For Quick Alerts
  ALLOW NOTIFICATIONS  
  For Daily Alerts

  ಪತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರುವ ಸಮಂತಾ ಈಗ ಏನ್ಮಾಡ್ತಾರೆ?

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಖ್ಯಾತ ಜೋಡಿ, ಕ್ಯೂಟ್ ಕಪಲ್, ಸ್ಯಾಮ್-ಚೈ ಎಂದೇ ಕರೆಸಿಕೊಳ್ಳುತ್ತಿದ್ದ ನಟಿ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಅನೇಕ ದಿನಗಳೇ ಕಳೆಯಿತು. ಆದರೂ ಈ ತಾರಾಜೋಡಿಯ ವಿಚ್ಛೇದನದ ಬಗ್ಗೆ ಇನ್ನು ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಇನ್ನು ನೆಚ್ಚಿನ ಜೋಡಿಯ ಡಿವೋರ್ಸ್ ವಿಚಾರವನ್ನು ಅರಗಿಸಿಕೊಂಡಿಲ್ಲ. ಒಂದಲ್ಲೊಂದು ವಿಚಾರಕ್ಕೆ ಇಬ್ಬರೂ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ.

  ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಾಗಿರುವ ಸಮಂತಾ-ನಾಗಚೈತನ್ಯ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ ಅವರ ಹಳೆಯ ದಿನಗಳನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸಮಂತಾ ಟ್ಯಾಟೂ ವಿಚಾರ ಸದ್ದು ಮಾಡುತ್ತಿದೆ. ಸಮಂತಾ ದೇಹದ ಮೇಲಿರುವ ಟ್ಯಾಟೂ ಮಾಜಿ ಪತಿ ನಾಗ ಚೈತನ್ಯ ಅವರಿಗೆ ಲಿಂಕ್ ಇದೆ. ಅಂದಹಾಗೆ ಸಮಂತಾ ದೇಹದಲ್ಲಿ ಮೂರು ಟ್ಯಾಟೂಗಳಿವೆ. ಈ ಮೂರು ಟ್ಯಾಟೂಗಳು ಸಹ ನಾಗ ಚೈತನ್ಯ ಅವರಿಗೆ ಲಿಂಕ್ ಇದೆ. ಹಾಗಾಗಿ ಈ ಟ್ಯಾಟೂಗಳನ್ನು ಸಮಂತಾ ಏನ್ಮಾಡುತ್ತಾರೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

  ಮೂರು ಟ್ಯಾಟೂಗಳಲ್ಲಿ ಸಮಂತಾ ಎದೆಯ ಭಾಗದ ಕೆಳಗೆ ಇರುವ ಟ್ಯಾಟೂ 'ಚೈ' ಎಂದು ಬರೆಸಿಕೊಂಡಿದ್ದಾರೆ. ಫೋಟೋಶೂಟ್ ಒಂದರಲ್ಲಿ ಸಮಂತಾ ಟ್ಯಾಟೂವನ್ನು ತೋರಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಕುತ್ತಿಗೆಯ ಹಿಂಬಾಗದಲ್ಲಿರುವ ಟ್ಯಾಟೂ ಸಮಂತಾ ಚೊಚ್ಚಲ ಸಿನಿಮಾ 'ಯೇ ಮಾಯಾ ಚೇಸಾವೆ' ಬಗ್ಗೆ ಇದೆ. ಸಮಂತಾ ಸಿನಿ ಜೀವನಕ್ಕೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟ ಸಿನಿಮಾ. ಸಮಂತಾ ರಾತ್ರೋರಾತ್ರಿ ಸ್ಟಾರ್ ಆದ ಸಿನಿಮಾ 'ಯೇ ಮಾಯಾ ಚೇಸಾವೆ'. ಹಾಗಾಗಿ ಆ ಸಿನಿಮಾದ ನೆನಪಿಗಾಗಿ ಸಮಂತಾ ತನ್ನ ಬೆನ್ನಮೇಲೆ YMC ಎಂದು ಹಾಕಿಸಿಕೊಂಡಿದ್ದಾರೆ. ಅಂದಹಾಗೆ ಸಮಂತಾ ಚೊಚ್ಚಲ ಸಿನಿಮಾದಲ್ಲಿ ಪತಿ ನಾಗ ಚೈತನ್ಯ ಜೊತೆ ನಟಿಸಿದ್ದರು. ನಾಯಕನಾಗಿ ನಾಗ ಚೈತನ್ಯ ಮಿಂಚಿದ್ದರು. ಹಾಗಾಗಿ ಈ ಟ್ಯಾಟೂದಲ್ಲೂ ನಾಗ ಚೈತನ್ಯ ನೆನಪಿದೆ.

