ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ...; ಫೋಟೊ ವೈರಲ್

ಸಿನಿಮಾ ತಾರೆಯರು ನಿಂತ್ರು ಕುಂತ್ರು ಸುದ್ದಿ ಆಗುತ್ತದೆ. ಅದರಲ್ಲೂ ಅವರ ಲವ್, ಮದುವೆ, ಡಿವೋರ್ಸ್ ವಿಚಾರಗಳು ಕೊಂಚ ಹೆಚ್ಚೇ ಗಮನ ಸೆಳೆಯುತ್ತದೆ. ಈಗಿನ ಕಾಲದಲ್ಲಿ ಇಬ್ಬರು ಪ್ರೀತಿಸಿ ಹತ್ತಿರವಾಗುವುದು, ಬಳಿಕ ದೂರಾಗುವುದು ಸರ್ವೇಸಾಧಾರಣ ಎನ್ನುವಂತಾಗಿದೆ. ಸೆಲೆಬ್ರೆಟಿಗಳು ವೈಯಕ್ತಿಕ ಜೀವನದಲ್ಲಿ ನಡೆಯುವ ಈ ಘಟನೆಗಳು ಹೆಚ್ಚು ಫೋಕಸ್ ಆಗುತ್ತದೆ.

ತೆಲುಗು ನಟಿ ಸಮಂತಾ ಹಾಗೂ ನಟ ನಾಗಚೈತನ್ಯಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಡಿವೋರ್ಸ್ ಪಡೆದಿದ್ದು ಎನ್ನುವೂ ಹಳೇ ಸುದ್ದಿ. ಡಿವೋರ್ಸ್ ಬಳಿಕ ಚೈತು ಮತ್ತೊಂದು ಮದುವೆ ಕೂಡ ಆಗಿದ್ದಾಯ್ತು. ಈಗ ಸಮಂತಾ ಕೂಡ 2ನೇ ಮದುವೆಗೆ ಸಿದ್ಧವಾಗುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ನಿರ್ದೇಶಕ ರಾಜ್ ನಿಡುಮುರಿ ಜೊತೆ ಸ್ಯಾಮ್ ಬಹಳ ಸಲುಗೆಯಿಂದ ಓಡಾಡುತ್ತಿದ್ದಾರೆ. ಇದೇ ಈಗ ಕುತೂಹಲಕ್ಕೆ ಕಾರಣವಾಗಿದೆ.

Samantha Sparks Second Marriage Rumors with Director Raj Nidumuri Amid Viral US Trip Photos

'ಫ್ಯಾಮಿಲಿಮ್ಯಾನ್' ಹಾಗೂ 'ಸಿಟಾಡೆಲ್' ವೆಬ್‌ ಸೀರಿಸ್‌ಗಳಿಗೆ ರಾಜ್ ಆಕ್ಷನ್ ಕಟ್ ಹೇಳಿದ್ದರು. ಎರಡೂ ಸೀರಿಸ್‌ನಲ್ಲಿ ಸ್ಯಾಮ್ ನಟಿಸಿದ್ದರು. ಇದೇ ವೇಳೆ ಇಬ್ಬರ ನಡುವೆ ಪರಿಚಯ, ಸ್ನೇಹ ಶುರುವಾಗಿತ್ತು. ಇತ್ತೀಚೆಗೆ ಸಮಂತಾ 'ಶುಭಂ' ಎಂಬ ಚಿತ್ರ ನಿರ್ಮಿಸಿದ್ದರು. ಆ ಚಿತ್ರಕ್ಕೆ ರಾಜ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರು. ಹಾಗಾಗಿ ಇಬ್ಬರ ಜರ್ನಿ ಮುಂದುವರೆದಿತ್ತು. ಇದೇ ವೇಳೆ ಇಬ್ಬರೂ ಪ್ರೀತಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಅದಕ್ಕೆ ಇಂಬು ಕೊಡುವಂತೆ ಕೆಲ ಫೋಟೊಗಳನ್ನು ಸ್ಯಾಮ್ ಹಂಚಿಕೊಳ್ಳುತ್ತಿದ್ದಾರೆ.

