Bigg Boss Telugu 9: ನಾನು ಮನೆಗೆ ಹೋಗ್ಬೇಕು, ಪ್ಲೀಸ್ ಬಿಟ್ಬಿಡಿ- ಸಂಜನಾ ಗರ್ಲಾನಿ ಕಣ್ಣೀರು
ಬಿಗ್‌ಬಾಸ್ ಕನ್ನಡ ಸೀಸನ್ 1ರಲ್ಲಿ ಸ್ಪರ್ಧಿಯಾಗಿದ್ದ ನಟಿ ಸಂಜನಾ ಗರ್ಲಾನಿ ಇದೀಗ ತೆಲುಗು ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಇನ್ನು ಬಿಗ್‌ಬಾಸ್ ತೆಲುಗು ಸೀಸನ್ 9ರಲ್ಲಿ ಸ್ಪರ್ಧಿಯಾಗಿರುವ ಸಂಜನಾ ಮನೆಗೆ ಹೋಗಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತೆಲುಗು ನಟ ನಾಗಾರ್ಜುನ ನಿರೂಪಣೆಯಲ್ಲಿ ಬಿಗ್‌ಬಾಸ್ ತೆಲುಗು ಶೋ ಮೂಡಿ ಬರ್ತಿದೆ. ವೀಕೆಂಡ್ ಪಂಚಾಯ್ತಿ ವೇಳೆ ಸಂಜನಾ ಮಾತನಾಡಿ ಪುಟಾಣಿ ಮಕ್ಕಳನ್ನು ಬಿಟ್ಟಿರಲು ಆಗ್ತಿಲ್ಲ. ದಯವಿಟ್ಟು ನನ್ನನ್ನು ಮನೆಗೆ ಕಳ್ಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಶನಿವಾರ ನಿಖಿಲ್ ಎಲಿಮಿನೇಟ್ ಆಗಿದ್ದು ಭಾನುವಾರ ಎಪಿಸೋಡ್‌ನಲ್ಲಿ ಯಾರು ಹೊರ ಬರ್ತಾರೆ ಕಾದು ನೋಡಬೇಕಿದೆ.

ಬಿಗ್‌ಬಾಸ್ ಮನೆಯಲ್ಲಿ ಸಂಜನಾ ಬಹಳ ಚೆನ್ನಾಗಿ ಆಟ ಆರಂಭಿಸಿದ್ದರು. ಅದಾಗಲೇ ಕನ್ನಡ ಶೋನಲ್ಲಿ ಭಾಗವಹಿಸಿದ್ದ ಅನುಭವ ಆಕೆಗೆ ಅಲ್ಲಿ ಪ್ಲಸ್ ಆಗಿತ್ತು. ಆರಂಭದ ದಿನಗಳಲ್ಲಿ ಟಫ್ ಕಾಂಪಿಟೇಷನ್ ಕೊಟ್ಟಿದ್ದರು. ಫಿನಾಲೆಗೆ ನಾಲ್ಕೈದು ವಾರ ಬಾಕಿಯಿದೆ. ಸದ್ಯ ಮನೆಯಲ್ಲಿ 11 ಜನ ಉಳಿದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಹೊಸದೇನು ಅಲ್ಲ. ಆದರೆ ಫ್ಯಾಮಿಲಿ ರೌಂಡ್ ಇರಲ್ಲ ಎಂದು ನಾಗಾರ್ಜುನ ಹೇಳಿರುವುದು ಸಂಜನಾಗೆ ಬೇಸರ ತಂದಿದೆ.
ವಾರಗಳ ಕಾಲ ತಿಂಗಳುಗಳ ಕಾಲ ಸ್ಪರ್ಧಿಗಳು ತಮ್ಮ ಮನೆಬಿಟ್ಟು ಬಿಗ್‌ಬಾಸ್ ಮನೆ ಸೇರುತ್ತಾರೆ. ಫೋನ್ ಇಲ್ಲ, ಕುಟುಂಬಸ್ಥರ ಜೊತೆ ಸಂಪರ್ಕ ಇಲ್ಲ. ಆ ಮನೆಯೇ ಪ್ರಪಂಚ ಆಗಿರುತ್ತದೆ. ಆದರೆ ನಡುವೆ ಒಮ್ಮೆ ಫ್ಯಾಮಿಲಿ ಸದಸ್ಯರನ್ನು ಮನೆಯೊಳಗೆ ಕರೆಸಿ ಬಿಗ್‌ಬಾಸ್ ಸರ್‌ಪ್ರೈಸ್ ಕೊಡುತ್ತಾರೆ. ಭಾವನಾತ್ಮಕವಾಗಿ ಸ್ಪರ್ಧಿಗಳನ್ನು ಕೆಣಕುತ್ತಾರೆ. ಇದು ಟಿಆರ್‌ಪಿ ಗಿಮಿಕ್ ಎನ್ನುವವರು ಇದ್ದಾರೆ.
