For Quick Alerts
  ALLOW NOTIFICATIONS  
  For Daily Alerts

  ಹಳೆ ಬಾಯ್‌ಫ್ರೆಂಡ್ ಸಿದ್ಧಾರ್ಥ್ ವರ್ತನೆ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ಸಮಂತಾ

  |

  ನಾಗ ಚೈತನ್ಯ ಜತೆಗೆ ಹಸೆಮಣೆ ಏರುವುದಕ್ಕೂ ಮುನ್ನ ನಟಿ ಸಮಂತಾ ನಟ ಸಿದ್ಧಾರ್ಥ್ ಜತೆಗೆ ಪ್ರೇಮ ಪರಿಣಯ ನಡೆಸಿದ್ದರು. ಇದು ಟಾಲಿವುಡ್‌ನಲ್ಲಿ ತೀವ್ರ ಚರ್ಚೆಯಾಗಿತ್ತು ಕೂಡ. ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪೂಜೆ ವಿಧಿವಿಧಾನಗಳನ್ನೂ ನಡೆಸಿದ್ದರು. ಅವರಿಬ್ಬರ ಸಂಬಂಧ ಮದುವೆಯ ಹಂತಕ್ಕೆ ತಲುಪಲಿದೆ ಎಂಬ ಗುಸುಗುಸು ಹೆಚ್ಚಾದ ವೇಳೆಯೇ ಸಮಂತಾ, ಸಿದ್ಧಾರ್ಥ್ ತೆಕ್ಕೆಯಿಂದ ಜಾರಿಕೊಂಡಿದ್ದರು.

  ಕೊಟ್ಟ ಮಾತು ಉಳಿಸಿಕೊಂಡ ನವರಸನಾಯಕ | Jaggesh donates 1 Lakh for Nirbhaya hangman

  ಸಾಮಾನ್ಯವಾಗಿ ಮದುವೆಯ ಬಳಿಕ ಬಹುತೇಕ ನಟಿಯರು ತಮ್ಮ ಹಳೆಯ ಪ್ರೇಮ ಪುರಾಣಗಳ ಬಗ್ಗೆ ಮಾತನಾಡುವ ಗೋಜಿಗೆ ಹೋಗುವುದಿಲ್ಲ. ಅದು ಪ್ರಸ್ತುತದ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎ ನ್ನವುದು ಅವರ ಅಂಜಿಕೆ. ಆದರೆ ಸಮಂತಾ ಅಕ್ಕಿನೇನಿ ಮುಲಾಜಿಲ್ಲದೆ ಎಲ್ಲವನ್ನೂ ನೇರವಾಗಿ ಹೇಳುವ ಛಾತಿಯವರು. ಹಾಗೆಯೇ ಅವರು ತಮ್ಮ ಮತ್ತು ಸಿದ್ಧಾರ್ಥ್ ನಡುವಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಒಂದು ವೇಳೆ ಆ ಸಂಬಂಧದಿಂದ ಹೊರಗೆ ಬಾರದೆ ಹೋಗಿದ್ದರೆ ತಮ್ಮ ಬದುಕು ಹೀನಾಯವಾಗುತ್ತಿತ್ತು ಎನ್ನುವಾಗ ತೆಲುಗಿನ ಹಿರಿಯ ನಟಿಯೊಬ್ಬರ ಜೀವನಕ್ಕೆ ಹೋಲಿಸಿದ್ದಾರೆ. ಸಮಂತಾ ಹೇಳಿದ್ದೇನು? ಮುಂದೆ ಓದಿ...

   ಹಾಟ್ ಆಗಿ ಕಾಣಿಸಿಕೊಂಡು ಟ್ರೋಲ್ ಮಾಡೋರಿಗೆ ಸವಾಲ್ ಹಾಕಿದ ನಟಿ ಸಮಂತಾ ಹಾಟ್ ಆಗಿ ಕಾಣಿಸಿಕೊಂಡು ಟ್ರೋಲ್ ಮಾಡೋರಿಗೆ ಸವಾಲ್ ಹಾಕಿದ ನಟಿ ಸಮಂತಾ

