For Quick Alerts
  ALLOW NOTIFICATIONS  
  For Daily Alerts

  ಬದಲಾಗಿದ್ದೀನಿ ಆದರೆ ಬೇಸರವಿಲ್ಲ: ನಟಿ ತೋರಿದ ಧೈರ್ಯ

  |

  ಮೆಗಾಸ್ಟಾರ್ ಚಿರಂಜೀವಿ, ಸುದೀಪ್, ತಮಿಳು ಸೂರ್ಯ, ಜೂ.ಎನ್‌ಟಿಆರ್, ಅನಿಲ್ ಕಪೂರ್ ಇಂಥಹಾ ದೊಡ್ಡ-ದೊಡ್ಡ ನಟರೊಂದಿಗೆ ನಾಯಕಯಾಗಿ ನಟಿಸಿದ್ದ ಸಮೀರಾ ರೆಡ್ಡಿ ಈಗ ಸಾಕಷ್ಟು ಬದಲಾಗಿದ್ದಾರೆ.

  1500 ಜನ ವಿದ್ಯಾರ್ಥಿಗಳನ್ನು ವಿದೇಶದಿಂದ ಕರೆತಂದ Sonu Sood | Kyrgyzstan | Filmibeat Kannnada

  ನಟಿಯರಿಗೆ ವಯಸ್ಸಾಗುತ್ತದೆ, ನಟರಿಗಲ್ಲ ಎಂಬ ಮಾತು ಈ ಹಿಂದೆ ಸಿನಿಮಾ ರಂಗದಲ್ಲಿತ್ತು, ಆದರೆ ಈಗದು ಬದಲಾಗಿ ನಟ-ನಟಿಯರಿಬ್ಬರಿಗೂ ವಯಸ್ಸಾಗುವುದಿಲ್ಲ ಎಂದಾಗಿದೆ. ನಟಿಯರಂತೂ ಯಂಗ್ ಆಗಿ ಕಾಣಲು ಮಾಡಬಾರದ ಕಸರತ್ತುಗಳನ್ನೆಲ್ಲಾ ಮಾಡುತ್ತಿದ್ದಾರೆ ಈಗ.

  ಆದರೆ ನಟಿ ಸಮೀರಾ ರೆಡ್ಡಿ ಈ ಎಲ್ಲಾ 'ಫೇರ್‌ ಆಂಡ್ ಲೌವ್ಲಿ' ನಟಿಯರಿಗಿಂತಲೂ ಸಾಕಷ್ಟು ಭಿನ್ನ ಮತ್ತು ಧೈರ್ಯವಂತೆ. ಯಾವ ನಟಿಯರೂ ತಮ್ಮ 'ಅಂದವಲ್ಲದ' ಮುಖವನ್ನು ಜನರಿಗೆ ತೋರಲು ಬಯಸುವುದಿಲ್ಲ. ಆದರೆ ಸಮೀರಾ ರೆಡ್ಡಿ ತೋರಿಸಿದ್ದಾರೆ.

  ಸಮೀರಾ ರೆಡ್ಡಿಗೆ ಸಂದೇಶ

  ಸಮೀರಾ ರೆಡ್ಡಿಗೆ ಸಂದೇಶ

  ಸಮೀರಾ ರೆಡ್ಡಿಗೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಮೆಸೆಜ್ ಮಾಡಿದರಂತೆ. 'ನನಗೆ ಒಂದು ಮಗು ಇದೆ, ನಾನು ದಪ್ಪ ಕಾಣುತ್ತಿದ್ದೇನೆ, ಕಪ್ಪಗಾಗುತ್ತಿದ್ದೇನೆ, ಹೊಟ್ಟೆ ಬಂದಿದೆ, ನಾನು ಅಂದವಾಗಿ ಕಾಣುತ್ತಿಲ್ಲ' ಎಂದು. ಇದು ಸಮೀರಾ ರೆಡ್ಡಿಗೆ ಬೇಸರ ತರಿಸಿದೆ.

  ಮೇಕಪ್ ರಹಿತವಾಗಿ ಕ್ಯಾಮೆರಾ ಮುಂದೆ

  ಮೇಕಪ್ ರಹಿತವಾಗಿ ಕ್ಯಾಮೆರಾ ಮುಂದೆ

  ಕೂಡಲೇ ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋ ಮಾಡಿ ಹಾಕಿದ ಸಮೀರಾ ರೆಡ್ಡಿ, ಮೇಕಪ್ ರಹಿತವಾಗಿ , ಬಿಳಿ ತಲೆಗೂದಲಿನೊಂದಿಗೆ, ಮುಖದ ಗುಳ್ಳೆಗಳ ಸಹಿತವಾಗಿ ಕ್ಯಾಮೆರಾ ಮುಂದೆ ಬಂದು' ನೀವು ಹೇಗಿದ್ದೀರೋ ಹಾಗೆಯೇ ಇರಿ. ವ್ಯಾಯಾಮ ಆರೋಗ್ಯಕ್ಕಾಗಿ ಮಾಡಿ ಅಂದಕ್ಕಾಗಿ ಮಾಡಬೇಡಿ' ಎಂದು ಸಂದೇಶ ನೀಡಿದ್ದಾರೆ.

  ಉದಾಹರಣೆಯಾಗಿ ನೀಡಿದ ಸಮೀರಾ ರೆಡ್ಡಿ

  ಉದಾಹರಣೆಯಾಗಿ ನೀಡಿದ ಸಮೀರಾ ರೆಡ್ಡಿ

  ತಮ್ಮನ್ನೇ ಉದಾಹರಣೆಯಾಗಿ ನೀಡಿದ ಸಮೀರಾ ರೆಡ್ಡಿ, ಇದು ನನ್ನ ನಿಜ ಬಣ್ಣ, ನನ್ನ ಕೂದಲು ಬೆಳ್ಳಗಾಗಿವೆ, ಕತ್ತಿನ ಭಾಗದಲ್ಲಿ ಹೆಚ್ಚಿನ ಚರ್ಮ ಬೆಳೆದಿದೆ. ಹೊಟ್ಟೆ ದಪ್ಪಗಾಗಿದೆ ಎಂದೆಲ್ಲಾ ವಿಡಿಯೋದಲ್ಲಿ ಧೈರ್ಯವಾಗಿ ತೋರಿಸಿದ ಸಮೀರಾ ರೆಡ್ಡಿ, ಬಾಡಿ ಶೇಮಿಂಗ್‌ಗೆ ಹೆದರಿದವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು.

  ಸಮೀರಾ ರೆಡ್ಡಿ ವಿಡಿಯೋಗೆ ಭಾರಿ ಮೆಚ್ಚುಗೆ

  ಸಮೀರಾ ರೆಡ್ಡಿ ವಿಡಿಯೋಗೆ ಭಾರಿ ಮೆಚ್ಚುಗೆ

  ಸಮೀರಾ ರೆಡ್ಡಿ ಅವರು ಈ ಧೈರ್ಯ ತುಂಬಿದ ವಿಡಿಯೋವನ್ನು ಸಾಕಷ್ಟು ಮಂದಿ ಮೆಚ್ಚಿದ್ದಾರೆ, ಹಲವಾರು ಮಂದಿ ಶೇರ್ ಮಾಡಿದ್ದಾರೆ. ನಟಿ ಸಮಂತಾ ಸಹ ಸಮೀರಾ ರೆಡ್ಡಿ ಅವರ ವಿಡಿಯೋವನ್ನು ಶೇರ್ ಮಾಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Actress Sameera Reddy released a video against body shaming. She made video without make up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X