ಈ ವಾರ ಎರಡು ಶಾಕಿಂಗ್ ವಿಚಾರಗಳಿವೆ ಎಂದು ನಾಗಾರ್ಜುನ ಸ್ಪರ್ಧಿಗಳಿಗೆ ಹೇಳಿದ್ದಾರೆ. ಮೊದಲನೆಯದ್ದು ಈ ಬಾರಿ ಡಬಲ್ ಎಲಿಮಿನೇಷನ್ ಎಂದಿದ್ದಾರೆ. ಅದನ್ನು ಕೇಳಿ ಸುಧಾರಿಸಿಕೊಳ್ಳುವ ವೇಳೆಗೆ ಸಂಜನಾಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಮನೆಯಲ್ಲಿ ನಿಮಗೆ ಬೆಂಬಲವಾಗಿ ಇರುವವರು ಯಾರು? ಕೆಳಕ್ಕೆ ಬೀಳಿಸುವವರು ಯಾರು ಎಂದು ಕೇಳಿದಾಗ ಕೆಲವರು ಸಂಜನಾಳಿಂದ ನಮ್ಮ ಆಟಕ್ಕೆ ಪೆಟ್ಟು ಬೀಳ್ತಿದೆ ಎಂದಿದ್ದಾರೆ. ಹಾಗಾಗಿ ಸಂಜನಾಗೆ ಫ್ಯಾಮಿಲಿ ವೀಕ್ ಇಲ್ಲ ಎಂದು ನಾಗಾರ್ಜುನ ಹೇಳಿದ್ದಾರೆ. ಇದನ್ನು ಕೇಳಿ ಸಂಜನಾ ಭಾವುಕರಾಗಿದ್ದಾರೆ.
"ಸಾರ್ ನಾನು ಮನೆಗೆ ಹೋಗ್ತೀನಿ. ಇನ್ನು ಇಲ್ಲಿರಲು ನನಗೆ ಸಾಧ್ಯವಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಅಳುತ್ತಿದ್ದೇನೆ. ನನ್ನ ಮಕ್ಕಳನ್ನು ನೋಡಬೇಕು ಸಾರ್. ನನ್ನಿಂದ ಇಲ್ಲಿ ಇರಲು ಸಾಧ್ಯವಾಗ್ತಿಲ್ಲ. ಈ ಶೋಗೆ ಗೌರವ ಕೊಡುತ್ತೇನೆ. ನನಗಿಂತ ಆಟವನ್ನು ಹೆಚ್ಚು ಪ್ರೀತಿಸ್ತೀನಿ. ನಾನು ಇಲ್ಲಿ ಯಾರಿಗೂ ಕೆಟ್ಟದು ಮಾಡಲಿಲ್ಲ" ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಾಗಾರ್ಜುನ "ಇದು ನಿಮಗೆ ಸಿಕ್ಕ ಪ್ರತಿಫಲ. ಯಾರು ಏನೂ ಮಾಡಲು ಸಾಧ್ಯವಿಲ್ಲ. ಬಿಗ್‌ಬಾಸ್ ನಿರ್ಣಯ ಅಂತಿಮ" ಎಂದಿದ್ದಾರೆ. ಸ್ವಾರಿ ಸರ್ ದಯವಿಟ್ಟು ನನ್ನನ್ನು ಮನೆಗೆ ಕಳಿಸಿ, ಗರ್ವದಿಂದ ಈ ಮಾತು ಹೇಳ್ತಿಲ್ಲ" ಎಂದು ಸಂಜನಾ ಅವವತ್ತುಕೊಂಡಿದ್ದಾರೆ.
ಕೂಡಲೇ ಸಹ ಸ್ಪರ್ಧಿಗಳಾದ ಕಲ್ಯಾಣ್ ಹಾಗೂ ಭರಣಿ ಎದ್ದು ನಾವಿಬ್ಬರು ನಮ್ಮ ಫ್ಯಾಮಿಲಿ ವೀಕ್ ತ್ಯಾಗ ಮಾಡ್ತೀವಿ. ಅದರ ಬದಲು ಸಂಜನಾ ಅವರಿಗೆ ಆ ಅವಕಾಶ ಕೊಡಿ ಎಂದಿದ್ದಾರೆ. ಆದರೆ ಅದಕ್ಕೆ ಕೂಡ ನಾಗಾರ್ಜುನ ಒಪ್ಪಲಿಲ್ಲ. ಇದೆಲ್ಲಾ ಟಿಆರ್‌ಪಿ ಗಿಮಿಕ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಫ್ಯಾಮಿಲಿ ರೌಂಡ್ ಇರುತ್ತದೆ. ಸ್ಪರ್ಧಿಗಳ ಮನೆಮಂದಿ ಕರೆಸಿ ಎಮೋಷನಲ್ ಸೀನ್ ಕ್ರಿಯೇಟ್ ಮಾಡಿ ಗಮನ ಸೆಳೆಯುತ್ತಾರೆ ನೋಡ್ತಾ ಇರಿ ಎಂದು ಹೇಳುತ್ತಿದ್ದಾರೆ.


Click it and Unblock the Notifications











