Samantha: ಹೈದರಾಬಾದ್ ಮನೆ ಬಿಟ್ಟ ಸಮಂತಾ ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!
ನಟಿ ಸಮಂತಾ ಸದ್ಯ ಪ್ಯಾನ್ ಇಂಡಿಯಾ ನಟಿಯಾಗಿ, ಹಲವು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಹೈದರಾಬಾದ್‌ನಲ್ಲೇ ವಾಸವಾಗಿದ್ದರು. ಆದರೆ ಈಗ ಸಮಂತಾ ಬಗ್ಗೆ ಹೊಸದೊಂದು ಗಾಳಿಸುದ್ದಿ ಹಬ್ಬಿದೆ. ಸಮಂತಾ ತಮ್ಮ ಮನೆಯನ್ನು ಖಾಲಿ ಮಾಡಿಕೊಂಡು ಹೊರಟಿದ್ದಾರಂತೆ.
ಹೈದರಾಬಾದ್‌ನಲ್ಲಿ ಇರುವ ಮನೆಯನ್ನು ತಾತ್ಕಾಲಿಕವಾಗಿ ಖಾಲಿ ಮಾಡಿಕೊಂಡು ಹೊರಟಿದ್ದಾರಂತೆ. ಕೆಲವು ದಿನಗಳು ಮನೆಯಿಂದ ಹೊರಗೆ ಉಳಿಯಲು ಸ್ಯಾಮ್ ನಿರ್ಧರಿಸಿದ್ದಾರಂತೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಸಮಂತಾ ತಮ್ಮ ಮನೆಯನ್ನು ತೊರೆದಿರುವುದು ಯಾಕೆ ಎನ್ನುವ ಚರ್ಚೆಗಳು ಕೂಡ ಹುಟ್ಟಿಕೊಂಡಿವೆ.
ಚೆನ್ನೈ ಮೂಲದ ಸಮಂತಾ ತೆಲುಗು ನಟ ನಾಗ ಚೈತನ್ಯ ಜೊತೆಗೆ ಮದುವೆ ಆಗಿ ಆಂಧ್ರದ ಸೊಸೆ ಆಗಿದ್ದರು. ಆದರೆ, ಕಳೆದ ವರ್ಷ ನಟ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ವಿಚ್ಛೇದನ ಪಡೆದುಕೊಂಡು ದೂರಾಗಿದ್ದಾರೆ. ಸದ್ಯ ನಟಿ ಸಮಂತಾ ಹೈದರಾಬಾದ್‌ನಲ್ಲಿ ಒಬ್ಬರೇ ವಾಸವಿದ್ದಾರೆ.
Recommended Video


ಮನೆ ಬಿಟ್ಟು ಸಮಂತಾ ಹೋಗಿದ್ದು ಎಲ್ಲಿಗೆ?
ಇದ್ದಕ್ಕಿದ್ದಂತೆ ನಟಿ ಸಮಂತಾ ಬೇರೆ ಸ್ಥಳದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಹಾಗಿದ್ದರೆ ಸಮಂತಾ ಎಲ್ಲಿಗೆ ಹೋಗ್ತಾರೆ? ಎಲ್ಲಿ ಇರುತ್ತಾರೆ? ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿವೆ. ಈ ಹಿಂದೆ ಕೆಲವು ದಿನ ಮುಂಬೈನಲ್ಲಿ ವಾಸವಿದ್ದರು. ಹಾಗಾಗಿ ಮತ್ತೆ ಮುಂಬೈಗೆ ಹಾರುತ್ತಾರಾ? ಎನ್ನುವ ಪ್ರಶ್ನೆಗಳು ಮೂಡಿವೆ. ಆದರೆ ಸಮಂತಾ ಮನೆ ಬಿಡಲು ಕಾರಣ ಆಕೆಯ ಮುಂದಿನ ಸಿನಿಮಾ ಎನ್ನುವುದು ಈಗ ರಿವೀಲ್ ಆಗಿದೆ.

