ನಾಗಚೈತನ್ಯ ಮರೆತು 'ಎರಡನೇ ಮದುವೆ'ಗೆ ರೆಡಿಯಾದ ಸಮಂತಾ ? ಕೈ ಹಿಡಿಯುತ್ತಿರುವ ನಿರ್ದೇಶಕ ಯಾರು ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು.

ಆದರೆ ಈಗ ಹಾಗಿಲ್ಲ. ಎಲ್ಲರೂ ವೇಗದೂತ ರೈಲಿನ ಪ್ರಯಾಣಿಕರು. ಬೆಳಗ್ಗೆ ಫೇಸ್‌ ಬುಕ್‌ನಲ್ಲಿ ಸ್ನೇಹಿತರಾಗುವ ಹುಡುಗ-ಹುಡುಗಿ ಸಾಯಂಕಾಲದ ಸಮಯಕ್ಕೆ ಯಾವುದಾದರೂ ಕಾಫಿ ಬಾರ್‌ನಲ್ಲಿ ಎದುರು ಬದುರಾಗುತ್ತಾರೆ. ಆ ನಂತರ ರಾತ್ರಿಯೀಡಿ ಸಂದೇಶಗಳನ್ನು ವಾಟ್ಸಾಫ್ ಮೂಲಕ ಹಂಚಿಕೊಂಡು, ಒಂದೆರಡು ವಾರ ಪ್ರೇಮದ ಅಮಲನ್ನೇರಿಸಿಕೊಂಡು ಓಡಾಡುತ್ತಾರೆ. ಅದರ ಮಾರನೇ ವಾರ ಬ್ರೇಕ್‌ಪ್ ಮಾಡಿಕೊಳ್ಳುತ್ತಾರೆ. ತಮ್ಮ ಬದುಕಿನಲ್ಲಿ ಏನೂ ಆಗಿಯೇ ಇಲ್ಲವೆಂಬಂತೆ, ಮತ್ತೊಮ್ಮೆ ಗುಲಾಬಿ ಹೂವನ್ನು ಕೈಯಲ್ಲಿ ಹಿಡಿದು ಓಡಾಡುತ್ತಾರೆ. ಬಣ್ಣದ ಲೋಕ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ನಾಗಚೈತನ್ಯ ಮತ್ತು ಸಮಂತಾ ಸದ್ಯದ ಉದಾಹರಣೆ.

samantha-ruth-prabhu-sparks-romance-rumors-with-the-family-man-director-raj-nidimoru

ಹೌದು, ಸಮಂತಾ ಅವರನ್ನು ಆರು ವರ್ಷ ಹುಚ್ಚರಂತೆ ಪ್ರೀತಿ ಮಾಡಿ,ಆ ನಂತರ ಅದ್ಧೂರಿ ಮದುವೆಯಾಗಿ ನಾಲ್ಕು ವರ್ಷಗಳ ದಾಂಪತ್ಯ ಗೀತೆಯನ್ನು ಹಾಡಿದ ನಾಗಚೈತನ್ಯ, ಸದ್ಯ ತಮ್ಮ ಹಳೆಯ ಪ್ರೇಮವನ್ನು ಮರೆತು ಹೋಗಿದ್ದಾರೆ. ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಕನಸು ಕಾಣುತ್ತಿದ್ದಾರೆ. ಇದು ಅವರ ಅವರ ವ್ಯೆಯಕ್ತಿಕ ಬದುಕು ಮತ್ತು ವ್ಯೆಯಕ್ತಿಕ ಆಯ್ಕೆಯಾದರೂ ಅನೇಕರು ನಾಗಚೈತನ್ಯ ಅವರನ್ನು ಈ ವಿಚಾರದಲ್ಲಿ ಟೀಕಿಸುತ್ತಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ಅವರನ್ನು ಟ್ರೋಲ್ ಮಾಡುತ್ತಿದ್ಧಾರೆ.

ಇನ್ನೂ ನಾಗಚೈತನ್ಯ ಅತ್ತ ಎರಡನೇ ಮದುವೆಗೆ ಸಿದ್ಧವಾದ ನಂತರ, ಸಮಂತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಎಲ್ಲರು ಅಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಮಂತಾಗೆ ಧೈರ್ಯವನ್ನು ಕೂಡ ಹೇಳುತ್ತಿದ್ದಾರೆ. ಆದರೆ, ಇದರ ನಡುವೆ ಸಮಂತಾ ಅವರ ಮತ್ತೊಂದು ವಿಚಾರ ಕೇಳಿ, ಧೈರ್ಯ ತುಂಬುತ್ತಿದ್ದ ಅವರ ಅಭಿಮಾನಿಗಳ ಜಂಗಾಬಲವೇ ಅಡಗಿ ಹೋಗಿದೆ.

