ನಡೆಯಲಿಲ್ಲ ಸಮಂತಾ ಸ್ಟಾರ್‌ಡಂ ಮ್ಯಾಜಿಕ್; 65 ಕೋಟಿ ಬಜೆಟ್‌ನ ಶಾಕುಂತಲಂ 3 ದಿನದಲ್ಲಿ 10 ಕೋಟಿನೂ ದಾಟಲಿಲ್ಲ!
ಕಳೆದ ಶುಕ್ರವಾರ ( ಏಪ್ರಿಲ್ 14 ) ಸಮಂತಾ ರುತ್ ಪ್ರಭು ಅಭಿನಯದ ಬಹು ನಿರೀಕ್ಷಿತ ಚಿತ್ರ ಶಾಕುಂತಲಂ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು. ಈ ಹಿಂದೆ ಹಲವಾರು ಬಿಡುಗಡೆ ದಿನಾಂಕಗಳನ್ನು ಘೋಷಿಸಿ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಶಾಕುಂತಲಂ ಪ್ರೇಕ್ಷಕರಿಗೆ ದರ್ಶನವನ್ನು ನೀಡಿತ್ತು.
ಶಾಕುಂತಲಂ ಕವಿ ಕಾಳಿದಾಸ ಬರೆದಿದ್ದ ಅಭಿಜ್ಞಾನ ಶಾಕುಂತಲಂ ಕೃತಿಯ ಮೇಲೆ ಆಧಾರಿತ ಚಿತ್ರವಾಗಿದ್ದು, ದುಷ್ಯಂತ ಮಹಾರಾಜ ಹಾಗೂ ಶಾಕುಂತಲಂ ನಡುವಿನ ಪ್ರೇಮ ಕಥನವನ್ನೇ ಈ ಚಿತ್ರವೂ ಬಿಚ್ಚಿಟ್ಟಿತ್ತು. ಹೌದು, ನಮ್ಮ ಕನ್ನಡದ ಕವಿರತ್ನ ಕಾಳಿದಾಸ ಚಿತ್ರದ ಒಂದು ಭಾಗದಲ್ಲಿ ಬರುವ ಶಾಕುಂತಲ ಪ್ರೇಮಕಥೆಯನ್ನೇ ಇಲ್ಲಿ ಸಂಪೂರ್ಣ ಚಿತ್ರವನ್ನಾಗಿ ತೆರೆ ಮೇಲೆ ತರಲಾಗಿದೆ.

ತೆಲುಗಿನಲ್ಲಿಯೂ ಸಹ ಈ ಕಥೆ 1996ರಲ್ಲಿಯೇ ಸಿನಿಮಾ ರೂಪವನ್ನು ಪಡೆದುಕೊಂಡಿತ್ತು. ಕಮಲಾಕರ ಕಾಮೇಶ್ವರ ರಾವ್ 'ಶಕುಂತಲ' ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರವನ್ನು ನಿರ್ದೇಶಿಸಿದ್ದರು. ಹೀಗೆ ಈಗಾಗಲೇ ನೋಡಿರುವ ಕಥೆಯನ್ನೇ ಮತ್ತೊಮ್ಮೆ ತೆಲುಗು ಸಿನಿ ರಸಿಕರಿಗೆ ತೋರಿಸುವ ಯತ್ನವನ್ನು ನಿರ್ಮಾಪಕ ದಿಲ್ ರಾಜು ಹಾಗೂ ನಿರ್ದೇಶಕ ಗುಣಶೇಖರ್ ಮಾಡಿದ್ದಾರೆ.+
ಹೀಗೆ ಈಗಾಗಲೇ ಇರುವ ಸಿನಿಮಾ ಆಗಿರುವ ಕಥೆಯನ್ನು ಮತ್ತೊಮ್ಮೆ ಸಿನಿಮಾ ಮಾಡುವ ಸಾಹಸಕ್ಕೆ ಚಿತ್ರತಂಡ ಕೈಹಾಕಿದಾಗಲೇ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿಲ್ಲುವುದು ಅನುಮಾನ ಎಂದು ಹಲವಾರು ಸಿನಿ ರಸಿಕರು ವ್ಯಕ್ತಪಡಿಸಿದ್ದರು. ಆದರೆ ಈಗಿನ ಟ್ರೆಂಡ್‌ನಲ್ಲಿ ಪೌರಾಣಿಕ ಚಿತ್ರಗಳತ್ತ ಸಿನಿ ರಸಿಕರ ಒಲವು ಹೆಚ್ಚಿದ್ದು, ವಿಎಫ್ಎಕ್ಸ್ ಹಾಗೂ ರಿಚ್ ಮೇಕಿಂಗ್‌ನ ಸಹಾಯದಿಂದ ಚಿತ್ರ ಅದ್ಭುತವಾಗಿ ಮೂಡಿ ಬರಲಿದ್ದು ಗೆಲ್ಲಲಿದೆ ಎಂಬ ವಿಶ್ವಾಸ ಹಲವರಲ್ಲಿತ್ತು.
ಇನ್ನು ಈ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಶಾಕುಂತಲಂ ವಿಫಲವಾಗಿದೆ. ಕೇವಲ ಗೆಲುವಿನ ವಿಚಾರದಲ್ಲಿ ಮಾತ್ರವಲ್ಲದೇ ಮೇಕಿಂಗ್, ಕಥೆ ಹೇಳುವ ವಿಚಾರದಲ್ಲಿ ಹಾಗೂ ಪಾತ್ರಗಳ ಆಯ್ಕೆಯ ವಿಚಾರದಲ್ಲಿಯೂ ಶಾಕುಂತಲಂ ಚಿತ್ರತಂಡ ಮಕಾಡೆ ಮಲಗಿದೆ. 65 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡಲಾಗದೇ ವಿಲವಿಲ ಒದ್ದಾಡುತ್ತಿದೆ.