ಡೇಟಿಂಗ್ ರೂಮರ್ಸ್ ಬಗ್ಗೆ ಇಬ್ಬರೂ ಮಾತನಾಡುತ್ತಿಲ್ಲ. ಹಾಗಂತ ಸ್ಯಾಮ್ ಸುಮ್ಮನಿರುತ್ತಿಲ್ಲ. ಅನುಮಾನ ಹುಟ್ಟುವಂತೆ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಪದೇ ಪದೆ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಈ ಹಿಂದೆ ವಿಮಾನದಲ್ಲಿ ಒಟ್ಟಿಗೆ ಕ್ಲಿಕ್ಕಿಸಿದ ಸೆಲ್ಫಿಯನ್ನ ಹಂಚಿಕೊಂಡಿದ್ದರು. ಇದೀಗ ಯೂಎಸ್ ಪ್ರವಾಸದಲ್ಲಿ ಇಬ್ಬರೂ ಸಲುಗೆಯಿಂದ ಸುತ್ತಾಡುತ್ತಿರುವ ಫೋಟೊ ತೇಲಿಬಿಟ್ಟಿದ್ದಾರೆ. ಇದನ್ನು ನೋಡಿದವರು ಇಬ್ಬರು ಲವ್ ಅಲ್ಇ ಬಿದ್ದಿರೋದು ನಿಜ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಮಂತಾ ಇತ್ತೀಚೆಗೆ ನಿರ್ದೇಶಕ ರಾಜ್ ನಿಡುಮುರಿ ಸೇರಿದಂತೆ ತಮ್ಮ ಆಪ್ತರ ಜೊತೆ ಯುಎಸ್ ಪ್ರವಾಸಕ್ಕೆ ಹೋಗಿದ್ದರು. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. 'ಡೆಟ್ರಾಯಿಟ್' ಎಂದು ಬರೆದು ಲವ್ ಸಿಂಬಲ್ ಎಮೋಜಿ ಹಾಕಿದ್ದಾರೆ. ಅಮೇರಿಕಾದ ಮೆಚಿಗನ್‌ ರಾಜ್ಯದ ನಗರ ಡೆಟ್ರಾಯಿಟ್. ಅಲ್ಲಿಗೆ ಸ್ಯಾಮ್ ಪ್ರವಾಸಕ್ಕೆ ಹೋಗಿದ್ದರು. ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

20 ಫೋಟೊಗಳನ್ನು ಸ್ಯಾಮ್ ಹಾಕಿದ್ದಾರೆ. ಅದರಲ್ಲಿ ರಾಜ್ ನಿಡುಮುರಿ ಜೊತೆ ರಸ್ತೆಯಲ್ಲಿ ಕೈಕೈ ಹಿಡಿದು ಓಡಾಡುತ್ತಿರುವ ಫೋಟೊ ಅಭಿಮಾನಿಗಳ ಗಮನ ಸೆಳೆದಿದೆ. ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಅಕ್ಕಪಕ್ಕ ಕೂತಿರುವುದನ್ನು ನೋಡಬಹುದು. ಇಬ್ಬರ ಬಾಡಿ ಲಾಂಗ್ವೇಜ್ ನೋಡಿ ಪ್ರೀತಿಲಿ ಬಿದ್ದಿರೋದು ಖಚಿತ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ನಿರ್ದೇಶಕ ರಾಜ್‌ ನಿಡುಮುರುಗೆ ಈಗಾಗಲೇ ಮದುವೆ ಆಗಿದೆ. ಆದರೆ ಇಬ್ಬರೂ ದೂರಾಗಿದ್ದಾರೆ ಎನ್ನಲಾಗ್ತಿದೆ. ಇನ್ನು ಸಮಂತಾ ರಾಜ್‌ ಜೊತೆಗಿನ ಫೋಟೊ ಹಂಚಿಕೊಂಡ ಬೆನ್ನಲ್ಲೇ ಆತನ ಮಾಜಿ ಪತ್ನಿ ಶ್ಯಾಮಲಾ ಡೇ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗುತ್ತಿದೆ. ಮಯೊಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಮ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದರು.

ನಟಿ ಶೋಬಿತಾ ದುಲಿಪಾಲ ಜೊತೆ ಚೈತು 2ನೇ ಮದುವೆ ಆಗಿದ್ದಾರೆ. ತಮ್ಮ ಡಿವೋರ್ಸ್ ಬಗ್ಗೆ ಚೈ-ಸ್ಯಾಮ್ ಇಬ್ಬರೂ ಪರೋಕ್ಷವಾಗಿ ಮಾತನಾಡಿದ್ದರು. ಸಮಂತಾ ಒಂದಷ್ಟು ಆರೋಪ ಸಹ ಮಾಡಿದ್ದರು. ಬಳಿಕ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.

More from Filmibeat

English summary
Telugu actress Samantha Ruth Prabhu is rumored to be in love with director Raj Nidumuri after sharing cozy photos from a US tour. Fans speculate a second marriage might be on the cards. Here's what we know;
Read more about: samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X