ನಾಲ್ಕನೇ ದಿನ ಕೇವಲ 60 ಲಕ್ಷ ಕಲೆಕ್ಷನ್ ಮಾಡಿದ ಶಾಕುಂತಲಂ; ಚಿತ್ರದ ಒಟ್ಟು ಗಳಿಕೆ ಎಷ್ಟು?

ನಟಿ ಸಮಂತ ರುತ್ ಪ್ರಭು ನಟನೆಯ ಬಹು ನಿರೀಕ್ಷಿತ ಚಿತ್ರ ಶಾಕುಂತಲಂ ಕಳೆದ ಶುಕ್ರವಾರ ( ಏಪ್ರಿಲ್ 14 ) ಬಿಡುಗಡೆಯಾಗಿದೆ. ಕಾಳಿದಾಸನ ಅಭಿಜ್ಞಾನ ಶಾಕುಂತಲ ಕೃತಿಯ ಆಧಾರಿತ ಪೌರಣಿಕ ಚಿತ್ರವಾಗಿರುವ ಶಾಕುಂತಲಂ ಹುಟ್ಟುಹಾಕಿದ್ದ ನಿರೀಕ್ಷೆಗೆ ತದ್ವಿರುದ್ಧವಾದಂತಹ ಫಲಿತಾಂಶವನ್ನು ಪಡೆದುಕೊಂಡಿದೆ.

ಮೇಕಿಂಗ್ ಹಾಗೂ ವಿಎಫ್ಎಕ್ಸ್ ವಿಚಾರದಲ್ಲಿ ಚಿತ್ರ ಮತ್ತೊಂದು ಹಂತದಲ್ಲಿ ಇರಲಿದೆ ಎಂಬ ಭರವಸೆ ಹುಸಿಯಾಗಿದ್ದು, ಚಿತ್ರ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದೆ. ತ್ರೀಡಿಯಲ್ಲಿ ಬಂದರೂ ಸಹ ಚಿತ್ರ ಗೆಲ್ಲಲಾಗದೇ ಸೋಲು ಕಂಡಿದ್ದು, ಕೇವಲ ವಿಮರ್ಶೆಯ ವಿಚಾರದಲ್ಲಿ ಮಾತ್ರವಲ್ಲದೇ ಬಾಕ್ಸ್ ಆಫೀಸ್ ವಿಚಾರದಲ್ಲಿಯೂ ಸಹ ಶಾಕುಂತಲ ನೆಲ ಕಚ್ಚಿದೆ.

Samantha starrer Shaakuntalam collects 8 crores at box office in 4 days and turned as utterflop

ಹೌದು, ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಶಾಕುಂತಲಂ ಚಿತ್ರ ಕೇವಲ 4.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡುವ ಮೂಲಕ ಕಳಪೆ ಓಪನಿಂಗ್ ಪಡೆದುಕೊಂಡಿತು. ಚಿತ್ರ ಬಿಡುಗಡೆಯಾಗುವ ಮುನ್ನ ಸಮಂತಾ ಸ್ಟಾರ್‌ಡಂ, ಕ್ರೇಜ್ ಎಂದು ಹರಿದಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೂ, ಈ ಕಲೆಕ್ಷನ್‌ಗೂ ಸಂಬಂಧವೇ ಇರಲಿಲ್ಲ.

ಹೀಗೆ ಮೊದಲ ದಿನ ಕೇವಲ 4.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ ಶಾಕುಂತಲಂ ಚಿತ್ರ ಸಿನಿ ರಸಿಕರಿಂದ ತೀವ್ರ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡ ಕಾರಣ ಎರಡನೇ ಹಾಗೂ ಮೂರನೇ ದಿನ ಇನ್ನೂ ಕಳಪೆ ಗಳಿಕೆ ಮಾಡಿತ್ತು. ಭಾನುವಾರವೆಂಬ ಅನುಕೂಲ ಸಹ ಶಾಕುಂತಲಂಗೆ ಲಭಿಸಲಿಲ್ಲ. ಚಿತ್ರ ಪ್ರೇಮಿಗಳು ಚಿತ್ರದತ್ತ ಒಲವನ್ನೇ ತೋರಿಲ್ಲ. ಹೀಗಾಗಿ ಎರಡನೇ ದಿನ ಚಿತ್ರ 1.45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದರೆ, ಮೂರನೇ ದಿನ 1.30 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತು ಹಾಗೂ ನಾಲ್ಕನೇ ದಿನ ಕೇವಲ 60 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.

