ಹೊಸ ವರ್ಕೌಟ್ ವಿಡಿಯೋ ಶೇರ್ ಮಾಡಿದ ಸಮಂತಾ: ತಮಾಷೆಯಾಗಿ ಕಾಲೆಳೆದ ಸ್ನೇಹಿತೆ

ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಹೆಚ್ಚು ಜಿಮ್‌ನಲ್ಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಯಾಮ್ ವರ್ಕೌಟ್‌ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದಕ್ಕೆ ಅಭಿಮಾನಿಗಳು, ಆಪ್ತರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಸಾಂಗ್ಸ್ ಒಂದೊಂದಾಗಿ ರಿಲೀಸ್ ಆಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಕೂಡ ತೆರೆಗೆ ಬರಲಿದೆ.

ಕೆಲ ದಿನಗಳ ಹಿಂದೆ ಸಮಂತಾ ತಾವು ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಆ ನಂತರ ಸಿನಿಮಾ ಕೆಲಸಗಳಿಂದ ಬಿಡುವು ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಇದರ ನಡುವೆಯೇ 'ಯಶೋದ' ಸಿನಿಮಾ ಪ್ರಚಾರ ಮಾಡಿದ್ದರು. ಈಗ 'ಶಾಕುಂತಲಂ' ಸಿನಿಮಾ ಪ್ರಚಾರಕ್ಕೂ ಮುಂದಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯದ ನಡುವೆಯೂ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇನ್ನು ಶೀಘ್ರದಲ್ಲೇ ಮತ್ತೆ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದಾರೆ. ಮಯೋಸೈಟಿಸ್ ವಿರುದ್ಧ ಸ್ಯಾಮ್ ಹೋರಾಟ ಮುಂದುವರೆದಿದೆ.

samantha-shares-new-workout-video-on-instagram

ದಿನದಿಂದ ದಿನಕ್ಕೆ ತಾವು ಮತ್ತಷ್ಟು ಶಕ್ತಿವಂತರಾಗುತ್ತಿರುವುದಾಗಿ ಪುಲ್ ಅಪ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. "ಕಠಿಣ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ, ನನಲ್ಲಿ ಸ್ಪೂರ್ತಿ ತುಂಬಿದ 'ಊ ಈಸ್ ಗ್ರಾವಿಟಿ' ಬ್ಯಾಂಡ್‌ಗೆ ಧನ್ಯವಾದ. ಬರೀ ಡಯಟ್‌ ಮಾಡಿ ಪೂರಕ ಆಹಾರ ಸೇವಿಸಿದ ಮಾತ್ರಕ್ಕೆ ಶಕ್ತಿ ಬರುವುದಿಲ್ಲ. ನಮ್ಮ ಆಲೋಚನೆಯ ವಿಧಾನದ ಮೇಲೆ ಅದು ನಿರ್ಧರಿತವಾಗಿರುತ್ತದೆ" ಎಂದು ಸಮಂತಾ ಬರೆದುಕೊಂಡಿದ್ದಾರೆ. ಸಮಂತಾ ವಿಡಿಯೋಗೆ ವಿಕ್ಟರಿ ವೆಂಕಟೇಶ್ ಮಗಳು ಆಶ್ರಿತ, ನಟ ಸುಶಾಂತ್ ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ಸೇರಿ ಹಲವರು ಕಾಮೆಂಟ್ ಮಾಡಿದ್ದಾರೆ.

samantha-shares-new-workout-video-on-instagram

ನಿರ್ದೇಶಕಿ ನಂದಿನಿ "ನೀನು 2 ಕೈಯಲ್ಲಿ ಮಾಡುವುದನ್ನು ನಾನು ಒಂದೇ ಕೈಯಲ್ಲಿ ಮಾಡುತ್ತಿದ್ದೇನೆ. ನೀನು ಫೀಲ್ ಆಗುತ್ತಿಯಾ ಎಂದು ಆ ವಿಡಿಯೋ ಶೇರ್ ಮಾಡಿಲ್ಲ" ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸಮಂತಾ "ನಾನು ಇನ್ನು ಬದುಕಿದ್ದೇನೆ. ಸತ್ತಿಲ್ಲ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

More from Filmibeat

English summary
Samantha shares new workout video on Instagram. Samantha was doing her pull-ups in this video. Actress is awaiting the release of her film Shakuntalam. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X