For Quick Alerts
  ALLOW NOTIFICATIONS  
  For Daily Alerts

  ಡೈವೋರ್ಸ್.. ಡಿಪ್ರೆಷನ್.. ವರ್ಕೌಟ್.. ತಪ್ಪು ಮಾಡಿದ್ರಾ ಸಮಂತಾ? ಮೈಯೋಸಿಟಿಸ್ ಕಾಯಿಲೆ ಅಷ್ಟು ಡೇಂಜರಾ?

  |

  ಕಳೆದ ಹಲವು ದಿನಗಳಿಂದ ನಟಿ ಸಮಂತಾ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿತ್ತು. ಸ್ಯಾಮ್ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಸ್ಯಾಮ್ ತಾನು ಮೈಯೋಸಿಟಿಸ್ ಎನ್ನುವ ಅಟೋ ಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಸಮಂತಾ ತಮ್ಮ ಆರೋಗ್ಯದ ಬಗ್ಗೆ ನೀಡಿರುವ ಮಾಹಿತಿಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸ್ಯಾಮ್ ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಜ್ಯೂ. ಎನ್‌ಟಿಆರ್, ಅಖಿಲ್ ಅಕ್ಕಿನೇನಿ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಆಕೆ ಬೇಗ ಚೇತರಿಸಿಕೊಳ್ಳಲಿ, ಅದಕ್ಕೆ ಬೇಕಾದ ಶಕ್ತಿ ಸಿಗಲಿ ಎನ್ನು ಸೋಶಿಯಲ್ ಮೀಡಿಯಾದಲ್ಲಿ ಆದಷ್ಟು ಬೇಗ ಮೊದಲಿನಂತಾಗು ಎಂದು ಕೋರುತ್ತಿದ್ದಾರೆ. ಸದ್ಯ ಮೈಯೋಸಿಟಿಸ್ ಅಂದರೆ ಏನು ಎನ್ನುವ ಬಗ್ಗೆ ಸಾಕಷ್ಟು ಜನ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ಲಕ್ಷಣಗಳು ಏನು? ಈ ಸಮಸ್ಯೆಗೆ ಕಾರಣಗಳು ಏನು? ಇದು ಬಹಳ ಅಪಾಯಕಾರಿನಾ? ಸಮಂತಾ ಈ ಕಾಯಿಲೆಯಿಂದ ಬಳಲುತ್ತಿರುವುದಕ್ಕೆ ಕಾರಣ ಏನಾಗಿರಬಹುದು? ಎಂದು ಚರ್ಚೆ ನಡೆಸುತ್ತಿದ್ದಾರೆ.

  ಆಸ್ಪತ್ರೆಯಲ್ಲಿ ಸಮಂತಾ: ತಡವಾಗಲಿದೆ ಚೇತರಿಕೆ, ಸಮಸ್ಯೆ ಏನು?ಆಸ್ಪತ್ರೆಯಲ್ಲಿ ಸಮಂತಾ: ತಡವಾಗಲಿದೆ ಚೇತರಿಕೆ, ಸಮಸ್ಯೆ ಏನು?

  ಈ 'ಮೈಯೋಸಿಟಿಸ್' ರೋಗವನ್ನು ಗುರುತಿಸುವುದು ತುಂಬಾ ಕಷ್ಟ ಎಂದು ವೈದ್ಯರು ಹೇಳುತ್ತಾರೆ. ಇದು ಬಹಳ ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ. ಹಾಗಂತ ಅಸಡ್ಡೆ ಮಾಡುವಂತೆಯೂ ಇಲ್ಲ. ಲೈಫ್ ಸ್ಟೈಲ್ ಬದಲಾಯಿಸಿಕೊಂಡು, ಆಹಾರ, ವಿಶ್ರಾಂತಿ ತೆಗೆದುಕೊಂಡರೆ ಈ ರೋಗದಿಂದ ಹೊರಗೆ ಬರಬಹುದು ಎಂದು ಕೆಲವರು ನಟಿಗೆ ಸೂಚಿಸುತ್ತಿದ್ದಾರೆ.

  'ಮಯೋಸೈಟಿಸ್' ಎಂದರೆ ಏನು?

  'ಮಯೋಸೈಟಿಸ್' ಎಂದರೆ ಏನು?

  ಮಹಿಳೆಯರು ಹಾಗೂ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಆಟೋ ಇಮ್ಯೂನಿಟಿ ಡಿಜಾರ್ಡರ್‌ ಕಾರಣದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆಯಂತೆ. ಆಟೋ ಇಮ್ಯೂನಿಟಿ ಡಿಜಾರ್ಡರ್ ಎಂದರೆ ನಮ್ಮಲ್ಲಿನ ರೋಗ ನಿರೋಧಕ ವ್ಯವಸ್ಥೆಯು ಒಮ್ಮೊಮ್ಮೆ ಆರೋಗ್ಯಕರ ಕಣಗಳ ಮೇಲೆ ದಾಳಿ ಮಾಡುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಆಟೋ ಇಮ್ಯುನಿಟಿ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಹಾಗೆ ದಾಳಿ ಮಾಡಿದಾಗ 'ಮಯೋಸೈಟಿಸ್' ಕಾಯಿಲೆ ಬಂದಿದೆ. ಇದರಲ್ಲಿ ಡರ್ಮಟೊ, ಪಾಲಿ, ಇನ್‌ಕ್ಲೂಜನ್‌ ಬಾಡಿ ಮಯೋಸೈಟಿಸ್‌ ಮುಂತಾದ ವಿಧಗಳೂ ಇವೆ.

