ನಿರ್ದೇಶಕ ರಾಜ್ ತೋಳಿನಲ್ಲಿ ಸಮಂತಾ; ಆತನ ಪತ್ನಿ ಪೋಸ್ಟ್ ವೈರಲ್

ನಟಿ ಸಮಂತಾ ಹಾಗೂ ನಟ ನಾಗಚೈತನ್ಯಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಇಬ್ಬರೂ ಡಿವೋರ್ಸ್ ಪಡೆದಿದ್ದು ಹಳೇ ಸುದ್ದಿ. ಶೋಭಿತಾ ಧುಲಿಪಾಲ ಜೊತೆ ಚೈತು ಎರಡನೇ ಮದುವೆ ಆಗಿದ್ದು ಕೂಡ ಜನ ಮರೆತುಬಿಟ್ಟರು. ನಿರ್ದೇಶಕ ರಾಜ್ ನಿಡಿಮೊರು ಜೊತೆ ಸಮಂತಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವುದೇ ಹೊಸ ಸುದ್ದಿ.

ಸ್ಯಾಮ್ ಹಾಗೂ ರಾಜ್ ತಮ್ಮಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ಸೈಲೆಂಟ್ ಆಗಿಯೇ ಇದ್ದಾರೆ. ಆದರೆ ಒಟ್ಟೊಟ್ಟಿಗೆ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಾಜ್ ತೋಳಿನಲ್ಲಿ ಇರುವಂತೆ ಸಮಂತಾ ಒಂದು ಫೋಟೊ ಹಂಚಿಕೊಂಡಿದ್ದರು. ತಿರುಪತಿಗೆ ಇಬ್ಬರೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. ಇದೆಲ್ಲದರ ನಡುವೆ ನಿರ್ದೇಶಕ ರಾಜ್ ಪತ್ನಿ ಶ್ಯಾಮಲಿ ಡೇ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

Samantha s cuddly selfie with Director Raj his wife cyptic post goes viral

ಗೂಡಾರ್ಥದ ಪೋಸ್ಟ್ ಅನ್ನು ಶ್ಯಾಮಲಿ ಡೇ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಸಮಂತಾ ಹಾಗೂ ರಾಜ್ ಫ್ಲೈಟ್‌ನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಾ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ವೈರಲ್ ಆಗುತ್ತಿದ್ದಂತೆ ಶ್ಯಾಮಲಿ ಡೇ ಮಾಡಿರುವ ಪೋಸ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಅವರಿಬ್ಬರ ಫೋಟೊ ಬಗ್ಗೆಯೇ ಆಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ರಾ? ಎನ್ನುವ ಚರ್ಚೆ ಶುರುವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಎಷ್ಟು ಬೇಗ ಲವ್ವಾಗುತ್ತೋ ಅಷ್ಟೇ ಬೇಗ ರಿಲೇಷನ್‌ಶಿಪ್ ಮುರಿದು ಬೀಳುತ್ತದೆ. ಒಬ್ಬರು ದೂರಾದರೂ ಎಂದು ಕೊರಗುತ್ತಾ ಕೂರುವವರ ಸಂಖ್ಯೆ ಕಮ್ಮಿ. ಅದರಲ್ಲೂ ಉಳ್ಳವರು ಮತ್ತೊಬ್ಬರಿಂದ ಪ್ರೀತಿಯ ಹುಡುಕಾಟ ನಡೆಸುತ್ತಾರೆ. ಅದೇ ಕಾರಣಕ್ಕೆ ಸೆಲೆಬ್ರೆಟಿಗಳ ರಿಲೇಷನ್‌ಶಿಪ್, ಮದುವೆ, ಡಿವೋರ್ಸ್ ಪದೇ ಪದೆ ಚರ್ಚೆಗೆ ಗ್ರಾಸವಾಗುತ್ತದೆ.