ಯಶೋಧ ಸೆಟ್‌ನಲ್ಲೇ ನಟಿ ಸಮಂತಾ ವಾಸ್ತವ್ಯ!
ನಟಿ ಸಮಂತಾ ಮನೆಯನ್ನು ತಾತ್ಕಾಲಿವಾಗಿ ಯಾಕೆ ತೊರೆದಿದ್ದಾರೆ ಎಂದು ಕೇಳಿದರೆ ಅಚ್ಚರಿ ಆಗೋದು ಖಚಿತ. ಯಾಕೆಂದರೆ ಮನೆ ಬಿಟ್ಟ ಸಮಂತಾ ಬೇರೆಲ್ಲೂ ಹೋಗಿಲ್ಲ. ಬದಲಿಗೆ ಶೂಟಿಂಗ್ ಸೆಟ್‌ನಲ್ಲೇ ಬೀಡು ಬಿಟ್ಟಿದ್ದಾರೆ. ಅಚ್ಚರಿ ಅನಿಸಿದರು ಇದು ಸತ್ಯ. ಸಮಂತಾ ಮುಂದಿನ ಚಿತ್ರ 'ಯಶೋಧ'. ಈ ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಶೂಟಿಂಗ್‌ಗಾಗಿ ಪಂಚಾತಾರಾ ಹೋಟೆಲ್ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಸೆಟ್ಟ ಇಷ್ಟ ಪಟ್ಟ ಸಮಂತಾ ಅಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ಸಮಂತಾ ಕೋರಿಕೆಗೆ ಅಸ್ತು ಎಂದ ಚಿತ್ರತಂಡ!
ಚಿತ್ರದ ಶೂಟಿಂಗ್‌ಗಾಗಿ ಬಂದು ಬೇರೆಲ್ಲೋ ಹೋಟೆಲ್‌ಗೆ ದುಡ್ಡು ಖರ್ಚು ಮಾಡುವ ಬದಲು, ಅದ್ಧೂರಿ ಹೋಟೆಲ್‌ನಂತೆಯೇ ಇರುವ ಸಿನಿಮಾ ಸೆಟ್‌ನಲ್ಲಿ ಉಳಿದುಕೊಳ್ಳಲು ಸಮಂತಾ ನಿರ್ಧಾರ ಮಾಡಿದ್ದಾರೆ. ಸಮಂತಾ ನಿರ್ಧಾರವನ್ನು ಚಿತ್ರತಂಡ ಒಪ್ಪಿಕೊಂಡಿದೆ. ಹಾಗಾಗಿ ಸಮಂತಾ ಸದ್ಯ ಚಿತ್ರೀಕರಣ ಮುಗಿಯುವ ತನಕ 'ಯಶೋಧ' ಚಿತ್ರದ ಸೆಟ್‌ನಲ್ಲಿ ಉಳಿಯಲು ನಿರ್ಧಾರ ಮಾಡಿದ್ದಾರಂತೆ.

ಕೆಲವು ದಿನ ಸಮಂತಾ ಮುಂಬೈನಲ್ಲಿ ವಾಸ!
ಸಮಂತಾ ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ವಿಚ್ಛೇದನ ಪಡೆದ ನಂತರ ಸಮಂತಾಗೆ ಮುಂಬೈನಲ್ಲಿ ಬೀಡು ಬಿಟ್ಟಿದ್ದರು. ಆಗ ಸಮಂತಾ ಇನ್ನು ಸಿನಿಮಾ ಮಾಡುವುದಿಲ್ಲ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅಭಿಮಾನಿಯ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಸಮಂತಾ. ಹೈದರಾಬಾದ್ ನನ್ನ ಮನೆ ಅಲ್ಲಿಂದ ಎಲ್ಲೂ ಹೋಗುವುದಿಲ್ಲ ಎಂದು ಹೇಳಿದ್ದರು.


Click it and Unblock the Notifications











