For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನದ ಬಳಿಕ ನೈತಿಕತೆ ಬಗ್ಗೆ ಸಮಂತಾ ಮಾರ್ಮಿಕ ಪೋಸ್ಟ್

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ನ ಜನಪ್ರಿಯ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ನೀಡಿ ಅನೇಕ ದಿನಗಳಾದರೂ ಇಬ್ಬರ ವಿಚ್ಛೇದನದ ಸುದ್ದಿ ಇನ್ನು ಸದ್ದು ಮಾಡುತ್ತಿದೆ. ಇಬ್ಬರ ವಿಚ್ಛೇದನದ ಬಗ್ಗೆ ತರಹೇವಾರಿ ಸುದ್ದಿ ಹರಿದಾಡುತ್ತಿದೆ. ಕೆಲವರು ಸಮಂತಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ನಾಗ ಚೈತನ್ಯ ದೂರ ಆಗಲು ಸಮಂತಾ ಅವರೇ ಕಾರಣ ಎನ್ನುವ ಕೆಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿವೆ.

  ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದಾರೆ. ಆಗಾಗ ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ವಿಚ್ಛೇದನದ ಬಳಿಕವೂ ಸಮಂತಾ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಫೋಟೋ ಶೂಟ್ ಫೋಟೋ ಶೇರ್ ಮಾಡಿದ್ದ ಸಮಂತಾಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡಿದ್ದರು. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಸಮಂತಾ ಮತ್ತೊಂದು ಪೋಸ್ಟ್ ಹಾಕಿದ್ದು, ಮಹಿಳೆಯರ ನೈತಿಕತೆ ಬಗ್ಗೆ ಪ್ರಬಲವಾದ ಪೋಸ್ಟ್ ಮಾಡಿದ್ದಾರೆ. ಫರೀದಾ ಡಿ ಅವರ ಮಹಿಳೆಯರ ನೈತಿಕತೆ ಬಗ್ಗೆ ಇರುವ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಮಹಿಳೆಯರ ನೈತಿಕತೆಯನ್ನೆ ಪದೇ ಪದೇ ಪ್ರಶ್ನೆ ಮಾಡಲಾಗುತ್ತದೆ. ಪುರುಷರ ನೈತಿಕತೆ ಪ್ರಶ್ನೆ ಮಾಡುವಿದಿಲ್ಲ ಎನ್ನುವ ಪೋಸ್ಟ್ ಅನ್ನು ಸಮಂತಾ ಶೇರ್ ಮಾಡಿದ್ದಾರೆ.

  "ಮಹಿಳೆಯರ ನೈತಿಕತೆಯನ್ನು ಪದೇ ಪದೇ ಪ್ರಶ್ನೆ ಮಾಡುತ್ತೀರಾ. ಪುರುಷರ ನೈತಿಕೆಯನ್ನು ಪ್ರಶ್ನಿಸುವುದಿಲ್ಲ ಎನ್ನುವುದಾದರೆ ನಮ್ಮ ಈ ಸಮಾಜಕ್ಕೆ ನೈತಿಕತೆಯೇ ಇಲ್ಲ" ಎನ್ನುವ ಫರೀದಾ ಡಿ ಅವರ ಕೋಟ್ ಅನ್ನು ಹಂಚಿಕೊಳ್ಳುವ ಮೂಲಕ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಅವರ ಈ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

  ಸಮಂತಾ ಮತ್ತು ನಾಗ ಚೈತನ್ಯ ಹಳೆಯದನ್ನು ಮರೆತು ಹೊಸ ಜೀವನ ಪ್ರಾರಂಭಿಸುತ್ತಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ದಿ ಫ್ಯಾಮಿಲಿ ಮ್ಯಾನ್2 ವೆಬ್ ಸೀರಿಸ್ ಬಳಿಕ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದು, ಬಾಲಿವುಡ್ ನಲ್ಲಿ ಸಾಕಷ್ಟು ಆಫರ್ ಬರುತ್ತಿವೆ. ಹಾಗಾಗಿ ಸಮಂತಾ ಇನ್ಮುಂದೆ ಬಾಲಿವುಡ್ ಕಡೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಅಲ್ಲದೆ ಸಮಂತಾ ಹೈದರಾಬಾದ್ ಬಿಟ್ಟು ಮುಂಬೈನಲ್ಲಿ ನೆಲೆಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಮಂತಾ ಹೈದರಾಬಾದ್ ಬಿಟ್ಟು ಎಲ್ಲಿಗೂ ಹೋಗಿವುದಿಲ್ಲ ಎಂದು ಹೇಳಿದ್ದರು. ಮೂಲಗಳ ಪ್ರಕಾರ ಸಮಂತಾ ಮುಂಬೈನಲ್ಲಿ ನೆಲೆಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ತೆಲುಗಿನಲ್ಲಿ ಶಾಕುಂತಲಂ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ತಮಿಳಿನ ಒಂದು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಕೆಲವು ಸಮಯ ವಿರಾಮ ಪಡೆದಿದ್ದ ಸಮಂತಾ ಇದೀಗ ಮತ್ತೆ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ.

  ಇನ್ನು ನಾಗ ಚೈತನ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ ನಾಗ ಚೈತನ್ಯ ಸದ್ಯ ಲವ್ ಸ್ಟೋರಿ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಈ ಸಿನಿಮಾ ನಾಗ ಚೈತನ್ಯ ಸಿನಿ ಬದುಕಿಗೆ ದೊಡ್ಡ ಮೈಲೇಜ್ ತಂದುಕೊಟ್ಟ ಸಿನಿಮಾವಾಗಿದೆ. ಈ ಸಿನಿಮಾ ನಾಗ್ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡದ ನಾಗ್ ಮುಂದಿನ ಸಿನಿಮಾಗೆ ಯಾರು ಡೈರಕ್ಷನ್ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Actress Samantha shares powerful post on women mentality after divorce with Naga Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X