ಸಮಂತಾಗೆ ಮತ್ತೆ ಏನಾಯ್ತು? ಆಸ್ಪತ್ರೆ ಬೆಡ್ ಮೇಲೆ ನಟಿಯ ಸ್ಥಿತಿ ಕಂಡು ಅಭಿಮಾನಿಗಳು ಶಾಕ್
ನಟಿ ಸಮಂತಾ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತೇಯಿದೆ. ಕಳೆದ ವರ್ಷ ತಾವು ಮಯೋಸೈಟಿಸ್ ಎನ್ನುವ ಅಪರೂಪಕದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸ್ಯಾಮ್ ಹೇಳಿದ್ದರು. ಇದೇ ಕಾರಣಕ್ಕೆ ಸಿನಿಮಾ ಕೆಲಸಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆದಿದ್ದರು. ವರ್ಕೌಟ್ ಮಾಡಿ ಮಯೋಸೈಟಿಸ್ ವಿರುದ್ದ ಹೋರಾಡುತ್ತಿದ್ಧಾರೆ. ಸದ್ಯ ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ನೋಡಿ ಶಾಕ್ ಆಗಿದ್ದಾರೆ.
ಚಿಕಿತ್ಸೆ ಪಡೆಯುವುದರ ಜೊತೆ ಜೊತೆಗೆ ಸಮಂತಾ 'ಸಿಟಾಡೆಲ್' ವೆಬ್‌ಸೀರಿಸ್ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಅನಾರೋಗ್ಯದ ನಡುವೆಯೂ ಸ್ಯಾಮ್ ಇತ್ತೀಚೆಗೆ 'ಶಾಕುಂತಲಂ' ಸಿನಿಮಾ ಪ್ರಚಾರಕ್ಕೆ ಹಾಜರಾಗಿದ್ದರು. ಸಿನಿಮಾ ಶೂಟಿಂಗ್ ಸಮಯದಲ್ಲಿ ಜ್ವರದಿಂದ ಬಳಲಿ, ಗಂಟಲು ಕಟ್ಟಿ ಮಾತನಾಡಲು ಸಾಧ್ಯವಾದಂತಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಆಕ್ಸಿಜನ್ ಮಾಸ್ಕ್ ಧರಿಸಿ ಆಸ್ಪತ್ರೆ ಬೆಡ್ ಮೇಲೆ ಸಮಂತಾ ಕಾಣಿಕೊಂಡಿರುವ ಫೋಟೊ ವೈರಲ್ ಆಗಿದೆ. ಆದರೆ ಇದು ಈ ಹಿಂದೆ ಚಿಕಿತ್ಸೆ ವೇಳೆ ಕ್ಲಿಕ್ಕಿಸಿರುವ ಫೋಟೊ ಅನ್ನೋದು ಗೊತ್ತಾಗುತ್ತಿದೆ.