  ಇನ್ನು ಮೂರನೆ ಟ್ಯಾಟೂ ಸಮಂತಾ ಕೈಯಲ್ಲಿದೆ. ಈ ಟ್ಯಾಟೂ ನಾಗ ಚೈತನ್ಯ ಜೊತೆ ಆಳವಾದ ಸಂಬಂಧ ಹೊಂದಿದೆ. ಸಮಂತಾ ಮತ್ತು ಚೈತನ್ಯ ಇಬ್ಬರೂ ಒಂದೇ ರೀತಿಯ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಟ್ಯಾಟೂ ಬಗ್ಗೆ ಮಾತನಾಡಿದ್ದ ಸಮಂತಾ ಚೈ ಮತ್ತು ತನಗೆ ತುಂಬಾ ವಿಶೇಷವಾದ ಟ್ಯಾಟೂ ಎಂದಿದ್ದರು.

  ಈ ಎಲ್ಲಾ ಟ್ಯಾಟುಗಳನ್ನು ಸಮಂತಾ ಈಗ ಏನ್ಮಾಡುತ್ತಾರೆ ಎನ್ನುವುದು ನೆಟ್ಟಿಗರ ಚರ್ಚೆ. ಅಂದಹಾಗೆ ಸಮಂತಾ ಕೂಡ ದೀಪಿಕಾ ಪಡುಕೋಣೆ ದಾರಿ ಹಿಡಿಯುತ್ತಾರಾ ಎನ್ನುವ ಮಾತು ಕೇಳಿಬರುತ್ತಿದೆ. ದೀಪಿಕಾ ಪಡುಕೋಣೆ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದಾಗ ರಣಬೀರ್ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಬಳಿಕ ರಣಬೀರ್ ಜೊತೆ ಬ್ರೇಕಪ್ ಆದ ಬಳಿಕ ಟ್ಯಾಟೂವನ್ನು ಬದಲಾಯಿಸಿದ್ದರು. ಸಮಂತಾ ಕೂಡ ಹಾಗೆ ಮಾಡುತ್ತಾರಾ ಎನ್ನುವ ಚರ್ಚೆ ನಡೆಯುತ್ತಿದೆ. ಅಂದಹಾಗೆ ಸಮಂತಾ ಮತ್ತು ನಾಗ ಚೈತನ್ಯ ಅವರದ್ದು 10 ವರ್ಷ ಸ್ನೇಹ ಬಾಂಧವ್ಯ. 2017ರಲ್ಲಿ ಇಬ್ಬರೂ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ 4 ವರ್ಷ ತುಂಬುವುದರೊಳಗೆ ಬೇರೆಯಾಗಿ ಅಚ್ಚರಿ ಮೂಡಿಸಿದ್ದಾರೆ.

  ಅಂದಹಾಗೆ ಸಮಂತಾ ಸದ್ಯ ತೆಲುಗಿನಲ್ಲಿ ಶಾಕುಂತಲಂ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ತಮಿಳಿನ ಒಂದು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಸೂಪರ್ ಸಕ್ಸಸ್ ಬಳಿಕ ಸಮಂತಾ ಯಾವುದೇ ಸಿನಿಮಾಗೆ ಸಹಿ ಮಾಡಿರಲಿಲ್ಲ. ಕೆಲವು ಸಮಯ ವಿರಾಮ ಪಡೆದಿದ್ದ ಸಮಂತಾ ಇದೀಗ ಮತ್ತೆ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Actress Samantha Ruth Prabhu's tattoos have a Naga Chaitanya link.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X