For Quick Alerts
  ALLOW NOTIFICATIONS  
  For Daily Alerts

  ಸಮಂತಾ 'ಯಶೋದಾ' ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗ; ಮಾಜಿ ಪತಿ ಚಿತ್ರಕ್ಕಿಂತಲೂ ಹೆಚ್ಚು!

  |

  ನಟಿ ಸಮಂತಾ ಅಭಿನಯದ ಯಶೋಧಾ ಚಿತ್ರ ನಿನ್ನೆಯಷ್ಟೆ ( ನವೆಂಬರ್ 11 ) ದೇಶಾದ್ಯಂತ ಬಿಡುಗಡೆಗೊಂಡಿದೆ. ವಿವಾಹ ವಿಚ್ಛೇದನದ ಬಳಿಕ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಸಮಂತಾ ರುತ್ ಪ್ರಭು ನಂತರ ಕಾದುವಾಕುಲ ರೆಂಡು ಕಾದಲ್ ಎಂಬ ತಮಿಳು ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಹೀಗೆ ವಿವಾಹ ವಿಚ್ಛೇದನ ಪಡೆದುಕೊಂಡ ನಂತರ ನಟಿಸಿದ್ದ ಈ ಎರಡೂ ಚಿತ್ರಗಳಲ್ಲಿಯೂ ಬೋಲ್ಡ್ ಆಗಿ ಅಭಿನಯಿಸಿದ್ದ ಸಮಂತಾ ವಿಚ್ಚೇದನದ ಬಳಿಕ ಬರೀ ಆ ಹಾಟ್ ರೋಲ್ ಆರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸಿದ್ದರು.

  ಆದರೆ ಸದ್ಯ ಬಿಡುಗಡೆಯಾಗಿರುವ ಯಶೋದಾ ಚಿತ್ರದ ಮೂಲಕ ಈ ಎಲ್ಲ ಟೀಕೆಗಳಿಗೆ ನಟಿ ಸಮಂತಾ ರುತ್ ಪ್ರಭು ತಿರುಗೇಟು ನೀಡಿದ್ದಾರೆ. ಬಾಡಿಗೆ ತಾಯ್ತನದ ಥ್ರಿಲ್ಲಿಂಗ್ ಚಿತ್ರ ಕಥೆಯನ್ನು ಹೊಂದಿರುವ ಯಶೋದಾ ಚಿತ್ರ ಬಿಡುಗಡೆಯ ದಿನ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಚಿತ್ರ ವೀಕ್ಷಿಸಿದ ಸಿನಿಪ್ರೇಕ್ಷಕರು ಇಂತಹ ಒಳ್ಳೆಯ ಚಿತ್ರಗಳ ಅವಶ್ಯಕತೆ ಚಿತ್ರರಂಗಕ್ಕೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

  ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಹಾಗೂ ಹಿಂದಿ ಪ್ರೇಕ್ಷಕರು ಸಹ ಯಶೋದಾ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರೇಕ್ಷಕರ ಮನಗೆದ್ದಿರುವ ಯಶೋಧಾ ಗಲ್ಲಾಪೆಟ್ಟಿಗೆಯಲ್ಲಿಯೂ ಸಹ ಗೆದ್ದಿದೆ. ಹಾಗಾದರೆ ಸಮಂತಾ ರುತ್ ಪ್ರಭು ಅಭಿನಯದ ಯಶೋದಾ ಚಿತ್ರ ಮೊದಲನೇ ದಿನ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣವನ್ನು ಸಂಪಾದಿಸಿದೆ ಎಂಬುದರ ಕುರಿತ ವಿವರ ಕೆಳಕಂಡಂತಿದೆ.

  ಯಶೋಧಾ ಮೊದಲ ದಿನ ಗಳಿಸಿದ್ದೆಷ್ಟು?

  ಯಶೋಧಾ ಮೊದಲ ದಿನ ಗಳಿಸಿದ್ದೆಷ್ಟು?