ವೈರಲ್ ಫೋಟೊದಲ್ಲಿ ಸ್ಯಾಮ್ ಸ್ಥಿತಿ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ನೆಚ್ಚಿನ ನಟಿಗೆ ಮತ್ತೆ ಏನಾಯಿತು ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ಧಾರೆ. ಮಯೋಸೈಟಿಸ್ ಚಿಕಿತ್ಸೆಯ ಭಾಗವಾಗಿ ಸಮಂತಾ ಹೈಪರ್‌ಬಾರಿಕ್ ಥೆರಪಿ ಪಡೆದುಕೊಳ್ಳುತ್ತಿದ್ಧಾರೆ. ಇದು ಆಟೋಇಮ್ಯೂನ್ ಕಾಯಿಲೆಗಳಂತಹ ಅನೇಕ ರೀತಿಯ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗಿದೆ. ಈ ಚಿಕಿತ್ಸೆಯು ನ್ಯೂರೋ ಡಿಜೆನೆರೆಟಿವ್ ಕಂಡೀಷನ್ಸ್, ಆಟಿಸಂ, ಟ್ರೊಮೊಟಿಕ್ ಮಿದುಳಿನ ಗಾಯಗಳಿಗೆ ಈ ಥೆರಪಿ ಪರಿಣಾಮಕಾರಿಯಾಯಾಗಿದೆ. ಈ ಚಿಕಿತ್ಸೆಯಿಂದ ಹಾನಿಗೊಳಗಾದ ಅಂಗಾಂಶವು ಪುನರುತ್ಪಾದಿಸುತ್ತದೆ.
ನಿರ್ದಿಷ್ಟ ಒತ್ತಡದಲ್ಲಿ ಉತ್ತಮವಾದ ಆಕ್ಸಿಜನ್ ತೆಗೆದುಕೊಳ್ಳುವುದೇ ಹೈಪರ್ ಬಾರಿಕ್ ಚಿಕಿತ್ಸೆ. ನಾವು ಸಹಜವಾಗಿ ಉಸಿರಾಡುವಾಗ ತೆಗೆದುಕೊಳ್ಳುವ ಆಕ್ಸಿಜನ್‌ಗೆ ಹೋಲಿಸಿದರೆ ಈ ಚಿಕಿತ್ಸೆಯಲ್ಲಿ ಹೆಚ್ಚು ಆಕ್ಸಿಜನ್ ಶ್ವಾಸಕೋಶಕ್ಕೆ ತಲುಪುತ್ತದೆ. ಇಂತಹ ಆಕ್ಸಿಜನ್ ಬ್ಯಾಕ್ಟೀರಿಯಾ ವಿರುದ್ದ ಹೋರಾಟಕ್ಕೆ ಸಹಕಾರಿಯಾಗಿದೆ. ಗ್ರೋತ್ ಫ್ಯಾಕ್ಟರ್ಸ್ ಹಾಗೂ ಸ್ಟೆಮ್ ಶೆಲ್ಸ್ ಬಿಡುಗಡೆಗೆ ಪ್ರೇರೇಪಿಸುತ್ತದೆ. ಅದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯುವ ಸಾಧ್ಯತೆ ಇರುತ್ತದೆ.
ಸಮಂತಾ ವೈದ್ಯಕೀಯ ಚಿಕಿತ್ಸೆಯ ಜೊತೆ ಜೊತೆಗೆ ಮಯೋಸೈಟಿಸ್ ವಿರುದ್ದ ಹೋರಾಟಕ್ಕೆ ಜಿಮ್ ವರ್ಕ್‌ಔಟ್ ಮಾಡುತ್ತಿದ್ದಾರೆ. ಪ್ರತಿ ದಿನ ಕಸರತ್ತು ಮುಂದುವರೆದಿದೆ. ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯೂ ಹೋರಾಟ ಮುಂದುವರೆಸಿದ್ದಾರೆ. ಜಿಮ್ ತರಬೇತುದಾಗಿ ಜುನೈದ್ ಶೇಖ್ ಮಾರ್ಗದರ್ಶನದಲ್ಲಿ ಸ್ಯಾಮ್ ದೇಹ ದಂಡಿಸುತ್ತಿದ್ಧಾರೆ. ಮುಖ್ಯವಾಗಿ ಹೆಚ್ಚು ಭಾರ ಎತ್ತುವ ಕರಸತ್ತುಗಳನ್ನು ಮಾಡುತ್ತಿರುತ್ತಾರೆ. ಸದ್ಯ ಆಕ್ಸಿಜನ್ ಮಾಸ್ಕ್ ಹಾಕಿಕೊಂಡಿರುವ ಫೋಟೊ ಜೊತೆಗೆ ಜಿಮ್ ವರ್ಕ್‌ಔಟ್, ಕುದುರೆ ಸವಾರಿ ಫೋಟೊ ಹಂಚಿಕೊಂಡಿದ್ದಾರೆ.

ಸಮಂತಾ ಆರೋಗ್ಯದ ಬಗ್ಗೆ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಆಗ್ತಿದೆ, ಕೆಲವರು ಸಮಂತಾ ಚೇತರಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ಧಾರೆ. ಆದರೆ ಅನಾರೋಗ್ಯದ ನಡುವೆಯೂ ಆಕೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಚಿಟ್ಟಿಬಾಬು ಸಮಂತಾ, ಸಿಂಪಥಿಗಾಗಿ ಸಿನಿಮಾ ಪ್ರಚಾರಕ್ಕಾಗಿ ಅನಾರೋಗ್ಯದ ನಾಟಕ ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಸಮಂತಾ ತಮ್ಮದೇ ಸ್ಟೈಲ್‌ನಲ್ಲಿ ಪರೋಕ್ಷವಾಗಿ ಖಡಕ್ ತಿರುಗೇಟು ನೀಡಿದ್ದರು. ಇಬ್ಬರ ಏಟು ಎದಿರೇಟು ಮುಂದುವರೆದಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಸಮಂತಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಬಾಲಿವುಡ್‌ನ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ನಟಿಸ್ತಿದ್ದಾರೆ. ಇನ್ನು ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದ ಶೂಟಿಂಗ್ ಬಾಕಿಯಿದೆ. ಮತ್ತೊಂದು ಕಡೆ ಸ್ಯಾಮ್ ನಟಿಸಬೇಕಿದ್ದ 'ರೈನ್‌ಬೋ' ಸಿನಿಮಾ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಗಿದೆ. ಸಮಂತಾ ನಟಿಸಿದ 'ಶಾಕುಂತಲಂ' ಇತ್ತೀಚೆಗೆ ಹೀನಾಯವಾಗಿ ನೆಲ ಕಚ್ಚಿದೆ. ಗುಣಶೇಖರ್ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ಅಂದಾಜು 60 ಕೋಟಿ ರೂ. ಬಜೆಟ್ ಸಿನಿಮಾ 7 ಕೋಟಿ ರೂ. ಕೂಡ ಗಳಿಸಲಿಲ್ಲ.


Click it and Unblock the Notifications











