'ಸಂಕ್ರಾಂತಿಕಿ ವಸ್ತುನ್ನಾಂ' ವಾರದ ಕಲೆಕ್ಷನ್ ಘೋಷಣೆ; ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳ ಫಲಿತಾಂಶ ಗೊತ್ತಾಗಿ ಹೋಗಿದೆ. ತೆಲುಗಿನಲ್ಲಿ ಮೂರು ದೊಡ್ಡ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬಂದಿದ್ದವು. ತಮಿಳಿನಲ್ಲಿ ಎರಡು ಸಿನಿಮಾಗಳು ಬಂದರೆ ಕನ್ನಡದಲ್ಲಿ 'ಛೂ ಮಂತರ್' ಚಿತ್ರ ರಿಲೀಸ್ ಆಗಿತ್ತು. 'ಸಂಜು ವೆಡ್ಸ್ ಗೀತಾ'-2 ಹಬ್ಬದ ಬಳಿಕ ಪ್ರೇಕ್ಷಕರ ಮುಂದೆ ಬಂದಿದೆ.

ಕನ್ನಡದ 'ಛೂ ಮಂತರ್' ಸಿನಿಮಾ ತಕ್ಕ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 'ಸಂಜು ವೆಡ್ಸ್ ಗೀತಾ'-2 ಸಿನಿಮಾ ನಿರಾಸೆ ಮೂಡಿಸಿದೆ. 12 ವರ್ಷಗಳ ಬಳಿಕ ತೆರೆಕಂಡ ತಮಿಳಿನ 'ಮದಗಜ ರಾಜ' ಸಿನಿಮಾ ಕೂಡ ಒಂದು ಹಂತಕ್ಕೆ ಗೆದ್ದಿದೆ. ಆದರೆ ತೆಲುಗಿನಲ್ಲಿ ನಿಜವಾದ ಬಾಕ್ಸಾಫೀಸ್ ಫೈಟ್ ಏರ್ಪಟ್ಟಿತ್ತು. ಅಚ್ಚರಿ ಎನ್ನುವಂತೆ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಗೆದ್ದಿದೆ.

Sankranthiki Vasthunam box office collection day 7 Venkatesh film scores good opening week

ಈ ಬಾರಿ ಸುಗ್ಗಿ ಹಬ್ಬಕ್ಕೆ ರಾಮ್‌ಚರಣ್- ಶಂಕರ್ ಜೋಡಿಯ 'ಗೇಮ್ ಚೇಂಜರ್' ಸಿನಿಮಾ ತೆರೆಗಪ್ಪಳಿಸಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಬಾಲಕೃಷ್ಣ ನಟನೆಯ ಮಾಸ್ ಎಂಟರ್‌ಟೈನರ್ 'ಡಾಕು ಮಹಾರಾಜ್' ಅಭಿಮಾನಿಗಳಿಗೆ ಇಷ್ಟವಾದರೂ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರ ಸೆಳೆಯಲಿಲ್ಲ. ಆದರೆ ವಿಕ್ಟರಿ ವೆಂಕಟೇಶ್ ಅಭಿನಯದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಸೈಲೆಂಟ್ ಆಗಿ ಬಂದು ಗೆದ್ದಿದೆ.

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಕಾಮಿಡಿ ಎಂಟರ್‌ಟೈನರ್ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಚಿತ್ರತಂಡವೇ ಅಧಿಕೃತವಾಗಿ ಚಿತ್ರದ ಫಸ್ಟ್ ವೀಕ್ ಕಲೆಕ್ಷನ್ ಲೆಕ್ಕ ಕೊಟ್ಟಿದೆ. ವಿಶ್ವದಾದ್ಯಂತ ಚಿತ್ರದಲ್ಲಿ 7 ದಿನಕ್ಕೆ 203 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಮಡದಿ ಹಾಗೂ ಮಾಜಿ ಪ್ರೇಯಸಿಯ ನಡುವೆ ಸಿಲುಕಿ ಒದ್ದಾಡುವ ಸಸ್ಪೆಂಡ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವೆಂಕಟೇಶ್ ನಟಿಸಿ ಗೆದ್ದಿದ್ದಾರೆ.