  ಸಮಂತಾ ರುತ್ ಪ್ರಭು ಅಭಿನಯದ ಯಶೋಧಾ ಮೊದಲನೇ ದಿನ ವಿಶ್ವಾದ್ಯಂತ 3.20 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ. ಬಿಡುಗಡೆಯ ದಿನ ಬೆಳಿಗ್ಗೆ ಪ್ರದರ್ಶನಗಳಲ್ಲಿ 19.9%, ಮಧ್ಯಾಹ್ನ 24%, ಸಂಜೆ 29.94% ಹಾಗೂ ರಾತ್ರಿ 45.72% ಬುಕ್ಕಿಂಗ್ ಪಡೆದುಕೊಂಡಿದ್ದ ಯಶೋದಾ ಒಟ್ಟಾರೆಯಾಗಿ ಮೊದಲ ದಿನ 29.98% ಬುಕ್ಕಿಂಗ್ ಪಡೆದಿತ್ತು.

  ಮಾಜಿ ಪತಿಯ ಅಂತಿಮ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್!

  ಮಾಜಿ ಪತಿಯ ಅಂತಿಮ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್!

  ಇನ್ನು ಈ ವರ್ಷ ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಅಭಿನಯದ ಥ್ಯಾಂಕ್ ಯೂ ತೆಲುಗು ಚಿತ್ರ ತೆರೆಕಂಡಿತ್ತು. ಪ್ರೇಕ್ಷಕರ ಮನಗೆಲ್ಲುವಲ್ಲಿ ಹಾಗೂ ಗಲ್ಲಾಪೆಟ್ಟಿಗೆ ಎರಡರಲ್ಲಿಯೂ ಮಕಾಡೆ ಮಲಗಿದ ಥ್ಯಾಂಕ್ ಯು ಚಿತ್ರ ಮೊದಲನೇ ದಿನ 2.30 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ಮೂಲಕ ಯಶೋದಾ ಚಿತ್ರ ಥ್ಯಾಂಕ್ ಯೂ ಚಿತ್ರದ ಮೊದಲ ದಿನದ ಕಲೆಕ್ಷನ್ ಉಡೀಸ್ ಮಾಡಿದ್ದು, ಇದು ಸದ್ಯದ ವೈರಲ್ ಸುದ್ದಿಯಾಗಿದೆ. ಎರಡೂ ಚಿತ್ರಗಳ ಮೊದಲನೇ ದಿನದ ಕಲೆಕ್ಷನ್ ಸಂಖ್ಯೆಯನ್ನು ಹೋಲಿಕೆ ಮಾಡಿ ನೆಟ್ಟಿಗರು ನಾಗಚೈತನ್ಯ ಹಾಗೂ ಕುಟುಂಬದವರನ್ನು ಟ್ರೋಲ್ ಮಾಡುತ್ತಿದ್ದಾರೆ.

  ಎರಡನೇ ದಿನ ಕಲೆಕ್ಷನ್ ಹೆಚ್ಚುವ ಸಾಧ್ಯತೆ

  ಎರಡನೇ ದಿನ ಕಲೆಕ್ಷನ್ ಹೆಚ್ಚುವ ಸಾಧ್ಯತೆ

  ಮೊದಲ ದಿನ 3.20 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಸಮಂತಾ ರುತ್ ಪ್ರಭು ಅಭಿನಯದ ಯಶೋದಾ ಚಿತ್ರ ಎರಡನೇ ದಿನದ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ 1.41 ಕೋಟಿ ಗಳಿಕೆ ಮಾಡಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೆ ಚಿತ್ರದ ಕಂಟೆಂಟ್ ಕುರಿತು ಸಿನಿಪ್ರೇಕ್ಷಕರು ಚರ್ಚಿಸುತ್ತಿರುವ ಕಾರಣ ಮೂರನೇ ದಿನವಾದ ಭಾನುವಾರ ಚಿತ್ರ ಮತ್ತಷ್ಟು ದೊಡ್ಡ ಕಲೆಕ್ಷನ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

  English summary
  Samantha's Yashoda collects 3.20 crores on Day 1; it's more than Naga Chaitanya's last film thank you
  Saturday, November 12, 2022, 9:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X