ಸುದೀಪ್ 'ಈಗ' ಪ್ರಪಂಚದೆಲ್ಲೆಡೆ ಪ್ರಕಾಶಿಸುತ್ತಿದ್ದಾರೆ

<ul id="pagination-digg"><li class="previous"><a href="/news/eega-samantha-sudeep-is-my-hero-066565.html">« Previous</a>

ಜುಲೈ 10, 2012 ಕ್ಕೆ ಈ ಬಗ್ಗೆ ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಸಮಂತಾ, "ಸುದೀಪ್, ನೀವು ನನ್ನ ಹೀರೋ... ಈ ಚಿತ್ರದ ನಾಯಕಿಯಾಗಿರುವ ನನಗೆ ಗೊತ್ತು...ಈ ಎಲ್ಲಾ ಹೊಗಳಿಕೆಗಳೂ ನಿಮಗೆ ಬರಲೇಬೇಕಾದದ್ದು. ಏಕೆಂದರೆ ನಿಮ್ಮ ಅಭಿನಯ ಈ ಚಿತ್ರದಲ್ಲಿ ಅಮೋಘವಾಗಿದೆ, ಹೊಗಳಿಕೆಗೆ ನಿಜವಾಗಿಯೂ ಅರ್ಹವಾಗಿದೆ. ನಿಜವಾಗಿಯೂ ಹೇಳಬೇಕೆಂದರೆ, ಎಲ್ಲಾ ಹೊಗಳಿಕೆಯನ್ನು ಮೀರಿದ ಅಭಿನಯ ನಿಮ್ಮದು" ಎಂದಿದ್ದಾರೆ.

ಈ ಚಿತ್ರದ ಬಿಡುಗಡೆಗೂ ಮೊದಲೂ ಕೂಡ ಇದೇ ಸಮಂತಾ ಈ ಬಗ್ಗೆ ಹೀಗೆ ಟ್ವೀಟ್ ಮಾಡಿದ್ದರು. "ನಾಣಿ ಮತ್ತು ಸುದೀಪ್, ನೀವಿಲ್ಲದೇ ಈ ಚಿತ್ರವನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಾಣಿ ಸಂಪೂರ್ಣವಾಗಿ ಪ್ರೀತಿಸುವಂತಿದ್ದಾರೆ. ಹಾಗೇ ಸುದೀಪ್ ಬಗ್ಗೆ ಹೇಳಲು ಯಾವ ಶಬ್ಧವೂ ಸಿಗುತ್ತಿಲ್ಲ. ಹೇಗೆ ಹೇಳಲಿ ಸುದೀಪ್...? ರಾಜಮೌಳಿ ಸರ್ ಹಾಗೂ ಇಡೀ ಚಿತ್ರತಂಡಕ್ಕೆ ಈ ಬಗ್ಗೆ ನಾನು ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ. ಹೊಗಳಿಕೆ ಕೂಡ ಕನಸಿನ ಒಂದು ಭಾಗ".

ಈಗಂತೂ ಸಮಂತಾ ಈ ಮೊದಲಿನ ತಮ್ಮ ಪ್ರಶಂಸೆ ಲೆಕ್ಕಾಚಾರ ಸಂಪೂರ್ಣವಾಗಿ ಸರಿಯಾದ ಖುಷಿಯಲ್ಲಿದ್ದಾರೆ. ಸಮಂತಾ ಮಾತ್ರವಲ್ಲದೇ ನಿರ್ದೇಶಕ ರಾಜಮೌಳಿಯವರೂ ಕೂಡ ಚಿತ್ರೀಕರಣದ ಹಂತದಲ್ಲೇ ಸುದೀಪ್ ನಟನೆ ಬಗ್ಗೆ ಅತಿಯಾಗೇ ಪ್ರಶಂಸಿಸಿದ್ದರು. ಈಗ ಈ ಇಬ್ಬರ ಜೊತೆ ಇಡೀ ಭಾರತವೇ ಒಂದಾಗಿದೆ. ದಿನದಿನಕ್ಕೂ ಚಿತ್ರಮಂದಿರಗಳ ಸಂಖ್ಯೆ ಹಾಗೂ ಸುದೀಪ್ ಅಭಿಮಾನಿಗಳ ಸಂಖ್ಯೆ ಎರಡೂ ಹೆಚ್ಚುತ್ತಿವೆ.

ಕನ್ನಡದ ಕಿಚ್ಚ ಸುದೀಪ್, ಈಗ ಚಿತ್ರ ಹಾಗೂ ಅದರ ತಮಿಳು, ಮಲಯಾಳಂ ಹಾಗೂ ಹಿಂದಿ ಆವೃತ್ತಿಗಳ ಮೂಲಕ ಇಡೀ ದೇಶವನ್ನೂ ಮೀರಿ ಜಗತ್ತಿನ ಗಮನ ಸೆಳೆದಿದ್ದಾರೆ. ಪ್ರಪಂಚದಾದ್ಯಂತ 1200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈಗ ಚಿತ್ರದ ಚಿತ್ರಮಂದಿರಗಳ ಸಂಖ್ಯೆ ದಿನದಿನಕ್ಕೂ ಏರುತ್ತಿದೆ. ಎಲ್ಲಾ ಕಡೆ ಗಳಿಕೆಯಂತೂ ದಾಖಲೆಯನ್ನು ಪ್ರದರ್ಶಿಸುತ್ತಿದೆ. ಸುದೀಪ್ ಚಿತ್ರದ ರಿಯಲ್ ಹೀರೋ ಆಗಿ ಮೆರೆಯುತ್ತಿದ್ದಾರೆ.

ಈಗ ಚಿತ್ರದ ಮೂಲಕ ಎಸ್ ಎಸ್ ರಾಜಮೌಳಿ ಹಾಗೂ ಸುದೀಪ್ ಎಂಬ ಇಬ್ಬರು ಕನ್ನಡಿಗರು ಅಂತಾರಾಷ್ಷ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿದ್ದಾರೆ. ಸುದೀಪ್ ಅಮೋಘ ನಟನೆಗೆ ಈಗ ಚಿತ್ರದ ನಾಯಕಿ ಹಾಗೂ ಈ ವರ್ಷದ 'ಸೂಪರ್ ಹಿಟ್' ಚಿತ್ರಗಳ ಲಕ್ಕಿ ನಾಯಕಿ ಸಮಂತಾ ಸಾಥ್ ಬೇರೆ ಸಿಕ್ಕಿದೆ. ಸುದೀಪ್ 'ಸೌತ್ ಇಂಡಿಯಾ ಸೂಪರ್ ಸ್ಟಾರ್' ಆಗುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/eega-samantha-sudeep-is-my-hero-066565.html">« Previous</a>

More from Filmibeat

English summary
Actress Samantha could not stop praising Sudeep performance in SS Rajamouli movie Eega. On her Twitter page, the lucky star calls him her hero.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X