ಗಟ್ಟಿ ಕಥೆ ಇಲ್ಲದೇ ಇದ್ದರೂ ಪ್ರೇಕ್ಷಕರನ್ನು ನಗಿಸಲು ಮಾಡಿರುವ ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾಂ'. ಲಾಜಿಕ್ ಎಲ್ಲಾ ಪಕ್ಕಕ್ಕಿಟ್ಟು ಪ್ರೇಕ್ಷಕರು 2 ಗಂಟೆ ನಕ್ಕು ಹಗುರಾಗುವ ಸಿನಿಮಾ ಇದು. ಕರ್ನಾಟಕದಲ್ಲಿ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ತೆಲುಗು ಚಿತ್ರಗಳಿಗೆ ಇಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಈ ಬಾರಿ ಸುಗ್ಗಿ ಸಂಭ್ರಮದಲ್ಲಿ ಬಂದ ವೆಂಕಿ ಚಿತ್ರವನ್ನು ಕೆಲವರು ಮುಗಿಬಿದ್ದು ನೋಡುತ್ತಿದ್ದಾರೆ.

Sankranthiki Vasthunam box office collection day 7 Venkatesh film scores good opening week

'ಸಂಕ್ರಾಂತಿಕಿ ವಸ್ತುನ್ನಾಂ' ಅನಿಲ್ ರಾವಿಪುಡಿ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿರಿಷ್ ಬಂಡವಾಳ ಹೂಡಿದ್ದಾರೆ. ಅಂದಾಜು 50 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಈಗಾಗಲೇ 100 ಕೋಟಿ ರೂ. ಶೇರ್ ತಂದುಕೊಟ್ಟಿದೆ. ಬರೀ ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ದೊಡ್ಡದಾಗಿ ಸದ್ದು ಮಾಡ್ತಿದೆ.

ಚಿತ್ರದಲ್ಲಿ ವೆಂಕಟೇಶ್ ಮಡದಿ ಪಾತ್ರದಲ್ಲಿ ಐಶ್ವರ್ಯ ರಾಜೇಶ್ ನಟಿಸಿದ್ದಾರೆ. ಮಾಜಿ ಪ್ರೇಯಸಿಯಾಗಿ ಮೀನಾಕ್ಷಿ ಚೌಧರಿ ಮಿಂಚಿದ್ದಾರೆ. 'ಗೇಮ್ ಚೇಂಜರ್' ಹಾಗೂ 'ಡಾಕು ಮಹಾರಾಜ್' ಚಿತ್ರಗಳಿಗೆ ಆಗಿದ್ದ ಹಿನ್ನಡೆ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಕ್ಕೆ ವರವಾಗಿದೆ. ಕಳೆದ ಮಂಗಳವಾರ ಹಬ್ಬದೇ ದಿನವೇ ಸಿನಿಮಾ ತೆರೆಗೆ ಬಂದಿತ್ತು. ಫ್ಯಾಮಿಲಿ ಎಂಟರ್‌ಟೈನರ್ ಎಂದಾಕ್ಷಣ ಪ್ರೇಕ್ಷಕರು ಸಿನಿಮಾ ನೋಡಲು ಮುಂದಾಗಿದ್ದರು.

ಕರ್ನಾಟಕದಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಮೊದಲ ವಾರ 9ರಿಂದ 10 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಬಹಳ ದಿನಗಳ ಬಳಿಕ ನಟ ವಿಕ್ಟರಿ ವೆಂಕಟೇಶ್‌ಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ. ಕಳೆದ ಡಿಸೆಂಬರ್‌ನಲ್ಲಿ ತೆರೆಗೆ ಬಂದಿದ್ದ 'ಪುಷ್ಪ'-2 ಸಿನಿಮಾ ಕೂಡ ರಾಜ್ಯದಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು.

More from Filmibeat

English summary
Sankranthiki Vasthunam Karnataka Box Office Collection Day 7;
Read more about: venkatesh box office tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X