ವರ್ಕ್‌ಔಟ್‌ಗೆ ಪದೇ ಪದೇ ತೊಂದರೆ ಕೊಡುತ್ತಿರುವವರ ಬಗ್ಗೆ ಸಮಂತಾ ದೂರು!

ನಟಿ ಸಮಂತಾ ಸಿನಿಮಾರಂಗದಲ್ಲಿ 12 ವರ್ಷಗಳನ್ನು ಕಳೆದಿದ್ದಾರೆ. ಆದರೆ ಈಗಲೂ ಸಮಂತಾಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಯಾಕೆಂದರೆ ಸಮಂತಾ ಈಗಲೂ ಕೂಡ ಗ್ಲ್ಯಾಮರ್ ಗೊಂಬೆ. ಸಮಂತಾ ವೈಯಕ್ತಿಕ ಬದುಕಿನಲ್ಲಿ ವಿಚ್ಛೇದನದ ಬಿರುಗಾಳಿ ಬೀಸಿದರು ಕೂಡ, ಆಕೆಯ ವೃತ್ತಿ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈಗಲೂ ಸಾಲು ಸಾಲು ದೊಡ್ಡ ದೊಡ್ಡ ಆಫರ್‌ಗಳು ಸಮಂತಾ ಅವರನ್ನು ಹರಸಿಕೊಂಡು ಬರುತ್ತಿದೆ. ಸಧ್ಯ ಸಿನಿಮಾ, ಆಡ್ ಶೂಟ್‌ಗಳಲ್ಲಿ ಹೆಚ್ಚೆಚ್ಚು ಬ್ಯುಸಿಯಾಗಿರುವ ಸಮಂತಾ ಬಿಡುವು ಸಿಕ್ಕಾಗಲೆಲ್ಲಾ ವರ್ಕ್‌ಔಟ್ ಮಾಡಿ ತನ್ನ ಫಿಟ್‌ನೆಸ್ ಕಾಯ್ದುಕೊಳ್ಳುತ್ತಾರೆ.

ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ತನ್ನ ಫಿಟ್‌ನೆಸ್ ಬಗ್ಗೆ ವೀಡಿಯೋ ಶೇರ್ ಮಾಡಿಕೊಳ್ಳುತ್ತಿದ್ದ ಸಮಂತಾ ಇತ್ತೀಚೆಗೆ ಕೂಡ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಸಮಂತಾ ಇಬ್ಬರು ವಿಶೇಷ ಗೆಸ್ಟ್‌ಗಳನ್ನು ಪರಿಚಯಿಸಿದ್ದಾರೆ. ನಿಮಗೆ ಈಗಾಗಲೇ ತಿಳಿದಿರುವಂತೆ, ಸಮಂತಾ ಸಂಪೂರ್ಣ ಫಿಟ್ನೆಸ್ ಫ್ರೀಕ್. ಸಮಯ ತನ್ನ ಬಿಡುವಿನ ವೇಳೆಯನ್ನು ಜಿಮ್‌ನಲ್ಲಿ ಬೆವರು ಸುರಿಸುತ್ತಾ ಕಳೆಯಲು ಇಷ್ಟಪಡುತ್ತಾರೆ. ಅಂತೆಯೇ ಸಮಂತಾ ತನ್ನ ಇಬ್ಬರು ಗೆಳೆಯರಾದ ಸಶಾ ಮತ್ತು ಹ್ಯಾಶ್(ಶ್ವಾನಗಳು) ರೊಟ್ಟಿಗೆ ಸೇರಿಕೊಂಡು ಫೋಟೊ ಶೇರ್ ಮಾಡಿದ್ದಾರೆ.

