ಸಮಂತಾಗೆ ಎದುರಾಯ್ತು ಅಸಭ್ಯ ಪ್ರಶ್ನೆ: ಖಡಕ್ ಉತ್ತರ ಕೊಟ್ಟ ನಟಿ!
ನಟಿ ಸಮಂತಾ ಸದ್ಯ ಶಾಕುಂತಲೆ ಅವತಾರ ರಿವೀಲ್ ಮಾಡಿ ಸುದ್ದಿ ಆಗಿದ್ದರು. ಶಾಕುಂತಲೆ ರೂಪದಲ್ಲಿ ದರ್ಶನ ಕೊಟ್ಟ ಸಮಂತಾಳನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಶಾಕುಂತಲಂ ಚಿತ್ರದ ಪೋಸ್ಟರ್ ವೈರಲ್ ಆಗುತ್ತಲೇ, ಸಮಂತಾ ಜನರ ಜೊತೆಗೆ ಮಾತಿಗಿಳಿಯಲು ನಿರ್ಧರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತರ ಸೆಷನ್ ಮಾಡಿದರು.
Recommended Video
ಜನರಿಗೆ ಸಮಂತಾ ಬಗ್ಗೆ ಇರುವ ಪ್ರಶ್ನೆಗಳನ್ನು ಕೇಳುವಂತೆ ಸೂಚನೆ ನೀಡಿದ್ದರು. ಹಾಗಾಗಿ ಸಾಕಷ್ಟು ಮಂದಿ ತಮಗೆ ಸಮಂತಾ ಬಗ್ಗೆ ಇರುವ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಎಲ್ಲಾ ಪ್ರಶ್ನೆಗಳಿಗೂ ಕೂಡ ಸಮಂತಾ ಸಮಾಧಾನವಾಗಿಯೆ ಉತ್ತರ ಕೊಟ್ಟಿದ್ದಾರೆ. ಆದರೆ ಒಂದು ಪ್ರಶ್ನೆ ಮಾತ್ರ ಸಮಂತಾ ತಾಳ್ಮೆ ಪರೀಕ್ಷಿಸಿದೆ.
ಸಲ್ಲದ ಪ್ರಶ್ನೆ ಕೇಳಿದ ವ್ಯಕ್ತಿಗೆ ಸಮಂತಾ ಸರಿಯಾದ ಉತ್ತರವೇ ಕೊಟ್ಟಿದ್ದಾರೆ. ಅಸಭ್ಯವಾದ ಡಬಲ್ ಮೀನಿಂಗ್ ಪ್ರಶ್ನೆಯನ್ನು ಕೇಳಲಾಗಿದೆ. ಆದರೆ ಈ ಪ್ರಶ್ನೆಯನ್ನು ಹಾಗೆ ಬಿಡದೆ ಸಮಂತಾ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಟ್ರೋಲ್‌ಗೆ ಸಮಂತಾ ಬ್ರೇಕ್ ಹಾಕಿದ್ದಾರೆ.

ಅಸಭ್ಯ ಪ್ರಶ್ನೆ ಸ್ವೀಕರಿಸಿದ ಸಮಂತಾ!
ಸಮಂತಾ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಸೆಷನ್‌ನಲ್ಲಿ ತೊಡಗಿದ್ದರು. ಈ ವೇಳೆ ಟ್ರೋಲ್ ಮಾದರಿಯ, ಅಸಭ್ಯ ಪ್ರಶ್ನೆ ಒಂದು ಸಮಂತಾಗೆ ಎದುರಾಗಿದೆ. ಸಮಂತಾಳನ್ನು ರಿಪ್ರೋಡ್ಯೂಸ್ ಮಾಡುವುದಾಗಿ ಪ್ರಶ್ನೆಯಲ್ಲಿ ಕೇಳಲಾಗಿತ್ತು. ರಿಪ್ರೊಡ್ಯೂಸ್ ಎಂದರೆ ಪುನರುತ್ಪಾದನೆ ಎನ್ನುವ ಅರ್ಥ ಬರುತ್ತದೆ. ಇದನ್ನು ಅಸಭ್ಯ ನೆಲೆಯಲ್ಲಿ ಮತ್ತು ದ್ವಂಧ್ವ ಅರ್ಥದಲ್ಲಿ ಕೇಳಲಾಗಿದೆ. ಈ ಪ್ರಶ್ನೆಯನ್ನು ಸ್ವೀಕರಿಸಿದ ನಟಿ ಸಮಂತಾ ಖಾರವಾಗಿ ಉತ್ತರ ಕೊಟ್ಟು ಪಾಠ ಕಲಿಸಿದ್ದಾರೆ.