  ಸಿದ್ಧಾರ್ಥ್ ಸಂಬಂಧದ ಬಗ್ಗೆ ಸಮಂತಾ ಮಾತು

  ಸಿದ್ಧಾರ್ಥ್ ಸಂಬಂಧದ ಬಗ್ಗೆ ಸಮಂತಾ ಮಾತು

  ಸಮಂತಾ ಮತ್ತು ಸಿದ್ಧಾರ್ಥ್ ಬ್ರೇಕ್‌ಅಪ್‌ಗೆ ಕಾರಣ ಹೆಚ್ಚಿನವರಿಗೆ ತಿಳಿದಿಲ್ಲ. ಅದರ ಬಗ್ಗೆ ಸಮಂತಾ ಅಥವಾ ಸಿದ್ಧಾರ್ಥ್ ಮಾತನಾಡಲು ಮುಂದಾಗಿರಲಿಲ್ಲ. ಆದರೆ ಕೊನೆಗೂ ಸಮಂತಾ ತಮ್ಮ ಹಳೆಯ ಪ್ರೇಮದ ಕುರಿತಾದ ಕಹಿಯನ್ನು ಹೊರಗೆಡವಿದ್ದಾರೆ.

  ನಟಿ ಸಾವಿತ್ರಿಯಂತಾಗುತ್ತಿತ್ತು

  ನಟಿ ಸಾವಿತ್ರಿಯಂತಾಗುತ್ತಿತ್ತು

  'ನನ್ನ ವೈಯಕ್ತಿಕ ಬದುಕಿನಲ್ಲಿ ಎಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬೀಳುತ್ತಿದ್ದೆ ಎಂದರೆ ಮೈಯಲ್ಲಿ ನಡುಕ ಹುಟ್ಟುತ್ತದೆ. ನನ್ನ ಪರಿಸ್ಥಿತಿ ಈಗ ನಟಿ ಸಾವಿತ್ರಿ ಅವರಂತೆ ಆಗುತ್ತಿತ್ತು ಎಂದು ದುರಂತಮಯ ಬದುಕು ಕಂಡ ನಟ ಜೆಮಿನಿ ಗಣೇಶನ್ ಪತ್ನಿ ಸಾವಿತ್ರಿ ಅವರಿಗೆ ಹೋಲಿಸಿಕೊಂಡಿದ್ದಾರೆ. ಸಾವಿತ್ರಿ ಅವರ ಜೀವನಗಾಥೆ ಆಧರಿಸಿದ 'ಮಹಾನಟಿ' ಚಿತ್ರ ಭಾರಿ ಸದ್ದು ಮಾಡಿತ್ತು.

  ಕೆಡುಕು ಗ್ರಹಿಸಿ ಹೊರನಡೆದೆ

  ಕೆಡುಕು ಗ್ರಹಿಸಿ ಹೊರನಡೆದೆ

  ಆದರೆ ಅದೃಷ್ಟವಶಾತ್ ಬಹಳ ಬೇಗ ನನಗೆ ಅದರ ಆರಂಭದಲ್ಲಿಯೇ ತಪ್ಪಾಗುತ್ತಿದೆ ಎಂಬುದು ಅರಿವಾಯಿತು. ಹೀಗಾಗಿ ಆ ಸಂಬಂಧವನ್ನು ಮುರಿದು ಹೊರಗೆ ನಡೆದೆ. ಈ ಸಂಬಂಧ ತುಂಬಾ ಕೆಟ್ಟದಾಗಿ ಅಂತ್ಯಗೊಳ್ಳಲಿದೆ ಎಂಬುದನ್ನು ನಾನು ಗ್ರಹಿಸಿದ್ದೆ ಎಂದು ಸಮಂತಾ ಹೇಳಿದ್ದಾರೆ.

  ನಾಗ ಚೈತನ್ಯ ಅದ್ಭುತ ವ್ಯಕ್ತಿ

  ನಾಗ ಚೈತನ್ಯ ಅದ್ಭುತ ವ್ಯಕ್ತಿ

  ಹಾಗೆಯೇ ಪತಿ ನಾಗ ಚೈತನ್ಯ ಬಗ್ಗೆ ಕೂಡ ಸಮಂತಾ ಮೆಚ್ಚುಗೆ ಮಾತನ್ನಾಡಿದ್ದಾರೆ. 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಗೋವಾದಲ್ಲಿ ಮದುವೆಯಾಗಿದ್ದರು. ನಾಗ ಚೈತನ್ಯ ಅವರಂತಹ ವ್ಯಕ್ತಿಯನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಅವರು ಪ್ರತಿ ವಿಷಯದಲ್ಲಿಯೂ ಅದ್ಭುತ ವ್ಯಕ್ತಿ ಎಂದು ಕೊಂಡಾಡಿದ್ದಾರೆ.

  English summary
  Tollywood Actress Samantha Akkineni her personal life could have been like as Savithri if she did not breakup with Siddharth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X