"ನನ್ನ ಬಗ್ಗೆ ಯೋಚಿಸುವ, ನೋಡುವ, ನನ್ನ ಬಗ್ಗೆ ಕೇಳುವ, ನನ್ನೊಂದಿಗೆ ಮಾತನಾಡುವ, ನನ್ನ ಬಗ್ಗೆ ಮಾತನಾಡುವ, ನನ್ನ ಬಗ್ಗೆ ಓದುವ, ಬರೆಯುವ ಮತ್ತು ಇಂದು ನನ್ನನ್ನು ಭೇಟಿಯಾಗುವ ಪ್ರತಿಯೊಬ್ಬರಿಗೂ ನನ್ನ ಪ್ರೀತಿ, ಹಾಗೂ ಆಶೀರ್ವಾದ" ಎಂದು ಶ್ಯಾಮಲಿ ಡೇ ಬರೆದುಕೊಂಡಿದ್ದಾರೆ. ಯಾರ ಹೆಸರನ್ನು ತೆಗೆದುಕೊಳ್ಳದೇ ಆಕೆ ಪೋಸ್ಟ್ ಮಾಡಿದ್ದಾರೆ. ಆದರೆ ಪತಿ ರಾಜ್ ಹಾಗೂ ಸಮಂತಾ ಬಗ್ಗೆಯೇ ಈ ರೀತಿ ಪೋಸ್ಟ್ ಮಾಡಿರಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Samantha s cuddly selfie with Director Raj his wife cyptic post goes viral

10 ವರ್ಷಗಳ ಹಿಂದೆ ನಿರ್ದೇಶಕ ರಾಜ್ ಹಾಗೂ ಶ್ಯಾಮಲಿ ಡೇ ಮದುವೆ ನಡೆದಿತ್ತು. ದಂಪತಿಗೆ ಒಬ್ಬ ಮಗಳು ಇದ್ದಾಳೆ. ಬಾಲಿವುಡ್ ಸಿನಿಮಾಗಳಲ್ಲಿ ಸಹ ನಿರ್ದೇಶಕಿಯಾಗಿ ಆಕೆ ಕೆಲಸ ಮಾಡಿದ್ದರು. ಡಿವೋರ್ಸ್ ಪಡೆಯದೇ ಇದ್ದರು ರಾಜ್ ಹಾಗೂ ಶ್ಯಾಮಲಿ ಕೆಲ ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಇದೀಗ ಸ್ಯಾಮ್- ರಾಜ್ ಸೆಲ್ಫಿ ಬೆನ್ನಲ್ಲೇ ಆಕೆಯ ಪೋಸ್ಟ್ ವೈರಲ್ ಆಗುತ್ತಿದೆ.

ಸಮಂತಾ ನಿರ್ಮಾಣದ 'ಶುಭಂ' ಎಂಬ ಸಿನಿಮಾ ಕಳೆದ ವಾರ ತೆರೆಗೆ ಬಂದಿತ್ತು. ಈ ಹಾರರ್ ಕಾಮಿಡಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿ ಸಮಂತಾ ಪೋಸ್ಟ್ ಮಾಡಿದ್ದಾರೆ. 'ಶುಭಂ' ಸಿನಿಮಾ ವೀಕ್ಷಿಸಿದ್ದಕ್ಕಾಗಿ, ಅನುಭವಿಸಿದ್ದಕ್ಕಾಗಿ ಮತ್ತು ನಮ್ಮೊಂದಿಗೆ ಆಚರಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಮೊದಲ ಹೆಜ್ಜೆಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ" ಎಂದು ಸ್ಯಾಮ್ ಬರೆದುಕೊಂಡಿದ್ದಾರೆ. ಸಿನಿಮಾ ಜರ್ನಿಯ ಭಾಗದಲ್ಲಿ ಕ್ಲಿಕ್ಕಿಸಿದ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

'ಶುಭಂ' ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ರಾಜ್ ಕೂಡ ಸಮಂತಾ ಬೆಂಬಲಕ್ಕೆ ನಿಂತಿದ್ದರು. ಅದನ್ನು ಫೋಟೊಗಳಲ್ಲಿ ನೋಡಬಹುದು. ಅದೇ ರೀತಿ ವಿಮಾನದಲ್ಲಿ ಇಬ್ಬರು ಪ್ರಯಾಣಿಸುವಾಗ ಕ್ಲಿಕ್ಕಿಸಿದ್ದ ಫೋಟೊವನ್ನು ಸ್ಯಾಮ್ ಈಗ ಪೋಸ್ಟ್ ಮಾಡಿದ್ದಾರೆ. ಇದು ಇಬ್ಬರ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದೆ.

More from Filmibeat

English summary
Amid Samantha and Director Raj nidimoru relationship rumours, Director Raj's wife Shhyamali De post goes viral
Read more about: samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X