Sanjay Dutt: ಲೀಕ್ ಆಯ್ತು ಅಧೀರನ ಸಂಭಾವನೆ ಲೆಕ್ಕ: ವಿಲನ್ ಆಗಿ ನಟಿಸೋಕೆ ಸಂಜು ಕೇಳೋದೆಷ್ಟು?

ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿಬಿಟ್ಟಿದ್ದಾರೆ. ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿದ ಸಂಜು ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. 'KGF'-2 ಚಿತ್ರದಿಂದ ದಕ್ಷಿಣಕ್ಕೆ ಬಂದ ಸಂಜು ಈ ಫುಲ್ ಬ್ಯುಸಿ ಆಗಿಬಿಟ್ಟಿದ್ದಾರೆ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸೋಕೆ ಹಿಂದು ಮುಂದು ನೋಡ್ತಿಲ್ಲ. ಸಲ್ಮಾನ್ ಖಾನ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಹೀಗೆ ಸ್ಟಾರ್ ನಟ, ನಟಿಯರು ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಅದಕ್ಕಾಗಿ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಅದರಲ್ಲೂ ಸಂಜಯ್ ದತ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಅಭಿನಯಿಸುತ್ತಿದ್ದಾರೆ.

Sanjay Dutt charging record remuneration for Double iSmart film

'KGF'-2 ಬಳಿಕ ಸಂಜಯ್ ದತ್ ನಟನೆಯ ತಮಿಳು ಸಿನಿಮಾ 'ಲಿಯೋ' ರಿಲೀಸ್ ಆಗಿದೆ. ಮುಂದೆ ಪುರಿ ಜಗನ್ನಾಥ್ ನಿರ್ದೇಶನದ ಡಬಲ್ ಇಸ್ಮಾರ್ಟ್ ಶಂಕರ್, ಕನ್ನಡದ 'ಕೆಡಿ' ಸೇರಿದಂತೆ ಹಲವು ಸೌತ್ ಸಿನಿಮಾಗಳಲ್ಲಿ ಸಂಜು ಬಾಬ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ 'ರಾಜಾ ಡೀಲಕ್ಸ್' ಚಿತ್ರದಲ್ಲೂ ಸಂಜು ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ. ನಿಜಕ್ಕೂ ಅಧೀರ ಪಾತ್ರ ಸಂಜುಗೆ ಹೊಸ ದಿಕ್ಕನ್ನೇ ತೋರಿಸಿದೆ. ಹೆಚ್ಚು ಹೆಚ್ಚು ಪೋಷಕ ಪಾತ್ರಗಳು ಅರಸಿ ಬರುವಂತಾಗಿದೆ.

'KGF' ಚಿತ್ರದಲ್ಲಿ ಅಧೀರ ಪಾತ್ರ ಸಂಜಯ್‌ ದತ್‌ಗಾಗಿಯೇ ಪ್ರಶಾಂತ್ ನೀಲ್ ಬರೆದಿದ್ದರು. ಅದೇ ಕಾರಣಕ್ಕೆ ಮೊದಲ ಭಾಗದಲ್ಲಿ ಆ ಪಾತ್ರವನ್ನು ತೋರಿಸದೇ 2ನೇ ಭಾಗಕ್ಕೆ ಕುತೂಹಲ ಕಾಯ್ದುಕೊಂಡಿದ್ದರು. ಫಸ್ಟ್ ಚಾಪ್ಟರ್ ಹಿಟ್ ಆದ್ಮೇಲೆ ಸಂಜು ಬಾಬನ ಒಪ್ಪಿಸುವಲ್ಲಿ ಚಿತ್ರತಂಡ ಗೆದ್ದಿತ್ತು. ಹಾಲಿವುಡ್ ವೈಕಿಂಗ್ಸ್ ಸೀರಿಸ್‌ನಿಂದ ಪ್ರೇರಣೆಗೊಂಡು ಅಧೀರ ಪಾತ್ರವನ್ನು ನೀಲ್ ಡಿಸೈನ್ ಮಾಡಿದ್ದರು.

