For Quick Alerts
  ALLOW NOTIFICATIONS  
  For Daily Alerts

  'ಶಾಕುಂತಲೆ' ಸಮಂತಾಗೆ ಸಿಕ್ಕ ದುಷ್ಯಂತ ಯಾರು? ಸಿನಿಮಾ ರಿಲೀಸ್ ಯಾವಾಗ?

  |

  ಸೌತ್ ಬ್ಯೂಟಿ ಸಮಂತಾ ಮಹಿಳಾ ಪ್ರಧಾನ ಸಿನಿಮಾಗಳತ್ತ ಹೆಚ್ಚು ಫೋಕಸ್ ಮಾಡಿದ್ದಾರೆ. ಸ್ಯಾಮ್ ನಟನೆಯ 'ಶಾಕುಂತಲಂ' ಹಾಗೂ 'ಯಶೋಧ' ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದ್ದು, ಮೊದಲು ಯಾವ ಸಿನಿಮಾ ರಿಲೀಸ್ ಆಗುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಸದ್ಯ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು 'ಶಾಕುಂತಲಂ' ಸಿನಿಮಾ ರಿಲೀಸ್ ಡೇಟ್ ಅಫೀಷಿಯಲ್ ಆಗಿ ಅನೌನ್ಸ್ ಆಗಿದೆ.

  'ಪುಷ್ಪ'- 2 ಸ್ಪೆಷಲ್ ಸಾಂಗ್ ನಂತರ ಸಮಂತಾ ನಟನೆಯ ಯಾವುದೇ ತೆಲುಗು ಸಿನಿಮಾ ಇನ್ನು ರಿಲೀಸ್ ಆಗಿಲ್ಲ. 'ಕಾತುವಾಕುಲೆ ರೆಂಡು ಕಾದಲ್' ಚಿತ್ರದಲ್ಲಿ ನಯನತಾರ ಹಾಗೂ ವಿಜಯ್ ಸೇತುಪತಿ ಜೊತೆಗೆ ಸ್ಯಾಮ್ ಸ್ಕ್ರೀನ್‌ ಶೇರ್ ಮಾಡಿಕೊಂಡಿದ್ದರು. ಇದೀಗ ಈ ಚೆನ್ನೈ ಚೆಲುವೆ ಲೀಡ್ ರೋಲ್‌ನಲ್ಲಿ ನಟಿಸಿರೋ 'ಶಾಕುಂತಲಂ' ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಈವರೆಗೆ ಚಿತ್ರದ ಪೋಸ್ಟರ್‌ಗಳಷ್ಟೇ ರಿವೀಲ್ ಆಗಿದೆ. ಪೌರಾಣಿಕ ಕಥಾಹಂದರ ಈ ಚಿತ್ರದಲ್ಲಿ ಶಾಕುಂತಲೆ ಹಾಗೂ ದುಷ್ಯಂತನ ಪ್ರೇಮಕಾವ್ಯವನ್ನು ನಿರ್ದೇಶಕ ಗುಣಶೇಖರ್ ಕಟ್ಟಿಕೊಡುತ್ತಿದ್ದಾರೆ.

  ಚರ್ಮ ಸಮಸ್ಯೆಯ ಚಿಕಿತ್ಸೆಗಾಗಿ ಅಮೆರಿಕಾಗೆ ಸಮಂತಾ? ಮ್ಯಾನೇಜರ್ ಹೇಳಿದ್ದೇನು?ಚರ್ಮ ಸಮಸ್ಯೆಯ ಚಿಕಿತ್ಸೆಗಾಗಿ ಅಮೆರಿಕಾಗೆ ಸಮಂತಾ? ಮ್ಯಾನೇಜರ್ ಹೇಳಿದ್ದೇನು?