ಸಮಂತಾ ತಮ್ಮ ವರ್ಕ್‌ಔಟ್ ಸಮಯದಲ್ಲಿ ತನ್ನ ಇಬ್ಬರು ಸ್ನೇಹಿತರಾದ ಸಶಾ ಮತ್ತು ಹ್ಯಾಶ್ ಫೋಟೊವನ್ನು ಹಂಚಿಕೊಂಡಿದ್ದಾರೆ.ಅಲ್ಲದೇ ಅದಕ್ಕೆ ಕ್ಯಾಪ್ಷನ್‌ ಕೂಡ ಬರೆದುಕೊಂಡಿರುವ ಅವರು "ನನಗೆ ತಿಳಿದಿರುವಂತೆ ಜೀವನ @ ಸಹೋದರರ ಸಮಸ್ಯೆಗಳು" ಎಂದು ಬರೆದಿದ್ದಾರೆ. ಅದರ ನಂತರ ಸಮಂತಾ ಮತ್ತೆ ವರ್ಕ್‌ಔಟ್ ಮಾಡಲು ಪ್ರಾರಂಭಿಸಿದ್ದಾರೆ. ಆಗಲೂ ಸಶಾ ಮತ್ತು ಹ್ಯಾಶ್ ಮಧ್ಯಪ್ರವೇಶ ಮಾಡಿ ಸಮಂತಾ ವರ್ಕ್‌ಔಟ್‌ ಮಾಡಲು ತೊಂದರೆ ನೀಡುತ್ತವೆ. ಈ ಬಗ್ಗೆ ಬರೆದುಕೊಂಡಿರುವ ಸಮಂತಾ ಸಶಾ ಮತ್ತು ಹ್ಯಾಶ್‌ರ ತರಲೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Samantha’s Workout Interrupted by Her Furry Friends Sasha and Hash

ಸಮಂತಾ ಈ ರೀತಿ ಸಶಾ ಮತ್ತು ಹ್ಯಾಶ್ ಫೋಟೊ ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲಾ. ಈ ಹಿಂದೆ ಕೂಡ ವರ್ಕ್‌ಔಟ್ ಮಾಡುವ ಸಂದರ್ಭದಲ್ಲಿ ಸಶಾ ಮತ್ತು ಹ್ಯಾಶ್ ಮಧ್ಯಪ್ರವೇಶದ ಬಗ್ಗೆ ಸಮಂತಾ ವೀಡಿಯೊ ಶೇರ್ ಮಾಡಿಕೊಂಡಿದ್ದರು. ಅವುಗಳೊಂದಿಗೆ ಸಮಯ ಕಳೆಯುವುದು, ಮನೆಯಲ್ಲಿ ಸಶಾ ಮತ್ತು ಹ್ಯಾಶ್ ಆಕ್ಟಿವಿಟೀಸ್, ಜಾಗಿಂಗ್ ಸಮಯ ಹೀಗೆಲ್ಲಾ ವೀಡಿಯೋ ಶೇರ್ ಮಾಡಿಕೊಳ್ಳುತ್ತಿದ್ದ ಸಮಂತಾ ಈಗ ವರ್ಕ್‌ಔಟ್ ಸಂದರ್ಭದಲ್ಲಿ ಸಶಾ ಮತ್ತು ಹ್ಯಾಶ್ ಹೇಗೆಲ್ಲಾ ಡಿಸ್ಟರ್ಬ್ ಮಾಡುತ್ತೆ ಅನ್ನೋದನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 22 ಮಿಲಿನಯ್‌ಗೂ ಅಧಿಕ ಅನುಯಾಯಿಗಳಿದ್ದಾರೆ. ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಈ ಸಂಖ್ಯೆ ಫೇಸ್ ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಭಿನ್ನವಾಗಿದೆ. ಆದರೆ ಇನ್‌ಸ್ಟಾಗ್ರಾಮ್ ಪ್ರೋಮೋಷನ್ ಪ್ರತ್ಯೇಕವಾಗಿ ಮಾಡುತ್ತಾರೆ. ಅಧಿಕ ಮಂದಿ ಸಮಂತಾ ಅವರನ್ನು ಫಾಲೋ ಮಾಡ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.

Samantha’s Workout Interrupted by Her Furry Friends Sasha and Hash

ಇನ್ನು ಸಮಂತಾ ಸಿನಿಮಾ ವಿಚಾರಕ್ಕೆ ಬರುವುದಾರೆ. ಸಮಂತಾ ಸದ್ಯ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ 'ಶಾಕುಂತಲಂ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಮಂತಾ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರೊಂದಿಗೆ ಸಮಂತಾ 'ಯಶೋಧ', 'ಕಾತು ವಾಕುಲ ರೆಂಡು ಕಾದಲ್' ಸಿನಿಮಾಗಳು ಕೂಡ ರಿಲೀಸ್‌ಗೆ ಸಿದ್ಧ ಆಗುತ್ತಿವೆ. ಇನ್ನು ಸಮಂತಾಳ ಹಾಲಿವುಡ್ ಸಿನಿಮಾ ಅದಾಗಲೇ ಪ್ರಕಟ ಆಗಿದೆ.

More from Filmibeat

English summary
Samantha’s cute friends have come in the way of her workout. Not, just that, the star shares many other adorable sneak peeks of the special moments with Sasha and Hash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X