Samantha Brand Value : ಜಾಹೀರಾತಿಗೆ ಸಮಂತಾ ಪಡೆವ ಸಂಭಾವನೆ ಇಷ್ಟೋಂದಾ?
ನಟಿ ಸಮಂತಾ ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯೆಸ್ಟ್ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ನಟಿ ಸಮಂತಾ ಕೈನಲ್ಲಿ ಇವೆ. ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ನಂತರ ಸಮಂತಾ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ, ಚಿತ್ರರಂಗದಲ್ಲಿ ಅವಕಾಶ ವಂಚಿತರಾಗುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು.
ಆದರೆ ಸಮಂತಾ ಜರ್ನಿಯೇ ಬೇರೆ ಯಾಗಿತ್ತು. ಹೇಳಬೇಕು ಅಂದರೆ ಸಮಂತಾ ಡಿವೋರ್ಸ್ ಬಳಿಕವೇ ಸಾಲು-ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.
ತೆಲುಗಿನ ಪುಷ್ಪ ಚಿತ್ರದಲ್ಲಿ ಐಟಂ ಸಾಗ್‌ಗೆ ಸೊಂಟ ಬಳುಕಿಸಿದ ನಂತರ ಅವರಿಗೆ ಮತ್ತಷ್ಟು ಅವಕಾಶಗಳೂ ಬರಲಾರಂಭಿಸಿತ್ತು. ಇದೀಗ ಜಾಹಿರಾತು ಕ್ಷೇತ್ರದಲ್ಲು ತಮ್ಮದೇ ಚಾಪು ಮೂಡಿಸುತ್ತಿದ್ದಾರೆ ಸಮಂತಾ.

ಜಾಹೀರಾತು ಶೂಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಸಮಂತಾ
ಟಾಲಿವುಡ್‌ನಿಂದ ಬಾಲಿವುಡ್‌ವರೆಗೂ ಸಿನಿಮಾಗಳನ್ನು ಒಪ್ಪಿಕೊಂಡು ಮಿಂಚುತ್ತಿರುವ ಸಮಂತಾ, ಇದರ ಜೊತೆ ಜೊತೆಗೆ ಸಾಕಷ್ಟು ಜಾಹೀರಾತು ಶೂಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿನಿಮಾದ ಜೊತೆ ಜೊತೆಗೆ ಜಾಹೀರಾತು ಕ್ಷೇತ್ರದಲ್ಲೂ ಸಮಂತಾ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಜಾಹಿರಾತಿನಿಂದ ಅತಿ ಹೆಚ್ಚು ಸಂಭಾವಣೆ ಪಡೆಯುವ ನಟಿಯರಲ್ಲಿ ಸಮಂತಾ ಕೂಡ ಟಾಪ್ ಲೆವೆಲ್‌ನಲ್ಲಿ ಇದ್ದಾರೆ. ಇದೀಗ ಟಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ಕೂಡ ಕೇಳಿಬರುತ್ತಿದೆ.

ಜಾಹೀರಾತು ಕ್ಷೇತ್ರದಲ್ಲಿ ಸಮಂತಾ ಗುರುತಿಸಿಕೊಂಡಿದ್ದಾರೆ
ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ ಘೋಷಣೆ ಮಾಡಿದ ಬಳಿಕ ಸಮಂತಾ ಮತ್ತು ನಾಗಚೈತನ್ಯ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಡಿವೋರ್ಸ್ ಬಳಿಕ ನಟಿ ಸಮಂತಾ ತನ್ನ ಕೆರಿಯರ್ ಅನ್ನು ಮತ್ತಷ್ಟು ಕಲರ್ ಫುಲ್ ಮಾಡಿಕೊಂಡಿದ್ದಾರೆ. ಸಾಲು-ಸಾಲು ಸಿನಿಮಾಗಳು, ಬಾಲಿವುಡ್ ಎಂಟ್ರಿ ಸೇರಿದಂತೆ, ಜಾಹೀರಾತು ಕ್ಷೇತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಈಗ ಬಂದಿರುವ ಸುದ್ದಿ ಏನು ಅಂದರೇ ಸಮಂತಾ ಡಿವೋರ್ಸ್ ಬಳಿಕ ಸಿನಿಮಾದ ಸಂಭಾವನೆ ಜೊತೆ ಜೊತೆಗೆ ಜಾಹೀರಾತುಗಳಿಗೂ ತನ್ನ ಸಂಭಾವನೆ ಏರಿಸಿಕೊಂಡಿದ್ದಾರೆ.

