For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನ ವದಂತಿ ನಡುವೆಯೂ ಮನೆಗೆ ‘ಸಾಷಾ’ರನ್ನು ಬರಮಾಡಿಕೊಂಡ ಸಂತಸದಲ್ಲಿ ನಟಿ ಸಮಂತಾ

  |

  ಸೆಲೆಬ್ರಿಟಿಗಳ ಶ್ವಾನ ಪ್ರೀತಿ ಬಗ್ಗೆ ಆಗ ಕೇಳುತ್ತಿರುತ್ತೀರಿ. ತನ್ನ ಮುದ್ದಿನ ನಾಯಿಯ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತನ್ನ ಮನೆಯ ಮಕ್ಕಳಂತೆಯೇ ಶ್ವಾನವನ್ನು ನೋಡಿಕೊಳ್ಳುತ್ತಾರೆ. ಶ್ವಾನ ಪ್ರೀತಿಯಯಲ್ಲಿ ಟಾಲಿವುಡ್​ನ ಖ್ಯಾತ ನಟಿ ಸಮಂತಾ ಏನು ಹೊರತಾಗಿಲ್ಲ. ಸಮಂತಾ ತನ್ನ ಕುಟುಂಬಕ್ಕೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಮುದ್ದಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

  'ಸಾಷಾ' ಎಂಬ ಪುಟಾಣಿ ನಾಯಿಯನ್ನು ಸಮಂತಾ ಕುಟುಂಬಕ್ಕೆ ಬರಮಾಡಿಕೊಂಡಿದ್ದು, ಅದಕ್ಕೆ ಮುದ್ದಾದ ಹೆಸರನ್ನು ಇಟ್ಟಿದ್ದಾರೆ. ಮುದ್ದಾ ಶ್ವಾನದ ಫೋಟೋ ಜೊತೆಗೆ ಹೆಸರನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇದಕ್ಕೆ ಸಮಂತಾ ಉದ್ದನೆಯ ಕ್ಯಾಪ್ಶನ್ ಕೂಡ ನೀಡಿದ್ದಾರೆ. ''ಇಂದು ಮುಂಜಾನೆಯಿಂದ ಇದುವರೆಗೆ 19 ಬಾರಿ ಸಾಷಾ ವಿಸರ್ಜಿಸಿದ ಮೂತ್ರವನ್ನು ಸ್ವಚ್ಛಮಾಡಿದ್ದೇನೆ. ಇನ್ನೂ ಸಮಯ 9 ಗಂಟೆಯಷ್ಟೇ. ಎಲ್ಲಾ ಪೂರೈಸಿ ಒಂದೈದು ನಿಮಿಷ ಈಗ ಕಾಫಿ ಕುಡಿಯಲು ಕುಳಿತಿದ್ದೇನೆ, 5 ನಿಮಿಷಗಳ ಬಿಡುವು ದೊರೆತದ್ದಕ್ಕೆ ಆಹಾ ಎನಿಸುತ್ತಿದೆ. ಮನೆಯಲ್ಲಿ ಪುಟಾಣಿ ದೈತ್ಯೆಯೊಬ್ಬಳು ಓಡಾಡುತ್ತಿದ್ದಾಳೆ, 'ಸಾಷಾ'ಳಿಗೆ ಹಾಯ್ ಹೇಳಿ'' ಎಂದು ಅವರು ಬರೆದುಕೊಂಡಿದ್ದಾರೆ.

  ಸಮಂತಾ ಜೊತೆಯಲ್ಲಿ ಈಗಾಗಲೇ ಮನೆಯ ಸದಸ್ಯನಂತೆ 'ಹ್ಯಾಷ್' ಇದ್ದಾನೆ. ಈಗ ತಂದಿರುವ 'ಸಾಷಾ' ಆತನ ಸಹೋದರಿ ಎಂದು ಸಮಂತಾ ಬರೆದುಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಸಮಂತಾ ಹ್ಯಾಷ್, ಸಾಷಾರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಸಾಷಾಳ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಖ್ಯಾತ ತಾರೆಯರು ಸೇರಿದಂತೆ, ಅನೇಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ನಟಿ ಸಮಂತಾ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪತಿ ನಾಗ ಚೈತನ್ಯ ಅವರಿಂದ ಸಮಂತಾ ದೂರ ಆಗಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ವೈರ್ಲ ಆಗಿದೆ. ಈಗಾಗಲೇ ಸಮಂತಾ ನಾಗ ಚೈತನ್ಯ ಮನೆಯಿಂದ ಹೊರಬಂದು ತಾಯಿಮನೆಯಲ್ಲಿ ವಾಸಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಮಂತಾ ಸಾಮಾಜಿಕ ಜಾಲತಾಣದ ಖಾತೆಯಿಂದ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ ಬಳಿಕ ಈ ಮಾತು ಜೋರಾಗಿದೆ. ಆದರೆ ಈ ಬಗ್ಗೆ ಅಕ್ಕಿನೇನಿ ಕುಟುಂಬ ಆಗಲಿ ಅಥವಾ ಸಮಂತಾ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಲಿಲ್ಲ.

  ಆದರೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ಮುದ್ದಿ ನಾಯಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ಸಕ್ಸಸ್ ನಲ್ಲಿರುವ ಸಮಂತಾ ಬಳಿ ಸದ್ಯ ತೆಲುಗಿನ ಒಂದು ಸಿನಿಮಾ ಮತ್ತು ತಮಿಳಿನ ಒಂದು ಸಿನಿಮಾವಿದೆ. ಶಕುಂತಲಾ ದೇವಿ ಸಿನಿಮಾದ ಚಿತ್ರೀಕರಣ ಮುಗಿಸಿರುವ ಸಮಂತಾ ತಮಿಳಿನ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಸಿನಿಮಾದಲ್ಲಿ ಸಮಂತಾ ಜೊತೆ ನಯನತಾರಾ ಕೂಡ ನಟಿಸುತ್ತಿದ್ದಾರೆ.

  ದಿ ಫ್ಯಾಮಿಲಿ ಮ್ಯಾನ್ ಸೂಪರ್ ಸಕ್ಸಸ್ ಬಳಿಕ ಸಮಂತಾ ಬೇಡಿಕೆ ಇನ್ನು ಹೆಚ್ಚಾಗಿದೆ. ಕೇವಲ ಸೌತ್ ಸಿನಿರಂಗ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಸಮಂತಾಗೆ ಬೇಡಿಗೆ ಹೆಚ್ಚಾಗಿದೆ. ಸಮಂತಾ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಸಮಂತಾ ಸದ್ಯಕ್ಕೆ ಚಿಕ್ಕ ಬ್ರೇಕ್ ಪಡೆಯಬೇಕೆಂದು ಹೇಳಿದ್ದಾರೆ. ಸದ್ಯಕ್ಕೆ ಸಮಂತಾ ನಡೆ ಕುತೂಹಲ ಮೂಡಿಸಿದೆ.

  English summary
  Tollywood Actress Samantha welcomes new member saasha to her family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X