'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಜೊತೆ ಚಿರು, ಡಾನ್ ಲೀ; ನಿರ್ದೇಶಕ ವಂಗಾ ಪ್ರತಿಕ್ರಿಯೆ

ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ನೂರಾರು ಕೋಟಿ ಸುರಿದು ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ಕಲಾವಿದರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.

'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸಂದೀಪ್ ರೆಡ್ಡಿ ವಂಗಾ ಈ ಬಾರಿ ಪ್ರಭಾಸ್ ಜೊತೆ ಕೈ ಜೋಡಿಸಿದ್ದಾರೆ. 'ಸ್ಪಿರಿಟ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಸೆಟ್ಟೇರುವ ಮುನ್ನ ಸಿನಿಮಾ ಭಾರೀ ಸೌಂಡ್ ಮಾಡ್ತಿದೆ. ತೃಪ್ತಿ ದಿಮ್ರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿದೆ. ಇದೇ ಚಿತ್ರದಲ್ಲಿ ನಟಿಸೋಕೆ ದೀಪಿಕಾ ಪಡುಕೋಣೆ ಒಲ್ಲೆ ಎಂದಿದ್ದರು.

Sandeep Reddy Vanga Clarifies Rumors Chiranjeevi and Don Lee Not Part of Prabhas Spirit Movie

ಇನ್ನು 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ತಂದೆ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಕಾರಣ ಮೆಗಾಸ್ಟಾರ್‌ ಅಭಿಮಾನಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಆಫೀಸ್‌ನಲ್ಲಿ ಚಿರು ದೊಡ್ಡ ಫೋಟೊ ಹಾಕಿಕೊಂಡಿದ್ದಾರೆ. ಇನ್ನು ಸೌತ್ ಕೊರಿಯಾ ನಟ ಡಾನ್ ಲೀ ಕೂಡ ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದರು. ಅಧಿಕೃತವಾಗಿ ಈ ಬಗ್ಗೆ ಅಪ್‌ಡೇಟ್ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದರು.

ಅಂತೂ ಇಂತೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ 'ಸ್ಪಿರಿಟ್' ಚಿತ್ರದ ಸ್ಟಾರ್‌ ಕಾಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚಿರಂಜೀವಿ ಹಾಗೂ ಡಾನ್‌ಲೀ ನಟಿಸುತ್ತಾರಾ? ಎನ್ನುವ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. 'ಜಿಗ್ರಿಸ್' ಚಿತ್ರತಂಡದ ಜೊತೆ ಮಾತನಾಡುತ್ತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ಸ್ಪಿರಿಟ್' ಚಿತ್ರದಲ್ಲಿ ಚಿರಂಜೀವಿ ನಟಿಸುತ್ತಾರೆ ಎನ್ನುವುದೆಲ್ಲ ಬರೀ ವದಂತಿ. ಅಂತಹ ಯಾವುದೇ ಚರ್ಚೆ ನಾವು ನಡೆಸಿಲ್ಲ. ಒಂದು ವೇಳೆ ಚಿರು ಸರ್ ಜೊತೆ ಸಿನಿಮಾ ಮಾಡುವಂತಿದ್ದರೆ ಅವರನ್ನೇ ಹೀರೊ ಮಾಡಿ ಸಿನಿಮಾ ಮಾಡ್ತೀನಿ. ಸಹ ನಟನಾಗಿ ಆಯ್ಕೆ ಮಾಡಿಕೊಳ್ಳಲ್ಲ. ಯಾವ ಜಾನರ್ ಎನ್ನುವುದು ಗೊತ್ತಿಲ್ಲ. ನೋಡೋಣ ಮುಂದೆ ಯಾವಾಗ ಅನ್ನೋದು ಎಂದು ಸಂದೀಪ್ ರೆಡ್ಡಿ ವಂಗಾ ಸ್ಪಷ್ಟಪಡಿಸಿದ್ದಾರೆ.

ಡಾನ್‌ಲೀ ವಿಲನ್ ಆಗಿ ನಟಿಸುತ್ತಾರೆ ಎನ್ನುವುದು ಕೂಡ ಬರೀ ರೂಮರ್ಸ್. ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿ ಸಂದೀಪ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಟೀ ಸೀರಿಸ್ ಸಂಸ್ಥೆ 'ಸ್ಪಿರಿಟ್' ಚಿತ್ರಕ್ಕೆ ಹಣ ಹೂಡಿತ್ತಿದೆ. ಇತ್ತೀಚೆಗೆ ಪ್ರಭಾಸ್ ಹುಟ್ಟುಹಬ್ಬಕ್ಕೆ ಚಿತ್ರದ ಡೈಲಾಗ್ ಟೀಸರ್ ಬಂದು ಹಿಟ್ ಆಗಿತ್ತು. ಪ್ರಕಾಶ್ ರಾಜ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಸ್ಪಿರಿಟ್' ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಆದರೆ ಯಾವುದೇ ಶುರು ಎನ್ನುವುದು ಮಾತ್ರ ಗೊತ್ತಿಲ್ಲ. ಇದೇ ಸಂದರ್ಶನದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಆದಷ್ಟು ಬೇಗ ಅಪ್‌ಡೇಟ್ ಸಿಗುತ್ತದೆ ಎಂದು ಸಂದೀಪ್ ಹೇಳಿದ್ದಾರೆ.

ಸದ್ಯ 'ದಿ ರಾಜಾಸಾಬ್' ಹಾಗೂ 'ಫೌಜಿ' ಚಿತ್ರಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಬಳಿಕ 'ಸ್ಪಿರಿಟ್' ಚಿತ್ರಕ್ಕಾಗಿ ವಂಗಾ ಜೊತೆ ಕೈ ಜೋಡಿಸಲಿದ್ದಾರೆ. ವಿವೇಕ್ ಒಬೆರಾಯ್ ಹಾಗೂ ಹಿರಿಯ ನಟಿ ಕಾಂಚನಾ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. 2027ರಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಆ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್-2' ಚಿತ್ರದಲ್ಲಿ ಪ್ರಭಾಸ್ ನಟಿಸಬೇಕಿದೆ.

More from Filmibeat

Read more about: chiranjeevi tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X