಳನ್ನು ಅವಳ ಕುತ್ತಿಗೆಯ ಹಿಂಭಾಗದಲ್ಲಿ ಮೇಲೆ ಕ್ಯೂಟ್ ಫಾಂಟ್‌ನಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇನ್ನೊಂದು ತನ್ನ ಬಲಗೈಯ ಮಣಿಕಟ್ಟಿನ ಮೇಲೆ ಮತ್ತು ಮೂರನೇಯದು ಪಕ್ಕೆಲುಬಿನ ಮೇಲೆ ಭಾಗ ಚೈತನ್ಯ ಅವರ ಸಹಿಯನ್ನು ಹಾಕಿಸಿಕೊಂಡಿದ್ದರು.

2019 ರಲ್ಲಿ ಸಮಂತಾ ಅವರು ತಮ್ಮ ಛೇ (Chay) ಟ್ಯಾಟೂವನ್ನು ತೋರಿಸುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ವಿಚ್ಛೇದನದ ಬಳಿಕ ಲಂಡನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅಭಿನಯದ ಆಕ್ಷನ್ ಥ್ರಿಲ್ಲರ್ ಸರಣಿ ಸಿಟಾಡೆಲ್‌ನ ಸ್ಕ್ರೀನಿಂಗ್‌ನಲ್ಲಿಯೂ ಸಹ, ಈ ಟ್ಯಾಟೂ ಸಮಂತಾ ಉಳಿಸಿಕೊಂಡಿದ್ದರು. ಅಭಿಮಾನಿಗಳು ಅದನ್ನು ತೆಗೆಸುವಂತೆ ಒತ್ತಾಯಿಸಿದ್ದರು. ಆದರೆ, ಈಗ ಅವರು ಹಂಚಿಕೊಂಡಿರುವ ಗುಲಾಬಿ ಬಣ್ಣದ ಸೀರೆಯ ಫೋಟೋದಲ್ಲಿ ಪಕ್ಕೆಲುಬಿನ ಮೇಲಿನ ಟ್ಯಾಟೂ ಕಾಣಿಸುತ್ತಿಲ್ಲ. ನಟಿ ಟ್ಯಾಟೂವನ್ನು ತೆಗೆಸಿರುವಂತೆ ಕಾಣಿಸುತ್ತಿದೆ.

ವಿಚ್ಛೇದನದ ಬಳಿಕ ಇಬ್ಬರು ಇನ್ನು ಮದುವೆಯಾಗಿಲ್ಲ. ನಾಗ ಚೈತನ್ಯ ಅವರ ಮದುವೆ ವಿಷಯ ಕೆಲವೊಮ್ಮೆ ಬಂದರೂ ಅದು ಸುಳ್ಳು ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 2017 ರಲ್ಲಿ ವಿವಾಹವಾಗಿದ್ದ ಈ ಜೋಡಿ 2021 ರಲ್ಲಿ ಅವರ ವಿವಾಹ ವಾರ್ಷಿಕೋತ್ಸವಕ್ಕೆ ನಾಲ್ಕು ದಿನಗಳ ಮೊದಲು ಬೇರೆಯಾಗಿರುವುದನ್ನು ಘೋಷಿಸಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಸದ್ಯ ನಟಿ ಸಮಂತಾ ಅನಾರೋಗ್ಯದಿಂದಾಗಿ ಸಿನಿಮಾದಿಂದ ವಿರಾಮ ತೆಗೆದುಕೊಂಡಿದ್ದು, ವಿದೇಶಿ ಪ್ರವಾಸದಲ್ಲಿದ್ದಾರೆ.

More from Filmibeat

English summary
Samantha Ruth Prabhu Removed Naga Chaitanya's Signature 'Chay' Tattoo from her ribs?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X