For Quick Alerts
  ALLOW NOTIFICATIONS  
  For Daily Alerts

  ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ನೀಡಿದ ಸಮಂತಾ: ಮತ್ತೆ ಒಂದಾಗುತ್ತಾ ಸ್ಯಾಮ್-ನಾಗ್ ಜೋಡಿ

  |

  ಟಾಲಿವುಡ್‌ನ ರಿಯಲ್ ಜೋಡಿ ಸಮಂತಾ ನಾಗಚೈತನ್ಯ ಡಿವೋರ್ಸ್ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿ ಸಾಕಷ್ಟು ದಿನಗಳೇ ಕಳೆದಿದೆ. ಆದರೂ ಇವರಿಬ್ಬರ ವಿಚ್ಛೇದನದ ವಿಚಾರ ಇನ್ನೂ ಸುದ್ದಿಯಾಗುತ್ತಲೇ ಇದೆ. ಯಾವ ಕಾರಣಕ್ಕಾಗಿ ಇವರಿಬ್ಬರು ಈ ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಅಭಿಮಾನಿಗಳು. ಹೀಗಿದ್ದರೂ ಸಮಂತಾ ಮತ್ತು ನಾಗಚೈತನ್ಯ ಯಾವುದಕ್ಕೂ ಉತ್ತರ ನೀಡದೇ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡುವ ಮೂಲಕ ತಮ್ಮ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಇದೀಗ ಮತ್ತೊಂದು ವಿಚಾರ ಭಾರಿ ಸುದ್ದಿಯಾಗುತ್ತಿದೆ. ಅದುವೇ ಸಮಂತಾ ಇತ್ತೀಚೆಗೆ ಮಾವ ನಾಗರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ಭೇಟಿ ನೀಡಿರೋದು.

  ಸಮಂತಾ ಇತ್ತೀಚೆಗೆ ಮಾವ ನಾಗರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಗೆ ತೆರಳಿದ್ದಾರೆ. ಈ ಸುದ್ದಿ ಸಾಕಷ್ಟು ಚರ್ಚೆ ಆಗುತ್ತಲೇ ಇತ್ತು. ಸಮಂತಾ ಸ್ಟುಡಿಯೋಗೆ ಯಾಕೆ ಹೋಗಿರಬಹುದು, ನಾಗರ್ಜುನ ಅವರ ಬಳಿ ಸಮಂತಾ ಮಾತನಾಡಿದ್ದಾರಾ? ಹಾಗೇ ಸಮಂತಾ ಮತ್ತು ನಾಗಜೈತನ್ಯ ಮತ್ತೆ ಒಂದಾಗಬಹುದಾ ಎಂಬೆಲ್ಲಾ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಸಮಂತಾ ನಾಗರ್ಜುನ ಅವರ ಸ್ಟುಡಿಯೋಗೆ ತೆರಳಿದ್ದು ಇದು ಯಾವುದಕ್ಕೂ ಅಲ್ಲ ಬದಲಾಗಿ ಕೆಲಸದ ವಿಚಾರಕ್ಕಾಗಿ ಎಂಬುದು. ಸಮಂತಾ ಅಭಿನಯದ ಶಕುಂತಲಂ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಶಕುಂತಲಂ ಚಿತ್ರದ ಡಬ್ಬಿಂಗ್ ಕೆಲಸ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋದಲ್ಲೇ ನಡೆಯುತ್ತಿದ್ದು, ಸಮಂತಾ ಅವರು ಕೂಡ ತನ್ನ ಪಾತ್ರದ ಡಬ್ಬಿಂಗ್ ಮುಗಿಸೋದಕ್ಕಾಗಿ ಅನ್ನಪೂರ್ಣ ಸ್ಟುಡಿಯೋಗೆ ತೆರಳಿದ್ದರು ಎಂಬ ಬಗ್ಗೆ ತಿಳಿದು ಬಂದಿದೆ. ಈ ವಿಚಾರವನ್ನು ಸ್ವತಃ ಶಕುಂತಲಂ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದೆ.

