ಏನಿದು ಸಮಂತಾ ಡೆಡ್ ಹ್ಯಾಂಗ್ ಚಾಲೆಂಜ್? ಗೆದ್ರಾ.. ಸೋತ್ರಾ?
ನಟಿ ಸಮಂತಾ ಮಯೋಸೈಟಿಸ್ ಸಮಸ್ಯೆ ಎದುರಿಸಿದ್ದರು. ಅದರಿಂದ ಸಂಪೂರ್ಣವಾಗಿ ಹೊರಬಂದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ ಮಯೋಸೈಟಿಸ್ ಸಮಸ್ಯೆ ಬಗ್ಗೆ ಗೊತ್ತಾಗುತ್ತಿದ್ದಂತೆ ಸಿಕ್ಕಾಪಟ್ಟೆ ಫಿಟ್‌ನೆಸ್ ಫ್ರೀಕ್ ಆಗಿಬಿಟ್ಟರು. ಮೆಡಿಕಲ್ ಟ್ರೀಟ್‌ಮೆಂಟ್ ಜೊತೆಗೆ ದೇಹ ದಂಡಿಸಿ ಮಯೋಸೈಟಿಸ್ ವಿರುದ್ಧ ಹೋರಾಡುತ್ತಿದ್ದಾರೆ.
ಮೊದಲಿನಿಂದಲೂ ಸಮಂತಾ ಫಿಟ್‌ನೆಸ್ ಬಹಳ ಗಮನ ಹರಿಸುತ್ತಾ ಬರ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇನ್ನು ಫಿಟ್‌ನೆಸ್, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ನುರಿತ ತಜ್ಞರ ಜೊತೆ ಪಾಡ್‌ಕಾಸ್ಟ್ ಮೂಲಕ ಮಾಹಿತಿ ಹಂಚಿಕೊಳ್ಳುವ ಪ್ರಯತ್ನವನ್ನು ಸಹ ಮಾಡಿದ್ದರು. ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಈ ಬಗ್ಗೆ ಟೀಕೆಗಳು ಎದುರಾಗಿದ್ದವು.

ಸಮಂತಾ ಗಂಟೆಗಳ ಕಾಲ ಜಿಮ್‌ನಲ್ಲಿ ಕರಸತ್ತು ಮಾಡುತ್ತಾರೆ. ಅಭಿಮಾನಿಗಳನ್ನು ಕೂಡ ಈ ಮೂಲಕ ಫಿಟ್‌ನೆಟ್ ಕಾಯ್ದುಕೊಳ್ಳುವಂತೆ ಹುರಿದುಂಬಿಸುತ್ತಾರೆ. ಇತ್ತೀಚೆಗೆ ಜಿಮ್‌ನಲ್ಲಿ ಕ್ರೇಜಿ ಚಾಲೆಂಜ್‌ನಲ್ಲಿ ಸ್ಯಾಮ್ ಭಾಗಿ ಆಗಿದ್ದಾರೆ. 90 ಸೆಕೆಂಡ್‌ಗಳ ಕಾಲ ಕಬ್ಬಿಣದ ಸರಳನ್ನು ಹಿಡಿದು ಜೋತು ಬೀಳುವ ಚಾಲೆಂಜ್ ಇದು. ಸ್ಯಾಮ್ ಜೊತೆ ಮತ್ತಿಬ್ಬರು ಈ ಚಾಲೆಂಜ್ ಸ್ವೀಕರಿಸಿ ಕಂಪ್ಲೀಟ್ ಮಾಡಿದ್ದಾರೆ.
