ವಿರಹದ ವೇದನೆಯಲ್ಲಿ ಸಮಂತಾ, ''ಪ್ರೀತಿ ಮಧುರ-ತ್ಯಾಗ ಅಮರ'' ಎಂದ ನಾಗಚೈತನ್ಯ ಮಾಜಿ ಪತ್ನಿ..!
ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.
ಇನ್ನೂ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಕೆಲವೊಮ್ಮೆ ಅನಿಸಿದಂತೆ ಪ್ರೀತಿಯಿಂದ ನೋವನ್ನು ಕೂಡ ಪದೇ ಪದೆ ಅನುಭವಿಸಬೇಕಾಗುತ್ತೆ. ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಈಗೀಗ ತುಂಬಾನೇ ಕಾಮನ್ನು. ಅನುಭವಗಳ ಮೂಲಕ ಹಲವು ವಿಚಾರ ಕಲಿತುಕೊಂಡರೂ, ಪ್ರೀತಿಯ ವಿಷಯದಲ್ಲಿ ಮಾತ್ರ ಅನೇಕ ಸಲ ತುಂಬಾ ಹರ್ಟ್ ಆಗುತ್ತೆ. ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ನಾಗಚೈತನ್ಯ ಅವರಿಂದ ದೂರವಾದ ಸಮಂತಾಗೆ ಕೂಡ ಈ ಪ್ರೀತಿ ಭಾವನಾತ್ಮಕವಾಗಿ ನೋವು ಕೊಡುತ್ತಿರಬಹುದು ಅನ್ನುವುದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಅನುಮಾನ.

ಹೌದು, ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥದ ನಂತರ, ಸಮಂತಾ ಮೌನ ಮುರಿಯಬಹುದು, ಏನಾದರೂ ಮಾತನಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಸಮಂತಾ ಅವರ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದರು. ಈಗ ಊಹೆ ನಿಜವಾಗಿದೆ. ನಾಗಚೈತನ್ಯ ಮತ್ತು ಶೋಭಿತಾ ಅವರ ಕುರಿತು ಸಮಂತಾ ನೇರವಾಗಿ ಮಾತನಾಡದೇ ಇದ್ದರೂ ಪರೋಕ್ಷವಾಗಿ ಸಮಂತಾ ಮಾತನಾಡಿದ್ದಾರೆ. ''ಪ್ರೀತಿ ಮಧುರ, ತ್ಯಾಗ ಅಮರ'' ಎಂದಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಸಮಂತಾ, ಕೆಲವರು ಸ್ನೇಹ ಮತ್ತು ಸಂಬಂಧಗಳನ್ನು ಪರಸ್ಪರ ವಿನಿಮಯ ಸಿದ್ಧಾಂತದಡಿ ನೋಡುತ್ತಾರೆ. ''ನಾನು ಕೂಡ ಈ ಮಾತನ್ನು ಒಪ್ಪುತ್ತೇನೆ. ಆದರೆ ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ನಾನು ಅರಿತ ವಿಚಾರವೇನೆಂದರೆ ಕೆಲವೊಮ್ಮೆ ಬೇರೆಯವರು ನಮಗೆ ಪ್ರೀತಿಯನ್ನು ಮರಳಿ ಕೊಡದೇ ಇದ್ದರೂ ನಾವು ಅವರಿಗೆ ಪ್ರೀತಿಯನ್ನು ಕೊಡಬೇಕಾಗುತ್ತೆ, ಕೊಡ್ತಾನೇ ಇರಬೇಕಾಗುತ್ತೆ'' ಎಂದಿದ್ದಾರೆ ಸಮಂತಾ.

ಮುಂದುವರೆದು ''ಒಂದು ಹಂತದಲ್ಲಿ ಸಮತೋಲನ ಕಳೆದುಕೊಂಡರೂ ಕೂಡ ಪ್ರೀತಿ ಒಂದು ತ್ಯಾಗವಾಗುತ್ತೆ. ನನ್ನಿಂದ ಪ್ರೀತಿಯನ್ನು ಮರಳಿ ನೀಡಲು ಆಗದೇ ಇದ್ದರೂ ಕೂಡ ನನ್ನನ್ನೂ ಇಷ್ಟಪಡುವ, ನನ್ನ ಮೇಲೆ ಪ್ರೀತಿಯ ಮಳೆಗೈಯುವ ಎಲ್ಲರಿಗೂ ನಾನು ಆಭಾರಿ'' ಎಂದು ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪವನ್ನು ನೀಡಿ ಹಂಚಿಕೊಂಡಿದ್ದಾರೆ ಸಮಂತಾ.
ಸಮಂತಾ ಅವರ ಈ ಬರಹ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ನಾಗಚೈತನ್ಯ ಅವರನ್ನು ಸಮಂತಾ ಮನಸಾರೆ ಪ್ರೀತಿಯನ್ನು ಮಾಡಿದರು, ನಾಗಚೈತನ್ಯ ಅವರಿಂದ ಸಮಂತಾಗೆ ಪ್ರೀತಿ ಸಿಗಲಿಲ್ಲವಾ ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ಪ್ರೀತಿಯ ಕೊರತೆಯಿಂದನೇ ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯ ಮುರಿದು ಬಿತ್ತಾ ಎಂಬ ಅನುಮಾನ ಕೂಡ ಈಗ ಅನೇಕರಲ್ಲಿ ಮನೆ ಮಾಡಿದೆ. ಇಬ್ಬರ ಬಾಂಧವ್ಯದಲ್ಲಿ ವಿಚಾರ ವಿನಿಮಯವಾಗದೇ, ಸುಖ ಸಂತೋಷ ಸರಿ ಸಮಾನವಾಗಿ ಹಂಚಿಕೆಯಾಗದೇ, ತಳಪಾಯದ ಬೆಂಬಲ ಇಲ್ಲದೇ ಇಬ್ಬರು ಕಟ್ಟಿದ್ದ ಪ್ರೇಮಸೌಧ ನೆಲಕ್ಕಪಳಿಸಿತು ಎನ್ನುವ ಅಭಿಪ್ರಾಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