ಆಡ್ ಶೂಟ್‌ಗೆ 40 ರಿಂದ 50 ಸಂಭಾವನೆ
ಸಮಂತಾ ಇನ್ಸ್ಟಾಗ್ರಾಮ್ ನೋಡಿದರೆ ಸಾಕು , ಸಾಲು-ಸಾಲು ಜಾಹೀರಾತುಗಳ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಸಮಂತಾಗೆ ಬೇಡಿಕೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಒಂದು ಜಾಹೀರಾತು ಶೂಟ್‌ಗೆ 40 ರಿಂದ 50 ಸಂಭಾವನೆ ಪಡೆಯುತ್ತಾರಂತೆ.ಈ ಮೂಲಕ ಟಾಲಿವುಡ್‌ನಲ್ಲಿ ಜಾಹೀರಾತಿನಿಂದ ಇಷ್ಟೊಂದು ರೆಮ್ಯೂನರೇಷನ್ ಪಡೆಯುವ ಟಾಪ್ ನಟಿಯಾಗಿದ್ದಾರೆ ಸಮಂತಾ. ರಶ್ಮಿಕಾ ಮಂದಣ್ಣ, ನಟಿ ಪೂಜಾ ಹೆಗ್ಡೆ ಅವರನ್ನು ಹಿಂದಿಕ್ಕೆ ಸಮಂತಾ ಟಾಪ್ ಲಿಸ್ಟ್ ನಲ್ಲಿದ್ದಾರೆ.

ಹೆಚ್ಚು ಸಂಭಾವನೆ ಪಡೆಯುವ ನಟಿ ಸಮಂತಾ
ಇನ್ನು ಸಮಂತಾ ಸಿನಿಮಾ ರೆಮ್ಯೂನರೇಷನ್ ವಿಚಾರಕ್ಕೆ ಬಂದರೆ ವರದಿಗಳ ಪ್ರಕಾರ ಪ್ರಸ್ತುತ ಸಮಂತಾ ಪ್ರತಿ ಪ್ರಾಜೆಕ್ಟ್‌ಗೆ 3 ಕೋಟಿ ರೂ. ಪಡೆಯುತ್ತಾರಂತೆ. ಈ ಮೂಲಕ ಸಮಂತಾ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಗೂ ಈಗ 3 ಕೋಟಿಗಿಂತಲೂ ಕಡಿಮೆ ಸಂಭಾವನೆ ಪಡೆಯುದಿಲ್ಲವಂತೆ. ಸಮಂತಾಗಿಂತಲೂ ಹೆಚ್ಚು ಸಂಭಾವನೆ ಪಡೆದು ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ನಟಿ ನಯನ್ ತಾರಾ.

ಸಿನಿಮಾ ಮತ್ತು ಜಾಹೀರಾತು ಸಂಭಾವನೆ ರಿವೀಲ್
ನಟಿ ಸಮಂತಾ ಈ ಹಿಂದೆ ಸಂಭಾವನೆ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದ್ದು ಅಂದರೆ ಅದು 'ಪುಷ್ಪ' ಚಿತ್ರದ ಹಾಡಿನ ಮೂಲಕ. ಪುಷ್ಪ ಚಿತ್ರದ 'ಊ ಅಂಟಾವ' ಹಾಡಿನಲ್ಲಿ ಡ್ಯಾನ್ಸ್ ಮಾಡಲು ಸಮಂತಾ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿ ಆಗಿದ್ದರು. ಈಗ ಅವರ ಸಿನಿಮಾ ಮತ್ತು ಜಾಹೀರಾತು ಸಂಭಾವನೆ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಅವಕಾಶಗಳು ಹೆಚ್ಚೆಚ್ಚು ಸಿಗುತ್ತಿರುವುದಕ್ಕೆ ಖುಷಿಯಾಗಿದ್ದಾರೆ.


Click it and Unblock the Notifications