  'ಮೈಯೋಸಿಟಿಸ್' ಲಕ್ಷಣಗಳು ?

  'ಮೈಯೋಸಿಟಿಸ್' ಲಕ್ಷಣಗಳು ?

  ಈ ಕಾಯಿಲೆಯ ಮುಖ್ಯ ಲಕ್ಷಣಗಳು ಅಂದರೆ ಸ್ನಾಯುಗಳಲ್ಲಿ ವಿಪರೀತವಾಗಿ ನೋವು ಕಾಣಿಸಿಕೊಳ್ಳುತ್ತದೆ. ಸ್ವಲ್ಪ ದೂರ ನಡೆದರೂ ಸುಸ್ತಾಗುವುದು. ಸ್ವಲ್ಪ ಸಮಯವೂ ನಿಲ್ಲಲು ಸಾಧ್ಯವಾಗುವುದಿಲ್ಲ. ಕುಳಿತರೆ ಮತ್ತೆ ಎದ್ದು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ. ಕೆಲವರಲ್ಲಿ ಚರ್ಮದ ಮೇಲೆ ದದ್ದುಗಳು ಬರುತ್ತವೆ. ಮುಖದ ಉರಿಯೂತ ಕೂಡ ಬರುತ್ತದೆ. ಸಮಂತಾ ಇತ್ತೀಚೆಗೆ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಆಕೆಯ ಲುಕ್ಸ್ ಬದಲಾಗಿತ್ತು. ಇದೇ ಸಮಸ್ಯೆಯಿಂದ ಆ ರೀತಿ ಆಗಿರಬಹುದು ಎಂದು ಈಗ ಕೆಲವರು ಹೇಳುತ್ತಿದ್ದಾರೆ.

  ಸಮಂತಾ ತಪ್ಪು ಮಾಡಿದ್ರಾ?

  ಸಮಂತಾ ತಪ್ಪು ಮಾಡಿದ್ರಾ?

  ತುಂಬಾ ಕಠಿಣ ಪರಿಸ್ಥಿತಿಯಲ್ಲಿ ಈ ರೋಗದೊಂದಿಗೆ ಹೋರಾಡಬೇಕಾಗುತ್ತದೆ. ಅದಕ್ಕಾಗಿಯೇ ಸಮಂತಾ ಅಂತ ಭಾವನಾತ್ಮಕವಾಗಿ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಮಸ್ಯೆ ಕಾಣಿಸಿಕೊಳ್ಳಲು ನಿಖರವಾದ ಕಾರಣಗಳಿಲ್ಲ. ಆದರೆ ಆಲ್ಕಹಾಲ್ ಸೇವನೆ, ಡ್ರಗ್ಸ್ ಸೇವನೆಯಿಂದ ಕೂಡ ಆಟೋ ಇಮ್ಯೂನ್ ಲಕ್ಷಣಗಳು ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಆದರೆ ಸ್ಯಾಮ್, ನಾಗಚೈತನ್ಯನಿಂದ ಬ್ರೇಕಪ್ ನಂತರ ವಿಪರೀತವಾಗಿ ಒತ್ತಡಕ್ಕೆ ಒಳಗಾಗಿದ್ದರು. ತಕ್ಷಣ ಜಿಮ್‌ನಲ್ಲಿ ಹೆಚ್ಚಾಗಿ ವರ್ಕೌಟ್ ಮಾಡಲು ಆರಂಭಿಸಿದ್ದರು. ಸಿನಿಮಾಗಳಿಗಾಗಿ ಸಾಕಷ್ಟು ಆಕ್ಷನ್ ತರಬೇತಿ ಕೂಡ ಪಡೆದಿದ್ದರು. ಇದೆಲ್ಲಾ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ ಎಂದು ಚರ್ಚೆ ನಡೀತಿದೆ.

  'ಖುಷಿ' ಸಿನಿಮಾ ಶೂಟಿಂಗ್ ಮುಂದಕ್ಕೆ

  'ಖುಷಿ' ಸಿನಿಮಾ ಶೂಟಿಂಗ್ ಮುಂದಕ್ಕೆ

  ಸದ್ಯ ಸಮಂತಾ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿದೆ. ನವೆಂಬರ್ 14ಕ್ಕೆ 'ಯಶೋದಾ' ಸಿನಿಮಾ ತೆರೆಗೆ ಬರ್ತಿದೆ. ಆದರೆ ಸಿನಿಮಾ ಪ್ರಮೋಷನ್‌ಗೆ ಹೋಗುವ ಸಮಯದಲ್ಲೇ ಹಿನ್ನಡೆ ಆಗಿದೆ. ಇನ್ನು 'ಶಾಕುಂತಲಂ' ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಗೆ ಶೂಟಿಂಗ್‌ ತಡವಾಗಿತ್ತು. ಅದಕ್ಕೆ ಕಾರಣ ಏನು ಎನ್ನುವುದು ಈಗ ಗೊತ್ತಾಗಿದೆ. ಸಮಂತಾ ಚೇತರಿಸಿಕೊಂಡ ನಂತರ ಚಿತ್ರೀಕರಣಕ್ಕೆ ಹೋಗುವ ಸಾಧ್ಯತೆಯಿದೆ.

  English summary
  Samantha suffering from myositis. what is myositis, various myositis types and symptoms. Know More.
  Sunday, October 30, 2022, 11:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X