samantha-ruth-prabhu-sparks-romance-rumors-with-the-family-man-director-raj-nidimoru

ಹೌದು, ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ನಡೆದ ಬೆನ್ನಲ್ಲಿಯೇ, ಸಮಂತಾ ಕೂಡ ಎರಡನೇ ಮದುವೆಗೆ ಅಣಿಯಾಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಸಮಂತಾ ಹೃದಯ ಬಾಲಿವುಡ್ ನಿರ್ಮಾಪಕ-ನಿರ್ದೇಶಕನ ಪಾಲಾಗಿದೆ ಎಂಬ ವಿಚಾರ ಮುಂಬೈನೆಲ್ಲೆಡೆ ಗುಲ್ಲಾಗಿದೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ರಾಜ್ ನಿಡಿಮೋರು ಎನ್ನುವುದೇ ಈ ಬಾರಿಯ ಅಚ್ಚರಿ ಮತ್ತು ಆಘಾತ.

ಹೌದು, 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಮಗೆ ನೆನಪಿರಬೇಕು. ಸಮಂತಾ ಅವರನ್ನು ಟಾಲಿವುಡ್‌ನಿಂದ ಬಾಲಿವುಡ್ಡಿಗೆ ಕರೆದೊಯ್ದ ಸಿನಿಮಾ ಇದು. 'ರಾಜಿ' ಪಾತ್ರದಲ್ಲಿ ಸಮಂತಾ ಅವರನ್ನು ಈ ಸರಣಿಯಲ್ಲಿ ನೋಡಿ ಅನೇಕರು ಬೆಕ್ಕಸ ಬೆರಗಾಗಿದ್ದರು. ಯಾಕೆಂದರೆ ಹಿಂದೆಂದೂ ಕಾಣಿಸದ ರೂಪದಲ್ಲಿ ಸ್ಯಾಮ್ ಇಲ್ಲಿ ಕಾಣಿಸಿಕೊಂಡಿದ್ದರು.ತಮ್ಮ ಸಾಹಸಗಾಥೆಯಿಂದ ಜನ ಮನ ಗೆದ್ದಿದ್ದರು.

samantha-ruth-prabhu-sparks-romance-rumors-with-the-family-man-director-raj-nidimoru

ಇನ್ನೂ ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಲು ಈ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯೇ ಕಾರಣ ಅನ್ನುವ ಮಾತು ಇದೆ. ಅದಕ್ಕೆ ಕಾರಣ.. ಈ ವೆಬ್ ಸರಣಿಯಲ್ಲಿದ್ದ ಸಮಂತಾ ಅವರ ಹಸಿ ಬಿಸಿ ದೃಶ್ಯಗಳು. ನಿಜಾ. ಕೊನೆ ಕ್ಷಣದಲ್ಲಿ ಆ ದೃಶ್ಯಗಳನ್ನು ಚಿತ್ರತಂಡ ತೆಗೆದು ಹಾಕಿತ್ತಾದರೂ ಈ ಕ್ಷಣಕ್ಕೂ ಈ ಅನುಮಾನ ಎಲ್ಲರಲ್ಲಿ ಇದ್ದೇ ಇದೆ. ಸದ್ಯಕ್ಕೆ ಸಮಂತಾ ಅವರ ಜೊತೆ ಥಳುಕು ಹಾಕಿಕೊಂಡಿರುವ ರಾಜ್ ನಿಡಿಮೋರು ಇದೇ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಸೃಷ್ಟಿಕರ್ತ ಕೂಡ ಹೌದು. ನಿರ್ಮಾಪಕ ಕೂಡ ಹೌದು.

ಇಂಥಾ ರಾಜ್ ಜೊತೆ ಸಮಂತಾ ಲವ್ವಲ್ಲಿ ಬಿದ್ದಿದ್ದಾರೆ. ಹೀಗೊಂದು ಸುದ್ದಿ ಮನಿ ಕಂಟ್ರೋಲ್ ವೆಬ್ ಸೈಟ್ ವರದಿ ಮಾಡಿದೆ. ಇನ್ನೂ 'ರೆಡಿಟ್‌' ಎಂಬ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಮಂತಾ ಮತ್ತು ರಾಜ್ ಅವರ ಸಂಬಂಧದ ಕುರಿತು ಚರ್ಚೆಯಾಗುತ್ತಿದೆ.

samantha-ruth-prabhu-sparks-romance-rumors-with-the-family-man-director-raj-nidimoru