ಈ ಮೂಲಕ ಶಾಕುಂತಲಂ ಮೊದಲ 4 ದಿನಗಳಲ್ಲಿ ಕೇವಲ 8.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಸದ್ಯ ನಾಲ್ಕು ದಿನಗಳಲ್ಲಿ ಚಿತ್ರದ ನೆಟ್ ಕಲೆಕ್ಷನ್ ಕೇವಲ 3.88 ಕೋಟಿ ರೂಪಾಯಿಗಳಾಗಿದೆ. ಚಿತ್ರ ಲಾಭ ಗಳಿಸಬೇಕೆಂದರೆ 19 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಲೇ ಬೇಕಿದ್ದು, ಸದ್ಯ ಮಾಡಿರುವ ಕಲೆಕ್ಷನ್ ಪ್ರಕಾರ ಇನ್ನೂ 15.12 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಬೇಕಿದೆ.

Samantha starrer Shaakuntalam collects 8 crores at box office in 4 days and turned as utterflop

ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ತೀವ್ರ ಇಳಿಕೆ ಕಾಣುತ್ತಿದ್ದು, ಇನ್ನುಳಿದಷ್ಟು ಕಲೆಕ್ಷನ್ ಮಾಡುವುದು ಅನುಮಾನವೇ ಸರಿ. ಇನ್ನು ಚಿತ್ರದ ಸೋಲಿಗೆ ನೀರಸ ಕಥೆ, ಕಳಪೆ ವಿಎಫ್ಎಕ್ಸ್, ಕಳಪೆ ಮೇಕಿಂಗ್ ನೇರಹೊಣೆ ಎಂದು ಹೇಳಬಹುದಾಗಿದ್ದು, ಚಿತ್ರದ ಪಾತ್ರಗಳಿಗೆ ಆರಿಸಲಾಗಿರುವ ಕಲಾವಿದರ ಆಯ್ಕೆ ಸಹ ಕೈಕೊಟ್ಟಿದೆ. ಪೌರಾಣಿಕ ಸಿನಿಮಾಗೆ ಇರಬೇಕಾದ ಯಾವುದೇ ಗುಣಮಟ್ಟವನ್ನೂ ಸಹ ಶಾಕುಂತಲಂ ಮುಟ್ಟುವಲ್ಲಿ ಯಶಸ್ವಿಯಾಗದೇ ಇದ್ದು, ಚಿತ್ರ ನೋಡಿಬಂದ ಸಿನಿ ರಸಿಕರು ನಾನು ವೀಕ್ಷಿಸಿದ ಕಳಪೆ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರ ಎಲ್ಲವನ್ನೂ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಚಿತ್ರ ಈ ಮಟ್ಟಿಗಿನ ಸೋಲನ್ನು ಕಂಡಿರುವುದು ಸಮಂತಾ ಸ್ಟಾರ್‌ಡಂ ಕೆಲಸ ಮಾಡುವುದಿಲ್ಲ ಎಂಬುದನ್ನು ತಿಳಿಸಿಕೊಟ್ಟಿದೆ. ಸಮಂತಾ ಲೀಡ್ ರೋಲ್‌ನಲ್ಲಿ ನಟಿಸಿದ್ದ ಹಿಂದಿನ ಚಿತ್ರ ಯಶೋಧ ಸಹ ಇದೇ ರೀತಿ ನೆಲಕಚ್ಚಿತ್ತು.

More from Filmibeat

English summary
Samantha starrer Shaakuntalam collects 8 crores at box office in 4 days and turned as utterflop. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X