ಹೌದು, ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಶಾಕುಂತಲಂ ಚಿತ್ರ ಕೇವಲ 4.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡುವ ಮೂಲಕ ಕಳಪೆ ಓಪನಿಂಗ್ ಪಡೆದುಕೊಂಡಿತು. ಚಿತ್ರ ಬಿಡುಗಡೆಯಾಗುವ ಮುನ್ನ ಸಮಂತಾ ಸ್ಟಾರ್‌ಡಂ, ಕ್ರೇಜ್ ಎಂದು ಹರಿದಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೂ, ಈ ಕಲೆಕ್ಷನ್‌ಗೂ ಸಂಬಂಧವೇ ಇರಲಿಲ್ಲ.
ಹೀಗೆ ಮೊದಲ ದಿನ ಕೇವಲ 70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ ಶಾಕುಂತಲಂ ಚಿತ್ರ ಸಿನಿ ರಸಿಕರಿಂದ ತೀವ್ರ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡ ಕಾರಣ ಎರಡನೇ ಹಾಗೂ ಮೂರನೇ ದಿನ ಇನ್ನೂ ಕಳಪೆ ಗಳಿಕೆ ಮಾಡಿದೆ. ಭಾನುವಾರವೆಂಬ ಅನುಕೂಲ ಸಹ ಶಾಕುಂತಲಂಗೆ ಲಭಿಸಿಲ್ಲ. ಚಿತ್ರ ಪ್ರೇಮಿಗಳು ಚಿತ್ರದತ್ತ ಒಲವನ್ನೇ ತೋರಿಲ್ಲ. ಹೀಗಾಗಿ ಎರಡನೇ ದಿನ ಚಿತ್ರ 1.45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದರೆ, ಮೂರನೇ ದಿನ 1.30 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಈ ಮೂಲಕ 3 ದಿನಗಳಲ್ಲಿ ಚಿತ್ರ 7.45 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದು, 3.60 ಕೋಟಿ ನೆಟ್ ಕಲೆಕ್ಷನ್ ಇದಾಗಿದೆ. ಇನ್ನು ಶಾಕುಂತಲಂ ಚಿತ್ರ 40 ಕೋಟಿ ರೂಪಾಯಿಗಳನ್ನು ವಿವಿಧ ಹಕ್ಕುಗಳ ಮೂಲಕ ಬಿಡುಗಡೆಗೂ ಮುನ್ನ ಸಂಪಾದಿಸಿದ್ದು, ಲಾಭ ಗಳಿಸಬೇಕೆಂದರೆ 19 ಕೋಟಿ ನೆಟ್ ಕಲೆಕ್ಷನ್ ಅನ್ನು ಮಾಡಲೇಬೇಕಿದೆ. ಸದ್ಯ ಮೂರು ದಿನಗಳಲ್ಲಿ 3.60 ಕೋಟಿ ನೆಟ್ ಕಲೆಕ್ಷನ್ ಮಾಡಿರುವ ಶಾಕುಂತಲಂ ಸೇಫ್ ಆಗಲು ಇನ್ನೂ ಸಹ 15.40 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.
ಮೊದಲ ಭಾನುವಾರವೇ ಕೇವಲ 65 ಲಕ್ಷ ನೆಟ್ ಕಲೆಕ್ಷನ್ ಮಾಡಿರುವ ಶಾಕುಂತಲಂ ಮುಂದಿನ ದಿನಗಳಲ್ಲಿ ಇದಕ್ಕಿಂತ ಕೆಟ್ಟ ಕಲೆಕ್ಷನ್ ಮಾಡುವುದು ಖಚಿತವಾಗಿದ್ದು, ಚಿತ್ರವನ್ನು ನಿರ್ಮಿಸಿರುವ ಹಾಗೂ ಹಂಚಿಕೆ ಮಾಡಿರುವ ದಿಲ್ ರಾಜು ದೊಡ್ಡ ನಷ್ಟ ಅನುಭವಿಸುವುದು ಮಾತ್ರ ಫಿಕ್ಸ್.


Click it and Unblock the Notifications