ಚಾಪ್ಟರ್-2 ಶೂಟಿಂಗ್ ನಡುವೆಯೇ ಸಂಜಯ್ ದತ್ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲಿದರು. ಕೊನೆಗೆ ಚೇತರಿಸಿಕೊಂಡ ಬಾಲಿವುಡ್ ನಟ ಅಧೀರನಾಗಿ ಅಬ್ಬರಿಸಿದ್ದರು. ಆದರೆ ಖಡಕ್ ಆಗಿ ನಟಿಸೋಕೆ ಅವರ ದೇಹ ಅಷ್ಟಾಗಿ ಸಹಕರಿಸಲಿಲ್ಲ. ಆದರೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಿತು. ಸದ್ಯ 'ಲಿಯೋ' ಆಂಟೋನಿ ದಾಸ್ ಪಾತ್ರದಲ್ಲಿ ಸಂಜು ನಟಿಸಿದ್ದಾರೆ. ಮುಂದೆ ಮತ್ತಷ್ಟು ಸೌತ್ ಸಿನಿಮಾಗಳಲ್ಲಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶನದ 'ಡಬಲ್ ಇಸ್ಮಾರ್ಟ್' ಚಿತ್ರದ ಮುಖ್ಯ ಪಾತ್ರಕ್ಕೆ ಸಂಜಯ್ ದತ್ ಆಯ್ಕೆ ಆಗಿದ್ದಾರೆ. ಈ ಪಾತ್ರಕ್ಕೆ 6 ಕೋಟಿ ರೂ. ಸಂಭಾವನೆಯನ್ನು ಸಂಜಯ್ ಪಡೆದುಕೊಂಡಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ. ಪೋಷಕ ಪಾತ್ರಕ್ಕೆ ಇಷ್ಟು ದೊಡ್ಡ ಮೊತ್ತನಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ದಕ್ಷಿಣದ ಚಿತ್ರಗಳಿಗೆ ಸಂಜಯ್ ದತ್ 6 ರಿಂದ 10 ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಕನ್ನಡದಲ್ಲಿ 'KGF-2' ಬಳಿಕ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಸಂಜು ನಟಿಸ್ತಿದ್ದಾರೆ. ಧ್ರುವ ಸರ್ಜಾ ಹೀರೊ ಆಗಿ ನಟಿಸುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ಕೆಡಿ ಧ್ರುವನ ಎದುರು ಸಂಜು ಖಡಕ್ ರೋಲ್‌ನಲ್ಲಿ ಅಬ್ಬರಿಸಲಿದ್ದಾರೆ.

ಮಾರುತಿ ನಿರ್ದೇಶನದಲ್ಲಿ ಪ್ರಭಾಸ್ ಸದ್ದಿಲ್ಲದೇ 'ರಾಜಾ ಡೀಲಕ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ತಾತನ ಪಾತ್ರದಲ್ಲಿ ಬಾಲಿವುಡ್ ನಟ ಬಣ್ಣಹಚ್ಚಿದ್ದಾರೆ ಎನ್ನಲಾಗ್ತಿದೆ. ಇನ್ನು 'ಲೈಗರ್' ಸಿನಿಮಾ ಸೋಲಿನಿಂದ ಹೊರಬರಲು ಪುರಿ ಜಗನ್ನಾಥ್ ಮುಂದಾಗಿದ್ದಾರೆ. ರಾಮ್ ನಟನೆಯ 'ಇಸ್ಮಾರ್ಟ್ ಶಂಕರ್' ಸಿನಿಮಾ ಹಿಟ್ ಆಗಿತ್ತು. ಅದರ ಮುಂದುವರೆದ ಭಾಗ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

More from Filmibeat

English summary
Sanjay Dutt Remuneration For Double iSmart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X