  ನವೆಂಬರ್ 4ಕ್ಕೆ 'ಶಾಕುಂತಲಂ' ಸಿನಿಮಾ ಘೋಷಣೆ ಮಾಡುವುದಾಗಿ ಚಿತ್ರತಂಡ ಇದೀಗ ಘೋಷಿಸಿದೆ. ಇತ್ತೀಚೆಗೆ ಸಮಂತಾ ನಟನೆಯ 'ಯಶೋಧ' ಟೀಸರ್ ರಿಲೀಸ್ ಆಗಿತ್ತು. ಹಾಗಾಗಿ ಅದೇ ಸಿನಿಮಾ ಮೊದಲು ರಿಲೀಸ್ ಆಗುತ್ತೆ ಎಂದು ಎಲ್ಲರೂ ಅಂದುಕೊಂಡಿದ್ದರು. 'ಶಾಕುಂತಲಂ' ಚಿತ್ರದಲ್ಲಿ ಶಾಕುಂತಲೆಯಾಗಿ ಸಮಂತಾ ನಟಿಸ್ತಿದ್ದು, ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಮಹಾರಾಜನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಹೊಸ ಮೋಷನ್ ಪೋಸ್ಟರ್ ಜೊತೆಗೆ ಸಿನಿಮಾ ರಿಲೀಸ್ ಡೇಟ್ ರಿವೀಲ್ ಆಗಿದೆ.

  ಭರ್ಜರಿ ಸೆಟ್ ಹಾಕಿ ಈ ಪೌರಾಣಿಕ ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ. ಸಮಂತಾ ಮೊದಲ ಬಾರಿಗೆ ಇಂತಾದೊಂದು ಪಾತ್ರದಲ್ಲಿ ನಟಿಸಿದ್ದಾರೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಭರದಿಂದ ಸಾಗಿದ್ದು, ಗ್ರಾಫಿಕ್ಸ್ ವರ್ಕ್‌ ಜಾಸ್ತಿ ಇರುವುದರಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ. ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ನಟಿಸಿದ್ದಾಳೆ. ಕಾಳಿದಾಸನ ಅಭಿಜ್ಞಾನ ಶಾಕುತಲಂ ನಾಟಕವನ್ನಾಧರಿಸಿ ಸಿನಿಮಾ ಮೂಡಿ ಬರ್ತಿದೆ. ಸ್ವತಃ ನಿರ್ದೇಶಕ ಗುಣಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  ಪ್ರಗ್ನೆಂಟ್ ಲೇಡಿ ಪಾತ್ರದಲ್ಲಿ ಸಮಂತಾ; ಬಹುನಿರೀಕ್ಷಿತ ಯಶೋಧಾ ಟೀಸರ್ ಔಟ್ಪ್ರಗ್ನೆಂಟ್ ಲೇಡಿ ಪಾತ್ರದಲ್ಲಿ ಸಮಂತಾ; ಬಹುನಿರೀಕ್ಷಿತ ಯಶೋಧಾ ಟೀಸರ್ ಔಟ್

  ಶೇಖರ್ ವಿ. ಜೋಸೆಫ್ ಸಿನಿಮಾಟೋಗ್ರಫಿ, ಮಣಿಶರ್ಮ ಸಂಗೀತ ಚಿತ್ರಕ್ಕಿದೆ. ದಿಲ್ ರಾಜು ಸಿನಿಮಾ ವಿತರಣೆಯ ಜವಾಬ್ದಾರಿ ವಹಸಿಕೊಂಡಿದ್ದಾರೆ. ದೂರ್ವಾಸ ಮುನಿಗಳ ಪಾತ್ರದಲ್ಲಿ ಮೋಹನ್ ಬಾಬು, ಅನನೂಯ ಆಗಿ ಅದಿತಿ ಬಾಲನ್, ಕಣ್ವ ರಿಷಿಗಳ ಪಾತ್ರದಲ್ಲಿ ಪ್ರಕಾಶ್ ರೈ ಬಣ್ಣ ಹಚ್ಚಿದ್ದಾರೆ. ಮಧೂ, ಗೌತಮಿ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಶೀಘ್ರದಲ್ಲೇ ಸಿನಿಮಾ ಟೀಸರ್, ಟ್ರೈಲರ್ ಸಾಂಗ್ಸ್ ರಿಲೀಸ್ ಆಗಲಿದೆ. ತೆಲುಗು ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ.

  English summary
  Samantha ruth prabu starrer Shaakuntalam release date announced. Know More.
  Friday, September 23, 2022, 11:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X