  ಸಮಂತಾ ಮತ್ತು ನಾಗಚೈತನ್ಯ ಅಕ್ಟೋಬರ್ ಮೊದಲ ವಾರದಲ್ಲಿ ವಿಚ್ಚೇದನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬರೆದುಕೊಂಡಿದ್ದರು. ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದರು. ಅಭಿಮಾನಿಗಳಂತು ಈ ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದರು. ಸರಿಯಾಗಿಯೇ ಇದ್ದ ಇವರಿಬ್ಬರ ಸಂಸಾರದಲ್ಲಿ ಏನಾಗಿರಬಹುದು ಎಂಬೆಲ್ಲಾ ಬಗ್ಗೆ ಲೆಕ್ಕಾಚಾರಗಳನ್ನು ಹಾಕಲು ಮುಂದಾಗಿದ್ದರು, ಇಡೀ ಟಾಲಿವುಡ್ ಮಂದಿ ಸಮಂತಾ ಮತ್ತು ನಾಗಚೈತನ್ಯರ ಈ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿತ್ತು. ಇನ್ನು ಇದೇ ವಿಚಾರಕ್ಕೆ ಸಮಂತಾ ಮಾವ ನಾಗರ್ಜುನ ಅವರು ಕೂಡ ಬೇಸರ ವ್ಯಕ್ತ ಪಡಿಸಿದ್ದರು.

  ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ನಾಗರ್ಜುನ ಅವರು "ಬಹಳ ಬೇಸರದಿಂದ ಇದನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗಚೈತನ್ಯ ನಡುವೆ ನಡೆದಿರೋದು ಬೇಸರದ ವಿಚಾರ. ಪತಿ-ಪತ್ನಿ ನಡುವೆ ಏನು ಆಗಿದೆ ಅನ್ನೋದು ತುಂಬಾನೇ ಖಾಸಗೀಯಾದ ವಿಚಾರ. ಹೀಗಿದ್ದರೂ ಸ್ಯಾಮ್ ಮತ್ತು ಚಾಯ್ ನನಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಮಂತಾ ಜೊತೆ ಕಳೆದ ಕ್ಷಣಗಳನ್ನು ನಾನು ಯಾವತ್ತು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ಸಮಂತಾ ಯಾವಾಗಲೂ ನನಗೆ ಪ್ರೀತಿ ಪಾತ್ರಳು. ಇಬ್ಬರಿಗೂ ದೇವರು ಆಶೀರ್ವಾದ ಮಾಡಲಿ"ಎಂದು ಬರೆದುಕೊಂಡಿದ್ದರು.

  Samantha visits ex father in law Nagarjuna studio

  ಮಾವ ನಾಗರ್ಜುನ ಮತ್ತು ಸಮಂತಾ ಸಂಬಂಧ ಈಗಲೂ ಚೆನ್ನಾಗಿದೆ ಎಂದು ಹೇಳಲಾಗುತ್ತಿದ್ದು, ಅವರಿಬ್ಬರನ್ನು ಒಂದು ಮಾಡುವ ಬೇಡಿಕೆಯನ್ನು ಅಭಿಮಾನಿಗಳು ನಾಗಚೈತನ್ಯ ಮುಂದೆ ಪದೇ ಪದೇ ಇಡುತ್ತಿದ್ದಾರೆ. ಇತ್ತ ಸಮಂತಾ ಮತ್ತು ನಾಗಚೈತನ್ಯ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯದ ಪುಷ್ಪ ಚಿತ್ರದಲ್ಲಿ ಸೊಂಟಬಳುಕಿಸಲು ಸಜ್ಜಾಗುತ್ತಿದ್ದು, ಬಾಲಿವುಡ್ ಪ್ರಾಜೆಕ್ಟ್‌ಗೂ ಕೂಡ ಸಹಿ ಹಾಕಿದ್ದಾರೆ. ಇನ್ನು ನಾಗಚೈತನ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದು, ಈ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಲಿದೆ.

  English summary
  Samantha visited to akkineni nagarjuna studio here is the reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X