"ನೀವು ಹೇಗೆ ಕಾಣುತ್ತೀರಿ ಎನ್ನುವುದಲ್ಲ.. ನಿಮ್ಮ ಜೆನೆಟಿಕ್ಸ್ ಅಲ್ಲ. ಹುರಿಗಟ್ಟಿದ ಸ್ನಾಯುಗಳು, ಸೆಲ್ಫಿಗಳಲ್ಲ. ಯಾರೂ ನೋಡದಿದ್ದಾಗ ನೀವು ಎಷ್ಟು ಬಲಶಾಲಿಯಾಗಿದ್ದೀರಿ ಎನ್ನುವುದು ಮುಖ್ಯ" ಎಂದು ಬರೆದು ಸ್ಯಾಮ್ ವೀಡಿಯೋ ಹಂಚಿಕೊಂಡಿದ್ದಾರೆ. ಬಹಳ ಸಳಿಸಾಗಿ ಸ್ಯಾಮ್ 90 ಸೆಕೆಂಡ್‌ಗಳ ಡೆಡ್ ಹ್ಯಾಂಗ್ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಪೋಸ್ಟ್ ನೋಡಿ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಮಾತ್ರ ಯಾಕೆ ಮೇಡಂ ಇಷ್ಟು ಸಣ್ಣ ಆಗಿಬಿಟ್ರಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಸಮಂತಾ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ. ಇತ್ತೀಚೆಗೆ ವೆಬ್ ಸೀರಿಸ್‌ಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಸ್ಯಾಮ್ ಮನಸ್ಸು ಮಾಡಿದ್ದರು. ಆದರೆ ಅಷ್ಟರಲ್ಲೇ ಮಯೋಸೈಟಿಸ್ ಸಮಸ್ಯೆ ವಿಚಾರ ಗೊತ್ತಾಗಿ ಬಿಡುವು ಪಡೆದಿದ್ದರು. 'ಖುಷಿ' ಸ್ಯಾಮ್ ನಾಯಕಿಯಾಗಿ ನಟಿಸಿದ ಕೊನೆಯ ಸಿನಿಮಾ.
'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಕೂಡ ಸಮಂತಾ ಮಿಂಚಿದ್ದರು. ಇತ್ತೀಚೆಗೆ ನಿರ್ಮಾಪಕಿಯಾಗಿ ಸ್ಯಾಮ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. 'ಶುಭಂ' ಎಂಬ ಸಿನಿಮಾ ನಿರ್ಮಿಸಿ ಅತಿಥಿ ಪಾತ್ರದಲ್ಲಿ ನಟಿ ನಟಿಸಿದ್ದರು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಆದರೆ ಮತ್ತಷ್ಟು ಸಿನಿಮಾ ನಿರ್ಮಿಸುವ ನಂಬಿಕೆ ತಂದಿದೆ. ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಒಂದು ಸಿನಿಮಾ ನಿರ್ಮಿಸಿ ನಟಿಸಲು ಸಮಂತಾ ಮುಂದಾಗಿದ್ದಾರೆ ಎನ್ನಲಾಗ್ತಿದೆ.
'ಫ್ಯಾಮಿಲಿಮ್ಯಾನ್- 2' ಹಾಗೂ 'ಸಿಟಾಡೆಲ್' ಬಳಿಕ 'ರಕ್ತ್ ಬ್ರಹ್ಮಾಂಡ್' ಎಂಬ ವೆಬ್ ಸೀರಿಸ್‌ನಲ್ಲಿ ಸಮಂತಾ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಇನ್ನು ನಿರ್ದೇಶಕ ರಾಜ್ ನಿಡುಮುರು ಜೊತೆ ಸಮಂತಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಕೂಡ ಇದೆ. ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಈಗಾಗಲೇ ರಾಜ್ ನಿಡುಮುರು ಮದುವೆ ಆಗಿ ಪತ್ನಿಯಿಂದ ದೂರಾಗಿದ್ದಾರೆ ಎನ್ನಲಾಗ್ತಿದೆ. ಇಬ್ಬರೂ ಎರಡನೇ ಮದುವೆ ಆಗುತ್ತಾ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಾರೆ ಎನ್ನುವ ಚರ್ಚೆ ಜೋರಾಗಿದೆ.


Click it and Unblock the Notifications