ಸಮಂತಾಗೆ ಎದುರಾದ ಪ್ರಶ್ನೆ ಇದು!
ಸಾಲು, ಸಾಲು ಪ್ರಶ್ನೆಗಳಿಗೆ ಸಮಂತಾ ಉತ್ತರ ನೀಡುತ್ತಿದ್ದಾಗ, ಎದುರಾದ ಅಸಭ್ಯ ಪ್ರಶ್ನೆ ಇದು. "ನೀವು ರಿಪ್ರೋಡ್ಯೂಸ್ ಆಗಿದ್ದೀರಾ?, ಏಕೆಂದರೆ ನಾನು ನಿನ್ನನ್ನು ರಿಪ್ರೋಡ್ಯೂಸ್ ಮಾಡಲು ಬಯಸುತ್ತೇನೆ." ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಸಮಂತಾ ಕೊಟ್ಟ ಉತ್ತರ ಹೀಗಿದೆ. "ಒಂದು ವಾಕ್ಯದಲ್ಲಿ ರೀಪ್ರೊಡ್ಯೂಸ್ ಪದವನ್ನು ಹೇಗೆ ಬಳಸುವುದು. ಅದನ್ನು ಮೊದಲು ಗೂಗಲ್ ಮಾಡಬೇಕೇ?" ಎಂದಿದ್ದಾರೆ. ಅಂದರೆ ಮೊದಲು ವಾಕ್ಯ ಬರೆಯುವುದನ್ನು ಕಲಿಯಿರಿ ಎಂದು ಪರೋಕ್ಷವಾಗಿ ಹೇಳಿದಂತಿದೆ. ಈ ಮೂಲಕ ಸಮಂತಾ ಖಾರವಾಗಿ ಉತ್ತರ ಕೊಟ್ಟಿದ್ದಾರೆ.

ಪ್ರವಾಸದಲ್ಲಿ ಸ್ಯಾಮ್ ಬ್ಯುಸಿ!
ಇನ್ನು ಸಮಂತಾ ಸಿನಿಮಾ ಕೆಲಸಗಳ ಜೊತೆಗೆ, ಆಗಾಗ ಪ್ರವಾಸ ಕೈಗೊಳ್ಳುತ್ತಾ ಇರುತ್ತಾರೆ. ಕಳೆದ ಬಾರಿ ಗೋವಾ ಬೀಚ್‌ನಲ್ಲಿ ಬಿಕಿನಿ ತೊಟ್ಟು ಪ್ರತ್ಯಕ್ಷ ಆಗಿದ್ದ ಸಮಂತಾ, ಈಗ ಜಲಪಾತದ ದಂಡೆಯಲ್ಲಿ ನಿಂತು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. . ಸ್ನೇಹಿತರೊಂದಿಗೆ ಸಮಂತಾ ಸದಾ ಪ್ರವಾಸದಲ್ಲಿ ಬ್ಯುಸಿ ಇರುತ್ತಾರೆ. ಇದರ ಜೊತೆಗೆ ಅವರು ಅಭಿನಯದ 'ಶಾಕುಂತಲಂ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಸದ್ಯದಲ್ಲೇ ಬಾಲಿವುಡ್ ಎಂಟ್ರಿ!
ಸಮಂತಾ ತಮ್ಮ ವೃತ್ತಿ ಬದುಕಿನಲ್ಲಿ ಮುಂದೆ ಸಾಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇರುವ ಸಮಂತಾ, ಹಾಲಿವುಡ್ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಇನ್ನೂ ಬಾಲಿವುಡ್‌ಗೂ ನಟಿ ಎಂಟ್ರಿ ಕೊಡ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಿನಿಮಾ ವೃತ್ತಿಯ ಗ್ರಾಫ್ ಮೇಲೆ ಏರುತ್ತಲಿದೆ. ಸದ್ಯ ತಮಿಳಿನ 'ಕಾತು ವಾಕುಲ ರೆಂಡು ಕಾದಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಸಮಂತಾ ವಿಜಯ್ ಸೇತುಪತಿ ಮತ್ತು ನಯನ್ ತಾರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.


Click it and Unblock the Notifications











