ಎರಡನೇ ಪತಿಗಾಗಿ ಮತ್ತೆ ಹೆಸರು ಬದಲಿಸಿಕೊಂಡ್ರಾ ತೆಲುಗು ನಟಿ ಸಮಂತಾ?
ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿಯರ ಪೈಕಿ ಸಮಂತಾ ರುತ್ ಪ್ರಭು ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಇವರ ನಟನೆ, ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಂತಾ ಅವರ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನವೇ ಹೆಚ್ಚು ಚರ್ಚೆಯಾಗುತ್ತಿದೆ.
ಸಿನಿಮಾ ಅಂಗಳದಲ್ಲಿ ಗಾಳಿಸುದ್ದಿಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಸ್ಟಾರ್ ನಟ-ನಟಿಯರ ಜೀವನದಲ್ಲಿ ನಡೆಯುವ ಸಣ್ಣ ಬದಲಾವಣೆಯೂ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ. ಸಮಂತಾ ಅವರ ವಿಚಾರದಲ್ಲೂ ಈಗ ಅಂತಹದ್ದೇ ಒಂದು ಕುತೂಹಲಕಾರಿ ವಿಷಯ ಮುನ್ನೆಲೆಗೆ ಬಂದಿದೆ. ಅಭಿಮಾನಿಗಳು ಇದರ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಷಯಕ್ಕೂ ಸಮಂತಾ ಅವರ ವೈವಾಹಿಕ ಜೀವನಕ್ಕೂ ಹತ್ತಿರದ ಸಂಬಂಧವಿದೆ. ಅಷ್ಟಕ್ಕೂ ಏನಿದು ಸುದ್ದಿ? ಸಮಂತಾ ಅವರ ಹೆಸರಿನ ಬದಲಾವಣೆ. ನಟ, ನಟಿಯರು ಹೆಸರು ಬದಲಿಸಿಕೊಳ್ಳುವುದು ಹೊಸದೇನು ಅಲ್ಲ. ಆದರೆ ಆದರೆ ಸಮಂತಾ ಹೆಸರು ಬದಲಿಸಿಕೊಳ್ಳಲು ಬೇರೆಯದ್ದೇ ಕಾರಣವಿದೆ.
ಹಿಂದೆ ಹೆಸರು ಬದಲಿಸಿಕೊಂಡಿದ್ದ ಸ್ಯಾಮ್
ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಮದುವೆ ನಡೆದಿದ್ದು ಬಳಿಕ ಇಬ್ಬರೂ ದೂರಾಗಿದ್ದು ಗೊತ್ತೇಯಿದೆ. 2017ರಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ನಡೆದ ಈ ವಿವಾಹದ ನಂತರ ಸಮಂತಾ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. ತಮ್ಮ ಹೆಸರಿನ ಮುಂದೆ ಇದ್ದ 'ರುತ್ ಪ್ರಭ್' ಎನ್ನುವುದನ್ನು ತೆಗೆದು 'ಅಕ್ಕಿನೇನಿ' ಎಂದು ಸೇರಿಸಿಕೊಂಡಿದ್ದರು.

ಅಕ್ಕಿನೇನಿ ಕುಟುಂಬದ ಸೊಸೆಯಾಗಿದ್ದ ಕಾರಣ ಅದೇ ಹೆಸರನ್ನು ಅವರ ಎಲ್ಲಾ ಅಧಿಕೃತ ದಾಖಲೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಅಕ್ಕಿನೇನಿ ಕುಟುಂಬದ ಸೊಸೆಯಾಗಿ ಅವರು ತುಂಬಾ ಹೆಮ್ಮೆಯಿಂದ ಆ ಹೆಸರನ್ನು ಗುರುತಿಸಿಕೊಂಡಿದ್ದರು. ಅಭಿಮಾನಿಗಳು ಸಹ ಅವರನ್ನು 'ಸಮಂತಾ ಅಕ್ಕಿನೇನಿ' ಎಂದೇ ಕರೆಯಲು ಶುರು ಮಾಡಿದ್ದರು.
ಅಚ್ಚರಿ ಮೂಡಿಸಿದ್ದ ಸಮಂತಾ ನಡೆ
ಕೆಲವು ವರ್ಷಗಳ ನಂತರ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ದಿಢೀರನೆ ಹೆಸರು ಬದಲಿಸಿಬಿಟ್ಟಿದ್ದರು. ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ 'ಅಕ್ಕಿನೇನಿ' ಎಂಬ ಹೆಸರನ್ನು ತೆಗೆದುಬಿಟ್ಟಿದ್ದರು. ಇದನ್ನು ನೋಡಿ ಚೈತು-ಸ್ಯಾಮ್ ದೂರಾಗುತ್ತಾರಾ ಎನ್ನುವ ಊಹಾಪೋಹ ಶುರುವಾಗಿತ್ತು. ಕೊನೆಗೆ ಅದೇ ನಿಜವಾಗಿದ್ದು ಗೊತ್ತೇಯಿದೆ.
ನಾಗಚೈತನ್ಯ ಮತ್ತು ಸಮಂತಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಈ ಹೆಸರಿನ ಬದಲಾವಣೆಯೇ ಮೊದಲ ಸಾಕ್ಷಿಯಾಗಿತ್ತು. ಕೊನೆಗೆ ಅಭಿಮಾನಿಗಳ ಆತಂಕವೇ ನಿಜವಾಯಿತು. ಮದುವೆಯಾದ ಕೆಲವು ವರ್ಷಗಳಲ್ಲೇ ಈ ಜೋಡಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದು ದೂರಾದರು.
ಮತ್ತೆ ಹೆಸರು ಬದಲಾವಣೆ
ವಿಚ್ಛೇದನದ ನಂತರ ಸಮಂತಾ ಮತ್ತೆ ತಮ್ಮ ಹಳೆಯ ಹೆಸರಿಗೆ ಮರಳಿದ್ದರು. ಅಂದರೆ 'ಸಮಂತಾ ರುತ್‌ಪ್ರಭ್' ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಯಾವುದೇ ಕುಟುಂಬದ ಹೆಸರಿಗಿಂತ ತಮ್ಮ ತಂದೆ-ತಾಯಿಯ ಹೆಸರೇ ತಮಗೆ ಮುಖ್ಯ ಎಂದು ಅವರು ಪರೋಕ್ಷವಾಗಿ ಸಾರಿದ್ದರು. ಆದರೆ 2 ತಿಂಗಳ ಹಿಂದೆ ಆಕೆ 2ನೇ ಮದುವೆ ಆಗಿದ್ದು ಗೊತ್ತೇಯಿದೆ.
ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಇನ್ನು ಮುಂದೆ ತಮ್ಮ ಹೆಸರನ್ನು 'ಸಮಂತಾ ನಿಡುಮೊರು' ಬದಲಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಪತಿಯ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. 'ಮಾ ಇಂಟಿ ಬಂಗಾರಂ' ಎಂಬ ಚಿತ್ರವನ್ನು ಸ್ಯಾಮ್ ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ 'ಸಮಂತಾ ನಿಡುಮೊರು' ಎಂದು ಹೆಸರು ಹಾಕಿಕೊಳ್ಳುತ್ತಾರೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಶುರುವಾಗಿದೆ.


Click it and Unblock the Notifications