ಆ ಪ್ರಕಾರ.. ಕೃಷ್ಣ ಡಿ.ಕೆ ಜೊತೆ ಸೇರಿ ರಾಜ್ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮಾಡುವಾಗ, ಸಮಂತಾ ಇವರ ಪಾಲಿಗೆ ಕೇವಲ ಸ್ನೇಹಿತೆಯಾಗಿದ್ದರು. ಇಬ್ಬರು ನಡುವೆ ನಿರ್ದೇಶಕ ಮತ್ತು ನಟಿಯ ನಡುವೆ ಇರಬೇಕಾದ ಸಂಬಂಧವೇ ಇತ್ತು. ಆದರೆ, ಅದ್ಯಾವಾಗ ರಾಜ್ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯ ಸ್ಥಾನದಲ್ಲಿ ಕೂರಿಸಿ 'ಸಿಟಾಡೆಲ್ ಹನಿ ಬನ್ನಿ' ಶುರುಮಾಡಿದರೋ ಅಲ್ಲಿಂದಾಚೆ ಎಲ್ಲವೂ ಬದಲಾಯಿತು. ಇಬ್ಬರ ನಡುವೆ ಇದ್ದ ಸ್ನೇಹದ ಸೇತುವೆ ಮರೆಯಾಗಿ ಪ್ರೇಮದ ಗೋಡೆ ಎದ್ದು ನಿಂತುಕೊಂಡಿತು.

ಇನ್ನೂ ವಿಶೇಷ ಅಂದರೆ ರಾಜ್ ಈಗಾಗಲೇ ವಿವಾಹಿತ. ಮೊನ್ನೆಯವರೆಗೆ ಬಾಲಿವುಡ್‌ನವರ ಕಣ್ಣಿಗೆ ರಾಜ್ ಆದರ್ಶ ವ್ಯಕ್ತಿಯಂತೆ ಕಾಣುತ್ತಿದ್ದರು. ರಾಜ್ ಮತ್ತು ಅವರ ಪತ್ನಿಯನ್ನು ಹಾಡಿ ಹೊಗಳುತ್ತಿದ್ದರು. ಆದರೆ ಈಗ ರಾಜ್ ಮತ್ತು ಸಮಂತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಅನ್ನುವ ವಿಚಾರ ಎಲ್ಲರ ಬಾಯಿಗೆ ಆಹಾರವಾಗಿದೆ. ಇದು ಸಾಲದು ಎಂಬಂತೆ ಸಮಂತಾಗೋಸ್ಕರ ರಾಜ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಕೂಡ ಮುಂದಾಗಿದ್ಧಾರೆ ಎನ್ನುವ ಸುದ್ದಿಯೂ ಹಬ್ಬಿದೆ.ಸಮಂತಾ ಅವರಿಗೋಸ್ಕರ ರಾಜ್ ಮೂರನೇ ವೆಬ್ ಸರಣಿ 'ರಕ್ತ ಬ್ರಹ್ಮಾಂಡ'ವನ್ನೂ ಘೋಷಿಸಿಯೂ ಆಗಿದೆ.

samantha-ruth-prabhu-sparks-romance-rumors-with-the-family-man-director-raj-nidimoru

ಸಮಂತಾ ಮತ್ತು ರಾಜ್ ಸಂಬಂಧ ಕುರಿತು ಊರೆಲ್ಲ ಮಾತನಾಡುತ್ತಿರುವ ಹಿನ್ನೆಲೆ, ಕೆಲವರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ಕೇಳಿದ ಅನುಭವ ಆಗುತ್ತಿದೆ. ಇನ್ನೂ ಹಲವರಿಗೆ ಈ ಸುದ್ದಿ ಶಾಕಿಂಗ್ ನ್ಯೂಸ್ ಎಂಬಂತೆ ಭಾಸವಾಗುತ್ತಿದೆ. ಯಾಕೆಂದರೆ ಸಮಂತಾ ಕೂಡ ನಾಗಚೈತನ್ಯ ಹಾದಿಯನ್ನೇ ತುಳಿಯುತ್ತಾರೆ ಎಂದು ಯಾರು ಊಹಿಸರಲಿಲ್ಲ. ಹೀಗಾಗಿಯೇ ಹೈರಾಣಾದ ಅನೇಕರು ಸಮಂತಾ ಅವರ ಬಳಿ ಸದ್ಯ ಸ್ಪಷ್ಟೀಕರಣವನ್ನು ಕೇಳುತ್ತಿದ್ಧಾರೆ. ಆದರೆ, ಸಮಂತಾ ಮೌನಕ್ಕೆ ಶರಣಾಗಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X