2013ರಲ್ಲೇ ಮದುವೆ ನಂತ್ರ ಡಿವೋರ್ಸ್ ಮಾಡಿಕೊಳ್ಳುತ್ತೇನೆ ಎಂದಿದ್ದ ಸಮಂತಾ!
ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದವರು. ಆದರೆ ಯಶಸ್ವಿ ದಾಂಪತ್ಯ ನಡೆಸುವಲ್ಲಿ ಈ ಜೋಡಿ ವಿಫಲ ಆಗಿದೆ. ಹತ್ತು ವರ್ಷದ ಪ್ರೀತಿಗೆ ಮದುವೆ ಆದ ನಾಲ್ಕೇ ವರ್ಷದಲ್ಲಿ ಅಂತ್ಯ ಹಾಡಿದ್ದಾರೆ. ಸದ್ಯ ವಿಚ್ಛೇದನ ಪಡೆದು ದೂರಾಗಿದ್ದಾರೆ.
Recommended Video
ಕಳೆದ ವರ್ಷದ ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಸುದ್ದಿಯಲ್ಲಿತ್ತು. ಇವರಿಬ್ಬರ ವಿಚ್ಛೇಧನದ ಸುದ್ದಿ ಈ ವರ್ಷವೂ ಮುಂದುವರೆದಿದೆ. ವಿಚ್ಛೇದನದ ಬಳಿಕ ನಟಿ ಸಮಂತಾ ವಿರುದ್ಧ ಹಲವು ಕೀಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಯಿತು.
ಆದರೆ ಈಗ ಸಮಂತಾ ಬಗ್ಗೆ ಹಳೆ ವಿಚಾರವೊಂದು, ಹೊಸ ರೂಪದಲ್ಲಿ ಹರಿದಾಡುತ್ತಿದೆ. ಅಂದು ಸಮಂತಾ ಆಡಿದ ಮಾತು, ಇಂದು ನಿಜ ಆಗಿ ಬಿಟ್ಟಿದೆ. ಹಾಗಾಗಿ ವಿಚ್ಛೇದನದ ಬಗ್ಗೆ ಮದುವೆಗೂ ಮುನ್ನ ಸಮಂತ ನೀಡಿದ್ದ ಹೇಳಿಕೆಯೊಂದು ಈಗ ಮತ್ತೇ ಸಾಮಾಜಿಕ ಜಾಲತಾಣದಲ್ಲಿ ಸುತ್ತಾಡುತ್ತಿದೆ.

ಆಗ ಡಿವೋರ್ಸ್ ಬಗ್ಗೆ ಮಾತಾಡಿದ್ದೇಕೆ ಸ್ಯಾಮ್!
ಹೌದು ಈ ಹಿಂದೆ 2013ರಲ್ಲಿ ನಟಿ ಸಮಂತಾ ಹೀಗೆ ಹೇಳಿದ್ದಾರೆ. ಆದರೆ, ಅದು ಈಗ ನಿಜ ಆಗಿ ಬಿಟ್ಟಿದೆ. ಅಷ್ಟಕ್ಕೂ ಸಮಂತಾ ಹೀಗೆ ಹೇಳಿದ್ದು ತಮಾಷೆಗಾಗಿ ಮಾತ್ರ ನಿರ್ದೇಶಕ ಹರೀಶ್ ಸಂತೋಷ್ ಮತ್ತು ವಿದ್ಯುಲೇಖ ರಾಮನ್ ಸಮಂತಾ ಮದುವೆಯಲ್ಲಿ ಡಾನ್ಸ್ ಮಾಡಲು ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಉತ್ತರಿಸಿದ ಸಮಂತಾ "ನಾನು ಮದುವೆ ಆಗಿ, ಬಳಿಕ ಡಿವೋರ್ಸ್ ಪಡೆದು ನಿಮ್ಮ ಡಾನ್ಸ್ ನೋಡಲು ಬರುತ್ತೇನೆ". ಎಂದಿದ್ದರು. "ಆಗ ನಾವು ನಿನ್ನ ವಿಚ್ಛೇದನಕ್ಕೂ ಸೇರಿ ಕುಣಿಯಬೇಕು". ಎಂದು ಹರೀಶ್ ಸಂತೋಷ್ ರಿಪ್ಲೇ ಮಾಡಿದ್ದರು.

ವೈರಲ್ ಆಗುತ್ತಿದೆ ಈ ಹಳೇ ಟ್ವೀಟ್!
ಇದು 2013ರ ಮಾತು. ಈ ಸಂಭಾಷಣೆಯ ಬಳಿಕ ಸಮಂತಾ ಇದೆಲ್ಲಾ ತಮಾಷೆಗಾಗಿ ಅಷ್ಟೇ, ನಾನು ಈಗಲೇ ಮದುವೆ ಆಗುವುದಿಲ್ಲ ಎಂದು ಹೇಳಿದ್ದರು. ಅದು ಅಲ್ಲಿಗೆ ಮುಗಿದು ಹೋಗಿತ್ತು. ಆದರೆ ಈಗ ಸಮಂತಾ ಡಿವೋರ್ಸ್ ಬಳಿಕ ಪುಷ್ಪ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಹಾಗಾಗಿ ಅಂದು ಹೇಳಿದ ಆ ಡಾನ್ಸ್ ಇದೇ ಇರಬಹುದು ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಹಾಗಾಗಿ ಹಳೇ ಟ್ವೀಟ್ ವಿಚಾರ ಈಗ ವೈರಲ್ ಆಗಿದೆ.

ಸಿನಿಮಾಗಳಲ್ಲಿ ಬ್ಯುಸಿ ಇರುವ ಸಮಂತಾ-ನಾಗಚೈತನ್ಯ!
ಇನ್ನು ವಿಚ್ಛೇದನ ಪಡೆದ ಬಳಿಕ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಕೂಡ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೆಚ್ಚಾಗಿ ಗಾಳಿ ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳದೆ. ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಮಂತಾ ಪುಷ್ಪ ಚಿತ್ರದ ಹಾಡಿನ ಮೂಲಕ ಸದ್ದು ಮಾಡಿದರೆ, ನಾಗಚೈತನ್ಯ ಬಂಗಾರ್ರಾಜು ಸಿನಿಮಾದ ಮೂಲಕ ಸದ್ದು ಮಾಡುತ್ತಿದ್ದಾರೆ.

ಹಾಲಿವುಡ್ ಬಾಲಿವುಡ್‌ಗೂ ಸಮಂತಾ ಎಂಟ್ರಿ!
ನಟಿ ಸಮಂತಾ ಮೊದಲಿಂದಲು ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಆದರೆ ಡಿವೋರ್ಸ್ ಬಳಿಕ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಹಾಲಿವುಡ್ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿದೆ. ಇನ್ನೂ ಬಾಲಿವುಡ್‌ನ ಯಶ್ ರಾಜ್ ನಿರ್ಮಾಣ ಸಂಸ್ಥೆ ಇಂದ 3 ಸಿನಿಮಾಗಳ ಆಫರ್ ಬಂದಿದೆ. ನಾಗಚೈತನ್ಯ ಅವರ ಮುಂದಿನ ಚಿತ್ರಗಳು ಇನ್ನು ಪ್ರಕಟ ಆಗಿಲ್ಲ.


Click it and Unblock the Notifications











