ಸಮಂತಾ 'ಶಾಕುಂತಲಂ' ನಿಂತು ಹೋಯ್ತಾ? ತಡವಾಗಲು ಕಾರಣ ಇದೆ!

ಸಮಂತಾ ಅಭಿನಯದ ಪೌರಾಣಿಕ 'ಶಾಕುಂತಲಂ' ಸಿನಿಮಾ ಬಹಳ ಹಿಂದೆಯೇ ಸುದ್ದಿಯಲ್ಲಿ ಇತ್ತು. ಇದರಲ್ಲಿ ಸ್ಟಾರ್ ನಾಯಕಿ ಸಮಂತಾ ಶಕುಂತಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಅದ್ಭುತವಾದ ಸಿನಿಮಾ ಆಗಲಿದೆ ಎನ್ನುವ ಸುಳಿವು ಕೊಟ್ಟಿತ್ತು ಚಿತ್ರದ ಫಸ್ಟ್ ಲುಕ್. ಆದರೆ ಈಗ ಏನಾಗುತ್ತಿದೆ ಎನ್ನುವ ಬಗ್ಗೆ ಶಂಕೆ ಗೊಂದಲುಗಳು ಮೂಡುತ್ತಿವೆ.

ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದ ಪೋಸ್ಟರ್‌ಗಳು ಈಗಾಗಲೇ ಗಮನ ಸೆಳೆದಿವೆ. ಶಾಕುಂತಲೇ ರೂಪದಲ್ಲಿರುವ ನಟಿ ಸಮಂತಾಳನ್ನು ಜನ ಮೆಚ್ಚಿ ಕೊಂಡಾಡಿದ್ದರು. ಚಿತ್ರತಂಡ ಕೂಡ ಸಿನಿಮಾ ಬಹುತೇಕ ಮುಗಿದು ಬಿಟ್ಟಿದೆ, ಇನ್ನೇನು ರಿಲೀಸ್ ದಿನಾಂಕ ಪ್ರಕಟ ಆಗುತ್ತದೆ ಎನ್ನಲಾಗಿತ್ತು.

ಸಿನಿಮಾ ಮುಗಿದಿದ್ದರೆ ಇಷ್ಟು ಹೊತ್ತಿಗಾಗಲೇ ಚಿತ್ರದ ಮತ್ತಷ್ಟು ತುಣುಕುಗಳನ್ನು ರಿಲೀಸ್ ಮಾಡಬೆಕಿತ್ತು. ಒಂದು ವೇಳೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿದ್ದರೂ, ಸಾಮಾನ್ಯವಾಗಿ ನಿರ್ಮಾಪಕರು ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಾರೆ. ಆದರೆ ಇನ್ನು ಕೂಡ ಸಿನಿಮಾದ ಕೆಲಸಗಳ ಬಾಕಿ ಇರುವ ಕಾರಣ ನಿರ್ಮಾಪಕರು ಯಾವುದೇ ರೀತಿಯ ಪ್ರಚಾರ ಆರಂಭಿಸಿಲ್ಲ.

Samantha Starrer Shaakuntalam Gets Late Because Of This Reason

ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವುದರಿಂದ ಹಿಡಿದು, ಟೀಸರ್‌ಗಳು ಮತ್ತು ಲಿರಿಕಲ್ ವೀಡಿಯೊಗಳು ವಿಶೇಷವಾಗಿ ಚಿತ್ರದ ಸುದ್ಧಿಗೋಷ್ಟಿಯನ್ನೂ ಕೂಡ ಮಾಡಿಲ್ಲ. ಆದರೆ 'ಶಾಕುಂತಲಂ' ಚಿತ್ರದ ಶೂಟಿಂಗ್ ಒಂದು ವರ್ಷ ಹಿಂದೆಯೇ ಮುಗಿದೆ ಎನ್ನಲಾಗಿತ್ತು. ಆದರೂ ರಿಲೀಸ್ ಬಗ್ಗೆ ಮಾತ್ರ ಯಾವುದೇ ಚಕಾರ ಇಲ್ಲ.

ಇನ್ನು ನಿರ್ದೇಶಕ ಗುಣಶೇಖರ್ ಚಿತ್ರದ ಅಂತಿಮ ಕಟ್‌ಗೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಆದರೆ ಸಹ ನಿರ್ಮಾಪಕ ದಿಲ್ ರಾಜು ಚಿತ್ರದ ಔಟ್‌ಪುಟ್‌ನಿಂದ ಸಂತೋಷವಾಗಿಲ್ಲ ಎನ್ನುವ ಮತು ಕೇಳಿ ಬಂದಿದೆ. ಇದರಿಂದ ಸಮಂತಾ ಅತೃಪ್ತರಾಗಿದ್ದಾರೆ ಮತ್ತು ಆದ್ದರಿಂದ ಅವರು ಚಿತ್ರದಿಂದ ದೂರವಿದ್ದಾರಂತೆ. ಹಾಗಾಗಿ ಸಿನಿಮಾ ಅಲ್ಲಿಗೆ ನಿಂತು ಬಿಟ್ಟಿದೆ ಎನ್ನಲಾಗುತ್ತಿದೆ.

ವದಂತಿಗಳು ಏನೇ ಇರಲಿ, ಆರು ತಿಂಗಳ ಹಿಂದೆ ಕೇವಲ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಚಿತ್ರ ಶೀಘ್ರದಲ್ಲೇ ಥಿಯೇಟರ್‌ಗಳಿಗೆ ಬರಲಿದೆ ಎಂದು ಸ್ಟಾರ್ ನಟಿಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

More from Filmibeat

English summary
Samantha Starrer Shaakuntalam Gets Late Because Of This, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X