Samantha :ಸಮಂತಾ ಅಭಿನಯದ 'ಯಶೋಧ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!
ತೆಲುಗು ನಟಿ ಸಮಂತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನ ಕಡಿದುಕೊಂಡ ಬಳಿಕ ಸಮಂತಾ ಸಿನಿಮಾರಂಗದಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾಗಳ ಜೊತೆಗೆ ಸಮಂತಾ ಬಾಲಿವುಡ್ ಎಂಟ್ರಿಗೂ ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಬಳಿಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಂತಾಗೆ ಬೇಡಿಕೆಯೂ ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದ ಹಾಡು ಸಮಂತಾ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ.
ಸದ್ಯ ಸಮಂತಾ ತಮಿಳು ಮತ್ತು ತೆಲುಗಿನ ಒಂದೊಂದು ಸಿನಿಮಾವನ್ನು ಮುಗಿಸಿ ಬಿಡುಗಡೆ ಕಾಯುತ್ತಿದ್ದಾರೆ. ಈ ನಡುವೆ ಮತ್ತೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಸಮಂತಾ ಒಪ್ಪಿಕೊಂಡಿದ್ದರು. ಈ ಸಿನಿಮಾಗೆ 'ಯಶೋದಾ' ಎಂದು ಟೈಟಲ್ ಇಡಲಾಗಿತ್ತು.

'ಯಶೋಧ' ಚಿತ್ರ ಆಗಸ್ಟ್ 12ಕ್ಕೆ ರಿಲೀಸ್
ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಸಜ್ಜಾಗಿರು 'ಯಶೋಧ' ಚಿತ್ರ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಅಭಿನಯದ 'ಯಶೋಧ' ಚಿತ್ರ ಆಗಸ್ಟ್ 12ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ.'ಯಶೋಧ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕಂಪ್ಲೀಟ್ ಅಗಿದ್ದು, ಒಂದಷ್ಟು ಸಣ್ಣ ಪುಟ್ಟ ಕೆಲಸಗಳಷ್ಟೆ ಬಾಕಿ ಉಳಿದುಕೊಂಡಿದೆ. ಅವೆಲ್ಲವನ್ನೂ ಆಗಸ್ಟ್ 12ರ ಒಳಗಾಗಿ ಚಿತ್ರತಂಡ ಮುಗಿಸಿಕೊಳ್ಳಲಿದ್ದು, ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎಂದು ಟಾಲಿವುಡ್ ಅಂಗಳದಿಂದ ಮಾತುಗಳು ಕೇಳಿ ಬರುತ್ತಿದೆ.

ಡಿ.06 ರಿಂದ ಶುರುವಾಗಿತ್ತು ಸಿನಿಮಾ ಶೂಟಿಂಗ್
ಸಮಂತಾ ವಿಚ್ಛೇದನದ ನಂತರ ಒಪ್ಪಿಕೊಂಡಿರುವ ಮೊದಲ ಸಿನಿಮಾ 'ಯಶೋದಾ' . 2021 ಡಿ.06ರಿಂದ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಹೈದರಾಬಾದ್‌ನಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಮೊದಲ ದಿನದ ಶೂಟಿಂಗ್ ಶುರುವಾಗಿದೆ. ಹರಿ ಹಾಗೂ ಹರೀಶ್ ಸಿನಿಮಾ ನಿರ್ದೇಶನ ಮಾಡಿದ್ದು, ಶಿವಲೆಂಕ ಕೃಷ್ಣ ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ಆದಿತ್ಯ 369', 'ಸಮ್ಮೋಹನಮ್' ಸಿನಿಮಾ ನಿರ್ಮಿಸಿದ್ದ ಕೃಷ್ಣ ಪ್ರಸಾದ್ ಈ ಸಿನಿಮಾಗೂ ಬಂಡವಾಳ ಹೂಡಿದ್ದಾರೆ.

ಹಾಲಿವುಡ್ ಸ್ಟಂಟ್ ಮಾಸ್ಟರ್ ನಿರ್ದೇಶನ
'ಯಶೋದಾ' ಸಿನಿಮಾದ ಮತ್ತೊಂದು ಭರ್ಜರಿ ಸುದ್ದಿಯೆಂದರೆ ಚಿತ್ರದಲ್ಲಿ ಅದ್ಭುತ ಆಕ್ಷನ್ ದೃಶ್ಯಗಳಿವೆಯಂತೆ. ಈ ಆಕ್ಷನ್ ಸೀಕ್ವೆನ್ಸ್ ಅನ್ನು ಹಾಲಿವುಡ್‌ನ ಖ್ಯಾತ ಸ್ಟಂಟ್ ಮಾಸ್ಟರ್ ನಿರ್ದೇಶನ ಮಾಡಿದ್ದಾರೆ. ಯಾನಿಕ್ ಬೆನ್ ಅನ್ನೋ ಸಾಹಸ ನಿರ್ದೇಶಕ ಸಮಂತಾಗೆ ಈ ಸಿನಿಮಾದಲ್ಲಿ ಆಕ್ಷನ್ ಡೈರೆಕ್ಟ್ ಮಾಡಿದ್ದಾರೆ. ಯಾನಿಕ್ ಬೆನ್ ಹಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಾದ, 'ಟ್ರಾನ್ಸ್ ಪೋರ್ಟರ್ 3', 'ಇನ್ಸೆಪ್ಷನ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಭಾರತದ ಸಿನಿಮಾಗಳಾದ 'ರಾಯಿಸ್', 'ಟೈಗರ್ ಜಿಂದಾ ಹೈ', 'ಅತ್ತಾರಿಂಟಿಕಿ ದಾರೇದಿ', 'ನೆನೊಕ್ಕಡಿನೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ.

ನಾಯಕನಾಗಿ ಮಲಯಾಳಂ ನಟ ಉನ್ನಿ ಮುಕುಂದನ್
ವಿಶೇಷ ಎಂದರೆ ಸಮಂತಾ ನಟನೆಯ ಬ್ಲಾಕ್ ಬಸ್ಟರ್ ವೆಬ್ ಸರಣಿಯಾದ 'ದಿ ಫ್ಯಾಮಿಲಿ-2' ನಲ್ಲಿ ಯಾನಿಕ್ ಬೆನ್ ಕೆಲಸ ಮಾಡಿದ್ದರು. 'ಯಶೋಧ' ಸಿನಿಮಾ ಮೂಲಕ ಸಮಂತಾ ಸಿನಿಮಾಗೆ ಮತ್ತೆ ಎಂಟ್ರಿ ಕೊಟ್ಟು ಎರಡನೇ ಬಾರಿ ಕೆಲಸ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಸಮಂತಾ ಜೊತೆ ನಾಯಕನಾಗಿ ಮಲಯಾಳಂ ನಟ ಉನ್ನಿ ಮುಕುಂದನ್ ನಟಿಸುತ್ತಿದ್ದಾರೆ. ಇನ್ನು ಮತ್ತೋರ್ವ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ತಯರಾಗಿದ್ದು, ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗಲಿದೆ.


Click it and Unblock the Notifications











